‘ಸಂಜು’ಗೆ ಎದುರಾಯ್ತು ಭೂಗತ ಪಾತಕಿಯಿಂದ ಕಂಟಕ

Published : Jul 27, 2018, 01:07 PM ISTUpdated : Jul 27, 2018, 01:54 PM IST
‘ಸಂಜು’ಗೆ ಎದುರಾಯ್ತು ಭೂಗತ ಪಾತಕಿಯಿಂದ ಕಂಟಕ

ಸಾರಾಂಶ

ಬಾಕ್ಸಾಫೀಸ್ ಕೊಳ್ಳೆ ಹೊಡೆದ, ಹೊಡೆಯುತ್ತಿರುವ ಸಂಜು ಚಿತ್ರಕ್ಕೆ ಕಂಟಕ ಎದುರಾಗಿದೆ. ತನ್ನ ಪಾತ್ರವನ್ನು ಕೆಟ್ಟದಾಗಿ ತೋರಿಸಲಾಗಿದೆ ಎಂದು ಭೂಗತ ಪಾತಕಿ ಅಬುಸಲೇಂ ಚಿತ್ರ ತಂಡಕ್ಕೆ ನೋಟಿಸ್ ಕಳಿಸಿದ್ದಾನೆ.

ಮುಂಬೈ[ಜು.27]  ಖ್ಯಾತ ಬಾಲಿವುಡ್ ನಟ ಸಂಜಯ್ ದತ್ ಜೀವನಾಧಾರಿತ ಚಿತ್ರ 'ಸಂಜು' ಚಿತ್ರಕ್ಕೆ ಕಂಟಕ ಎದುರಾಗಿದ್ದು, ಚಿತ್ರದಲ್ಲಿ ತನ್ನ ಬಗ್ಗೆ ಸುಳ್ಳು ಮಾಹಿತಿ ನೀಡಲಾಗಿದೆ ಎಂದು ಭೂಗತ ಪಾತಕಿ ಅಬುಸಲೇಂ ಆರೋಪಿಸಿದ್ದಾನೆ.

ಮುಂಬೈ ಸರಣಿ ಬಾಂಬ್ ಸ್ಫೋಟ ಮತ್ತು ಅಕ್ರಮ ಶಸ್ತ್ರಾಸ್ತ್ರ ಪ್ರಕರಣದದಲ್ಲಿ ಜೈಲು ಪಾಲಾಗಿರುವ ಅಬುಸಲೇಂ ಸಂಜು ಚಿತ್ರ ತಯರಿಕರಿಗೆ ವಕೀಲರ ಮೂಲಕ ನೋಟಿಸ್ ನೀಡಿದ್ದಾನೆ. ಚಿತ್ರದಲ್ಲಿನ ಸಂಜು ಪಾತ್ರವನ್ನು ವೈಭವೀಕರಿಸಲು ತನ್ನ ಪಾತ್ರದ ಅವಹೇಳನ ಮಾಡಿರುವುದಲ್ಲದೇ ಕೆಟ್ಟದಾಗಿ ಚಿತ್ರಿಸಲಾಗಿದೆ ಎಂದು ಆರೋಪಿಸಿದ್ದಾನೆ.

ಚಿತ್ರ ತಂಡಕ್ಕೆ 15 ದಿನಗಳ ಕಾಲಾವಕಾಶ ನೀಡಲಾಗಿದೆ ಎಂದು ತಿಳಿದುಬಂದಿದೆ.  ಸಂಜಯ್ ದತ್ ಅವರ ವೈಯುಕ್ತಿಕ ಜೀವನ, ಸಿನಿಮಾ ವೃತ್ತಿ ಜೀವನ, ಅವರ ಗೆಳತಿಯರು ಮತ್ತು ಜೈಲು ವಾಸಗಳ ಕುರಿತು ಸಂಜು ಚಿತ್ರದಲ್ಲಿ ಸೂಕ್ಷ್ಮವಾಗಿ ಚಿತ್ರಿಸಲಾಗಿದೆ. ಅಂತೆಯೇ ಮುಂಬೈ ಸರಣಿ ಸ್ಫೋಟ ಮತ್ತು ಅಕ್ರಮ ಶಸ್ತ್ರಾಸ್ತ್ರ ಹೊಂದಿದ ಆರೋಪಕ್ಕೆ ಸಂಬಂಧಿಸಿದಂತೆ ಸಂಜಯ್ ದತ್ ಜೈಲು ಶಿಕ್ಷೆ ಅನುಭವಿಸಿದ್ದರು. ಗ್ಯಾಂಗ್ ಸ್ಟರ್ ಗಳ ಕುರಿತು ಚಿತ್ರದಲ್ಲಿ ಉಲ್ಲೇಖ ಬರುವಾಗ ಅಬುಸಲೇಂ ಪಾತ್ರ ಬಂದು ಹೋಗುತ್ತದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

BBK 12:‌ ಈ ಬಾರಿ ಕಡ್ಡಿ ತುಂಡು ಮಾಡಿದಂತೆ ಖಡಕ್‌ ಆಗಿ, ಇದ್ದಿದ್ದನ್ನು ಇದ್ದಹಾಗೆ ಹೇಳಿದ ಕಿಚ್ಚ ಸುದೀಪ್
ವೀಕ್ಷಕರ ಬೇಸರಕ್ಕೆ ಕಾರಣವಾದ ಸಿದ್ದೇಗೌಡ-ಭಾವನಾ ಗೃಹಪ್ರವೇಶ; ಯಾಕಿಷ್ಟು ಮಿಸ್‌ಟೇಕ್?