Priyanka Chopra: ನಿಕ್​ ಜೊತೆ ಡೇಟಿಂಗ್​ ಮಾಡಲು ಪ್ರಿಯಾಂಕಾ ಭಯಪಟ್ಟಿದ್ದು ಈ ಕಾರಣಕ್ಕಂತೆ!

By Suvarna News  |  First Published Mar 30, 2023, 5:28 PM IST

ತಮಗಿಂತ 10 ವರ್ಷ ಚಿಕ್ಕವರಾಗಿರುವ ನಿಕ್​ ಜೊತೆ ಪ್ರಿಯಾಂಕಾ ಮದುವೆಯಾಗಿದ್ದಾರೆ. ಆದರೆ ಅವರ ಜೊತೆ ಡೇಟಿಂಗ್​ ಮಾಡಲು ಹೆದರಿದ್ದೆ ಎಂದಿದ್ದಾರೆ. ಏಕಿದು? 
 


ನವದೆಹಲಿ: ಸದ್ಯ ಬಾಲಿವುಡ್​ಗೆ ಬೈಬೈ ಹೇಳಿ ಹಾಲಿವುಡ್​ ಆರಿಸಿಕೊಳ್ಳುವ ನಿರ್ಧರಿಸಿರುವ ಪ್ರಿಯಾಂಕಾ ಚೋಪ್ರಾ (Priyanka Chopra) ಬಿ-ಟೌನ್​ನಲ್ಲಿ ಬಹಳ ಸದ್ದು ಮಾಡುತ್ತಿದ್ದಾರೆ. ಬಾಲಿವುಡ್‌ನಲ್ಲಿ ನನ್ನನ್ನ ಮೂಲೆಗುಂಪು ಮಾಡಲಾಗಿತ್ತು. ಹಿಂದಿ ಚಿತ್ರರಂಗದಲ್ಲಿನ ರಾಜಕೀಯದಿಂದ ನಾನು ಬೇಸೆತ್ತಿದ್ದೆ ಎಂಬ ಸತ್ಯವನ್ನು ಇದೀಗ ಪ್ರಿಯಾಂಕಾ ಚೋಪ್ರಾ ಹೇಳಿದ್ದಾರೆ.ನಟಿಸಲು ನನಗೆ ಅವಕಾಶ ನೀಡುತ್ತಿರಲಿಲ್ಲ. ಕೆಲವರ ವಿರೋಧವನ್ನು ಕಟ್ಟಿಕೊಂಡಿದ್ದೆ. ಹೀಗಾಗಿ, ನನಗೆ ಪಾತ್ರಗಳು ಸಿಗುತ್ತಿರಲಿಲ್ಲ. ಕೆಲವರೊಂದಿಗೆ ನಾನು ಕಿತ್ತಾಡಿಕೊಂಡಿದ್ದೆ. ಚಿತ್ರರಂಗದಲ್ಲಿನ ರಾಜಕೀಯದಿಂದ ನಾನು ಬೇಸೆತ್ತಿದ್ದೆ. ಹೀಗಾಗಿ ನನಗೆ ಒಂದು ಬ್ರೇಕ್‌ನ ಅವಶ್ಯಕತೆ ಇತ್ತು ಎಂದಿರುವ ಪ್ರಿಯಾಂಕಾ ಬಾಲಿವುಡ್​ನಲ್ಲಿ ದೊಡ್ಡ ಹಂಗಾಮ ಸೃಷ್ಟಿಸಿದ್ದಾರೆ.

ಈ ಹಿಂದೆ ಕಪ್ಪು ಚರ್ಮದಿಂದ ತಮಗೆ ಬಾಡಿಷೇಮ್​  ಮಾಡಿದ್ದನ್ನೂ ಅವರು ಮಾತನಾಡಿದ್ದರು. 'ನನ್ನನ್ನು ಅನೇಕರು ಬ್ಲ್ಯಾಕ್ ಕ್ಯಾಟ್ (ಕರಿ ಬೆಕ್ಕು Black Cat) ಎಂದು ಕರೆಯುತ್ತಿದ್ದರು. ನನ್ನ ಚರ್ಮದ ಬಣ್ಣವನ್ನು ಟೀಕಿಸುತ್ತಿದ್ದರು. ಬಣ್ಣದ ಬಗೆಗಿನ ಗೀಳು ಭಾರತಕ್ಕೆ ಬಂದಿದ್ದು ಬ್ರಿಟಿಷರಿಂದ. ಅವರು ಬಿಟ್ಟು ಹೋದರೂ ಬಣ್ಣದ ಗೀಳು ಕಡಿಮೆ ಆಗಿಲ್ಲ' ಎಂದಿದ್ದಾರೆ. ಮೈಬಣ್ಣದ ಆಧಾರದಮೇಲೆ ಗುಣಮಟ್ಟವನ್ನು ಅಳೆಯಬಾರದು. ಇದು ಬದಲಾಗಬೇಕು ಎಂದು ಅವರು ವೇದಿಕೆಯಲ್ಲಿ ಹೇಳಿದ್ದಾರೆ. 'ನಾನು ಅಷ್ಟು ಸುಂದರವಾಗಿಲ್ಲ ಎಂದು ನನಗೆ ಅನಿಸುತ್ತಿತ್ತು. ನಾನು ತುಂಬಾ ಕಷ್ಟಪಟ್ಟು ಕೆಲಸ ಮಾಡಬೇಕೆಂದು ನಂಬಿದವಳು. ಆದರೆ ನನ್ನ ಚರ್ಮದ ಬಣ್ಣದಿಂದ ತುಂಬಾ  ಹಿಂಸೆ ಅನುಭವಿಸಿದೆ' ಎಂದಿದ್ದರು. ಇದರ ನಡುವೆಯೇ ಪ್ರಿಯಾಂಕಾ ತಮ್ಮ ಮತ್ತು ಪತಿ ನಿಕ್​ ಜಾನ್​ ಕುರಿತು ವಿಶೇಷ ಮಾಹಿತಿಯೊಂದನ್ನು ಶೇರ್​ ಮಾಡಿಕೊಂಡಿದ್ದಾರೆ.  

Tap to resize

Latest Videos

ಎಲ್ಲರಿಗೂ ತಿಳಿದಿರುವಂತೆ, ಅಮೆರಿಕದ ಗಾಯಕ ನಿಕ್​ ಜೋನಾಸ್​ (Nick Jonas) ಹಾಗೂ ನಟಿ ಪ್ರಿಯಾಂಕಾ ಚೋಪ್ರಾ ಅವರಿಗೆ 10 ವರ್ಷಗಳ ಅಂತರವಿದೆ. ನಿಕ್​, ಪ್ರಿಯಾಂಕಾಗಿಂತ 10 ವರ್ಷ ಚಿಕ್ಕವರು. ಮದುವೆಯ ಸಂದರ್ಭದಲ್ಲಿ ಪ್ರಿಯಾಂಕಾಗೆ 36 ವರ್ಷವಾಗಿದ್ದರೆ ನಿಕ್​ಗೆ 25 ವರ್ಷ ವಯಸ್ಸಾಗಿತ್ತು. ಈ ಕುರಿತು ಪ್ರಿಯಾಂಕಾ ತಿಳಿಸಿದ್ದಾರೆ. ಡ್ಯಾಕ್ಸ್ ಶೆಫರ್ಡ್‌ನ ಪಾಡ್‌ಕ್ಯಾಸ್ಟ್ ಆರ್ಮ್‌ಚೇರ್ ಎಕ್ಸ್‌ಪರ್ಟ್‌ನಲ್ಲಿ ಮಾತನಾಡಿದ ಪ್ರಿಯಾಂಕಾ,  ನಟಿ ಅವರು ಆರಂಭದಲ್ಲಿ ನಿಕ್ ಜೊತೆ ಡೇಟಿಂಗ್ ಮಾಡಲು ಬಯಸಲಿಲ್ಲ ಎಂಬ ವಿಷಯವನ್ನು ಬಹಿರಂಗಪಡಿಸಿದ್ದಾರೆ.  ಇವರಿಬ್ಬರೂ  2018 ರಲ್ಲಿ  ಭೇಟಿಯಾದರು ಮತ್ತು ವರ್ಷದ ಅಂತ್ಯದ ವೇಳೆಗೆ ಮದುವೆಯಾದರೂ.  ಆದರೂ ನಟಿ ಆರಂಭದಲ್ಲಿ, ಅಮೇರಿಕನ್ ಗಾಯಕನೊಂದಿಗೆ ಡೇಟಿಂಗ್ ಮಾಡುವ ನಿರೀಕ್ಷೆಯ ಬಗ್ಗೆ ಸಂದೇಹವಿತ್ತು ಎಂದು ಹೇಳಿದ್ದಾರೆ.    

Priyanka Chopra: ನಿನ್ನದು ಸ್ಯಾಂಪಲ್​ ಸೈಜ್​ ಅಲ್ಲ ಎಂದ್ರು, ಪತಿಯ ಮುಂದೆ ಬಿಕ್ಕಿ ಬಿಕ್ಕಿ ಅತ್ತೆ ಎಂದ ಪಿಂಕಿ

ಈ ಕುರಿತು ಮಾತನಾಡಿದ ಅವರು, ನಾವಿಬ್ಬರೂ  2018 ರ ನವೆಂಬರ್​ನಲ್ಲಿ ಮದುವೆಯಾದೆವು. ಇದಕ್ಕೂ ಮುನ್ನ ಅವರ ಜೊತೆ ಡೇಟಿಂಗ್​  ಮಾಡಲು ನನಗೆ ಭಯವಾಗಿತ್ತು. ಏಕೆಂದರೆ ನನಗೆ ಮಕ್ಕಳೆಂದರೆ ತುಂಬಾ ಇಷ್ಟ. ಮಕ್ಕಳು ಬೇಕು ಎಂದು ನನಗೆ ಯಾವಾಗಲೂ ತಿಳಿದಿತ್ತು.  ನಿಕ್ ಜೊತೆ ಡೇಟಿಂಗ್ (Dating) ಮಾಡಲು ಬಯಸದಿರಲು ಇದೂ ಒಂದು ಕಾರಣವಾಗಿತ್ತು. ಏಕೆಂದರೆ  ಆಗ ಅವರಿಗಿನ್ನೂ 25 ವರ್ಷ ವಯಸ್ಸು. ಇಷ್ಟು ಚಿಕ್ಕ ವಯಸ್ಸಿನಲ್ಲಿ ಅವರು ಮಕ್ಕಳು ಬೇಡ ಎಂದರೆ ಏನು ಮಾಡುವುದು ಎಂದು ತಿಳಿದಿರಲಿಲ್ಲ. ಆದರೆ ಅವರು ನನಗೆ ತುಂಬಾ ಸಪೋರ್ಟ್​ ಮಾಡಿದರು ಎಂದು ಪ್ರಿಯಾಂಕಾ ಹೇಳಿದರು.

 ನಾನು ಮಕ್ಕಳನ್ನು ಪ್ರೀತಿಸುತ್ತೇನೆ, ನಾನು UNICEF ನಲ್ಲಿ ಮಕ್ಕಳೊಂದಿಗೆ ಕೆಲಸ ಮಾಡಿದ್ದೇನೆ, ನಾನು ಮಕ್ಕಳ ಆಸ್ಪತ್ರೆಗಳಲ್ಲಿ ಸ್ವಯಂಸೇವಕಿಯಾಗಿದ್ದೇನೆ. ಆದ್ದರಿಂದ ಮಕ್ಕಳೆಂದರೆ ತುಂಬಾ ಇಷ್ಟ. ನಿಕ್​ ತುಂಬಾ  ಚಿಕ್ಕವರಾದ್ದರಿಂದ ಅವರು ಮಕ್ಕಳ ಬಗ್ಗೆ ಏನೆನ್ನುತ್ತಾರೋ ಎನ್ನುವ ಭಯವಿತ್ತು. ಆದರೆ ಇದರ ಮಧ್ಯೆಯೇ ಅಂಡಾಣು ಶೇಖರಣೆ ಮಾಡಿಡುವಂತೆ ನಮ್ಮ ತಾಯಿ ತಿಳಿಸಿದ್ದರು. ಅದರಂತೆ ಅದನ್ನು ಶೇಖರಣೆ ಮಾಡಿ ಇಟ್ಟಿದ್ದೆ. ಅದರ ಫಲವಾಗಿ ಇಂದು ನಾವು  ಮಾಲ್ತಿ ಮೇರಿ ಎಂಬ ಪುಟಾಣಿಗೆ ಅಪ್ಪ-ಅಮ್ಮ ಆಗಿದ್ದೇವೆ ಎಂದರು.

Priyanka chopra ಮೂವತ್ತರ ವಯಸ್ಸಿಂದಲೇ ಅಂಡಾಣು ಸಂಗ್ರಹಿಸುತ್ತಿದ್ದದ್ದೇಕೆ?
 
ಪ್ರಿಯಾಂಕಾ ಮುಂದಿನ ರುಸ್ಸೋ ಬ್ರದರ್ಸ್ ಸಿಟಾಡೆಲ್​ನಲ್ಲಿ ಕಾಣಿಸಿಕೊಳ್ಳಲಿದ್ದಾರೆ, ಇದು ರಿಚರ್ಡ್ ಮ್ಯಾಡೆನ್ ಸಹ ನಟಿಸಿರುವ ವೈಜ್ಞಾನಿಕ ವೆಬ್ ಸರಣಿಯಾಗಿದೆ. ಇದು ಏಪ್ರಿಲ್ 28 ರಂದು ಪ್ರೈಮ್ ವಿಡಿಯೋದಲ್ಲಿ ಬಿಡುಗಡೆಯಾಗಲಿದೆ. ಈ ವರ್ಷದ ಕೊನೆಯಲ್ಲಿ ಬಿಡುಗಡೆಯಾಗಲಿರುವ ರೋಮ್ ಕಾಮ್ ಲವ್ ಎಗೇನ್‌ನಲ್ಲಿಯೂ ಅವರು ಕಾಣಿಸಿಕೊಳ್ಳಲಿದ್ದಾರೆ.

click me!