ಸಿದ್ಧಗಂಗಾದ 'ಅನ್ನದ ಬೆಲೆ' ಬಾಲಕನಿಗೆ ಗಣೇಶ್ ಬೋಲ್ಡ್!

Published : Jan 24, 2019, 02:15 PM ISTUpdated : Jan 24, 2019, 02:17 PM IST
ಸಿದ್ಧಗಂಗಾದ 'ಅನ್ನದ ಬೆಲೆ' ಬಾಲಕನಿಗೆ ಗಣೇಶ್ ಬೋಲ್ಡ್!

ಸಾರಾಂಶ

ಅತ್ತ ಸಿದ್ಧಗಂಗಾದ ಶತಮಾನದ ಸಂತ ಲಿಂಗೈಕ್ಯರಾದರೆ, ಇತ್ತ ಮಠದ ಬಾಲಕನೊಬ್ಬ 'ಅನ್ನದ ಬೆಲೆ' ಬಗ್ಗೆ ಅರಿವು ಮೂಡಿಸಿದ ವೀಡಿಯೋವೊಂದು ವೈರಲ್ ಆಗಿತ್ತು. ಈ ಬಾಲಕನ ಬಗ್ಗೆ ಗೋಲ್ಡನ್ ಸ್ಟಾರ್ ಗಣೇಶ್ ಹೇಳಿದ್ದಿಷ್ಟು....

ಸಿದ್ಧಗಂಗಾ ಮಠದ ಮಕ್ಕಳ ಆಸ್ತಿಯೇ ಭಯ, ಭಕ್ತಿ ಹಾಗೂ ಶ್ರದ್ಧೆ. ಜತೆಗೆ ಅವರಿಗೆ ಅನ್ನ ಹಾಗೂ ಭೂಮಿ ಬೆಲೆಯನ್ನು ಕಲಿಸಿ, ಅತ್ಯುತ್ತಮ ಸಂಸ್ಕಾರ ನೀಡಿದ ಸಿದ್ಧಗಂಗಾ ಶ್ರೀಗಳು 'ನಡೆದಾಡುವ ದೇವರು' ಎಂಬ ಕೀರ್ತಿಗೆ ಪಾತ್ರರಾದರು. ಮಠದ ಮಕ್ಕಳಿಗಿರೋ ಅನ್ನಬ್ರಹ್ಮದ ಮೇಲಿನ ಪ್ರೀತಿ ಇತ್ತೀಚೆಗೆ ವೈರಲ್ ಆದ ವೀಡಿಯೋ ಮೂಲಕ ಜಗಜ್ಜಾಹೀರವಾಗಿತ್ತು. ಆ ಮೂಲಕ ಸಿದ್ಧಗಂಗೆ ಮೇಲಿನ ಗೌರವ ಮತ್ತಷ್ಟು ಹೆಚ್ಚುವಂತಾಯಿತು. ಈ ವಿದ್ಯಾರ್ಥಿಯ ನಡೆಗೆ ಎಲ್ಲೆಡೆ ಪ್ರಶಂಸೆಯಾದ ಬೆನ್ನಲ್ಲೇ, ಗೋಲ್ಡನ್ ಸ್ಟಾರ್ ಗಣೇಶ್ ಸಹ ಶ್ಲಾಘಿಸಿದ್ದಾರೆ.

ಅನ್ನ ಚೆಲ್ಲಬೇಡಿ...ಮಠದ ಆವರಣದಲ್ಲಿ ಆಹಾರದ ಮಹತ್ವ ಸಾರಿದ ಬಾಲಕ

'ಅನ್ನದ ಬೆಲೆ ಸಿದ್ಧಗಂಗಾ ಮಠದ ಮಕ್ಕಳಿಗೆ ಗೊತ್ತು. ಇಂದು ದಾಸೋಹದಲ್ಲಿ ಕಂಡ ದೃಶ್ಯ,' ಎಂದು ಬಾಲಕ ಹಿರಿಯರೊಬ್ಬರಿಗೆ ಅನ್ನದ ಬೆಲೆಯನ್ನು ತಿಳಿಸಿರುವ ವೀಡಿಯೋವನ್ನು ಅಪ್‌ಲೋಡ್ ಮಾಡಿದ್ದಾರೆ.

 

ಇದನ್ನು ನಟ ರವಿಶಂಕರ್ ಗೌಡ ಕೂಡ ಟ್ವೀಟ್ ಮಾಡಿ, 'ಶ್ರೀಗಳ ಮಠದಲ್ಲಿ ಅನ್ನದ ಬೆಲೆಯನ್ನು ಹೇಗೆ ತಿಳಿಸುತ್ತಾರೆ ಮಕ್ಕಳು....ನೀವೇ ನೋಡಿ..." ಎಂದಿದ್ದಾರೆ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಬಾಲಿವುಡ್ ನಿರ್ದೇಶಕ ವಿಕ್ರಂ ಭಟ್, ಪತ್ನಿ ಶ್ವೇತಾಂಬರಿ ಭಟ್ ಬಂಧನ; ಅಂತಿಂಥ ವಂಚನೆ ಕೇಸಲ್ಲ ಇದು ಅಂತೀರಾ?!
'ಧಂ' ಬೇಕಲೇ ಎಂದಿದ್ದ ದರ್ಶನ್‌ಗೆ ಟಾಂಗ್ ಕೊಟ್ರಾ ಸುದೀಪ್? ಏನಿದು ಮಾರ್ಕ್ ಡೈಲಾಗ್ ಮರ್ಮ?