ಘೋಸ್ಟ್ ಸೇರಿ ಸೂಪರ್ ಹಿಟ್ ಸಿನಿಮಾ ನೀಡಿದ ನಟಿ ಅನನ್ಯಾ ರಾಜ್ ಸಾವು, 27ರ ನಟಿಗೆ ಏನಾಯಿತು?

Published : Aug 16, 2026, 07:44 PM IST
Actress Ananya Raj Dies at 27

ಸಾರಾಂಶ

ಘೋಸ್ಟ್ ಸೇರಿದಂತೆ ಸೂಪರ್ ಹಿಟ್ ಸಿನಿಮಾಗಳ ಮೂಲಕ ಜನಪ್ರಿಯವಾಗಿದ್ದ 27ರ ಹರೆಯದ ನಟಿ ಅನನ್ಯಾ ರಾಜ್ ಸಾವು. ನಿಧನ ಸುದ್ದಿಯನ್ನು ಅನನ್ಯಾ ರಾಜ್ ಕುಟುಂಬಸ್ಥರು ಅಧಿಕೃತವಾಗಿ ಹಂಚಿಕೊಂಡಿದ್ದಾರೆ. ಯುವ ನಟಿಗೆ ಏನಾಯಿತು?

ಮುಂಬೈ (ಆ.16) ಬಾಲಿವುಡ್‌ನ ಘೋಸ್ಟ್, ತೆಲುಗಿನ ತೆಗ್ಗದೆ ಲೇ ಸೇರಿದಂತೆ ಹಲವು ಸಿನಿಮಾಗಳ ಮೂಲಕ ಜನಪ್ರಿಯರಾಗಿದ್ದ ನಟಿ ಅನನ್ಯಾ ರಾವ್ ನಿಧನರಾಗಿದ್ದಾರೆ. 27ರ ಹರೆಯದ ಉದೋನ್ಮುಖ ನಟಿ ಅನನ್ಯಾ ರಾಜ್ ಸಾವಿನ ಸುದ್ದಿಯನ್ನು ಕುಟುಂಬಸ್ಥರು ಅಧಿಕೃತವಾಗಿ ಖಚಿತಪಡಿಸಿದ್ದಾರೆ. ಅನನ್ಯಾ ರಾಜ್ ಸಾವಿನ ಸುದ್ದಿ ಹೊರಬೀಳುತ್ತಿದ್ದಂತೆ ಸಿನಿಮಾ ಲೋಕದ ದಿಗ್ಗಜರು, ಅಭಿಮಾನಿಗಳು ಆಘಾತ ವ್ಯಕ್ತಪಡಿಸಿದ್ದಾರೆ. ಇದ್ದಕ್ಕಿದ್ದಂತೆ ನಟಿಗೆ ಏನಾಯಿತು ಎಂದು ಪ್ರಶ್ನಿಸಿದ್ದಾರೆ.

ಜುಲೈ 15ಕ್ಕೆ ಸಾವು, ಒಂದು ತಿಂಗಳ ಬಳಿಕ ಬಹಿರಂಗಪಡಿಸಿದ ಕುಟುಂಬ

ಅನನ್ಯಾ ರಾಜ್ ಸಾವಿನ ಸುದ್ದಿಯನ್ನು ಕುಟುಂಬಸ್ಥರು ಹಂಚಿಕೊಂಡಿದ್ದಾರೆ. ಅನನ್ಯಾ ರಾವ್ ಅಧಿಕೃತ ಇನ್‌ಸ್ಟಾಗ್ರಾಂ ಖಾತೆ ಮೂಲಕ ಈ ಮಾಹಿತಿ ಹಂಚಿಕೊಂಡಿದ್ದಾರೆ. ಅನನ್ಯಾ ರಾವ್ ಜುಲೈ 15ರಂದೇ ಮೃತಪಟ್ಟಿದ್ದಾರೆ. ಆದರೆ ತೀವ್ರ ನೋವಿನಲ್ಲಿದ್ದ ಕುಟುಂಬದ ಖಾಸಗಿತನ , ಗೌಪ್ಯತೆ ಕಾರಣದಿಂದ ಮಾಹಿತಿ ಬಹಿರಂಗಪಡಿಸಿರಲಿಲ್ಲ. ಒಂದು ತಿಂಗಳ ಬಳಿಕ ಕುಟುಂಬಸ್ಥರು ಸಾವಿನ ಮಾಹಿತಿಯನ್ನು ಖಚಿತಪಡಿಸಿದ್ದಾರೆ.

ಕುಟುಂಬದಿಂದ ಭಾವುಕ ಸಂದೇಶ

ಅನನ್ಯಾ ರಾಜ್ ಕುಟುಂಬದಿಂದ ಈ ಪೋಸ್ಟ್ ಮಾಡಲಾಗುತ್ತಿದೆ.ತೀವ್ರ ನೋವು, ದುಃಖದಿಂದ ಈ ಮಾಹಿತಿ ನೀಡುತ್ತಿದ್ದೇವೆ. ಅನನ್ಯಾ ರಾಜ್ ಕಳೆದ ಜುಲೈ 15ರಂದು ನಿದ್ದೆಯಲ್ಲಿರುವಾಗಲೇ ನಿಧನರಾಗಿದ್ದಾರೆ. ಕಳೆದೊಂದು ವರ್ಷದಿಂದ ಅನನ್ಯಾ ರಾಜ್ ಮಾನಸಿಕ ಸಮಸ್ಯೆ ಸೇರಿದಂತೆ ಹಲವು ಆರೋಗ್ಯ ಸಮಸ್ಯೆಗಳಿಂದ ಬಳಲಿದ್ದರು. ಆದರೆ ಅನನ್ಯಾ ರಾಜ್ ಧೈರ್ಯವಂತೆ ಹುಡುಗಿಯಾಗಿದ್ದಳು. ಒಂದು ವರ್ಷದಿಂದ ಸತತ ಹೋರಾಟ ಮಾಡಿದ್ದಳು. ಈ ಕಠಿಣ ಸಂದರ್ಭದಲ್ಲಿ ಕುಟುಂಬದ ಗೌಪತ್ಯ, ಖಾಸಗೀತನವನ್ನು ಗೌರವಿಸಬೇಕಾಗಿ ಅಭಿಮಾನಿಗಳಲ್ಲಿ ಕುಟುಂಬಸ್ಥರು ಮನವಿ ಮಾಡಿದ್ದಾರೆ.

ಮುಂಬೈನಲ್ಲಿ ಹುಟ್ಟಿ ಬೆಳೆದ ಅನನ್ಯಾ ರಾಜ್ ಬಾಲಿವುಡ್ ಸೇರಿದಂತೆ ಹಲವು ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ. 2026ರಲ್ಲಿ 7 ಅವರ್ಸ್ ಟು ಗೋ ಸಿನಿಮಾ ಮೂಲಕ ಬಾಲಿವುಡ್‌ಗೆ ಎಂಟ್ರಿಕೊಟ್ಟಿದ್ದರು. ದಿ ಫೈನಲ್ ಎಕ್ಸಿಟ್, ಘೋಸ್ಟ್ ಮೂಲಕ ಜನರ ಮೆಚ್ಚುಗೆಗೆ ಪಾತ್ರರಾಗಿದ್ದರು. ತೆಲುಗಿನ ತಗ್ಗೆದೇ ಲೇ ಸೇರಿದಂತೆ ಕೆಲ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಕಳೆದ ಒಂದು ವರ್ಷದಿಂದ ಅನನ್ಯಾ ರಾಜ್ ಎಲ್ಲೂ ಕಾಣಿಸಿಕೊಂಡಿರಲಲ್ಲ. ಇನ್‌ಸ್ಟಾಗ್ರಾಂ ಪೋಸ್ಟ್ ಮೂಲಕ ಕಾಣಿಸಿಕೊಂಡರೂ ಬಹಿರಂಗವಾಗಿ ಅತೀ ವಿರಳವಾಗಿದ್ದರು. ಮಾನಸಿಕ ಸಮಸ್ಯೆಯಿಂದ ಬಳಸಿದ ಅನನ್ಯಾ ರಾಜ್ ನಿಧನಕ್ಕೆ ಸಿನಿಮಾ ಗಣ್ಯರು ಸಂತಾಪ ಸೂಚಿಸಿದ್ದಾರೆ.

ನಟಿ ನಿಧನಕ್ಕೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ. ಇತ್ತ ಸೋಶಿಯಲ್ ಮೀಡಿಯಾಗಳಲ್ಲಿ ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ. ಯಾಕೆ ಹೀಗಾಗುತ್ತಿದೆ, ಹಲವು ನಟಿಯರು, ಪ್ರಮುಖರು ಮಾನಸಿಕ ಸಮಸ್ಯೆಗಳಿಂದ ಬಳಲಿದರೆ ಜನಸಾಮಾನ್ಯರ ಗತಿ ಏನು? ಇದಕ್ಕೆ ಪರಿಹಾರವೇನು ಎಂಬುದು ಇದೀಗ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆಯಾಗುತ್ತಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Cinema: ಬೆಂಗಳೂರಿನಿಂದ ನಟನಾದವನ 90ರ ದಶಕದ ಚಿತ್ರ ರೀ-ರಿಲೀಸ್; ಹಳೇ ಪ್ರೊಜೆಕ್ಟರ್‌ನಲ್ಲಿ ಸಿನಿಮಾ ನೋಡಲು ಥಿಯೇಟರ್‌ಗೆ ಮುಗಿಬಿದ್ದ ಜನ!
Aap Ki Adalat ಷೋನಲ್ಲೂ ದಾಖಲೆ ಬರೆದ ಯಶ್​: 34 ವರ್ಷಗಳಲ್ಲಿ ಮೊದಲ ಬಾರಿಗೆ ಇತಿಹಾಸ ಸೃಷ್ಟಿ