ಕಂಡಕ್ಟರ್ ಮಗ ಯಶ್ ಸಾಧನೆ ಕೊಂಡಾಡಿದ ರಾಜಮೌಳಿ

Published : Dec 10, 2018, 05:51 PM ISTUpdated : Dec 10, 2018, 05:54 PM IST
ಕಂಡಕ್ಟರ್ ಮಗ ಯಶ್  ಸಾಧನೆ ಕೊಂಡಾಡಿದ ರಾಜಮೌಳಿ

ಸಾರಾಂಶ

ಯಶ್ ಸಾಧನೆ ಕೊಂಡಾಡಿದ ರಾಜಮೌಳಿ | ಕೆಜಿಎಫ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ರಾಜಮೌಳಿ | 

ಬೆಂಗಳೂರು (ಡಿ. 10): ಕೆಜಿಎಫ್ ಸಿನಿಮಾ ಭಾರೀ ಹವಾ ಎಬ್ಬಿಸಿದೆ. ಬಾಲಿವುಡ್, ಕಾಲಿವುಡ್, ಟಾಲಿವುಡ್ ಸಿನಿಮಾ ಮಂದಿಯೆಲ್ಲಾ ಸ್ಯಾಂಡಲ್ ವುಡ್ ಕಡೆ ಮುಖ ಮಾಡುವಂತೆ ಮಾಡಿದೆ. ರಾಕಿಂಗ್ ಸ್ಟಾರ್ ಯಶ್ ಕೂಡಾ ಸದ್ದು ಮಾಡುತ್ತಿದ್ದಾರೆ. ತಮ್ಮದೇ ಆದ ಹವಾ ಸೃಷ್ಟಿಸಿದ್ದಾರೆ. 

ರಾಮಚಾರಿ ಜೋಡಿ 2ನೇ ಮದುವೆ ವಾರ್ಷಿಕೋತ್ಸವ!

ಕೆಜಿಎಫ್ ಪ್ರಿ- ರಿಲೀಸ್ ಈವೆಂಟನ್ನು ಹೈದರಾಬಾದ್ ನಲ್ಲಿ ಆಯೋಜಿಸಲಾಗಿತ್ತು. ಖ್ಯಾತ ನಿರ್ದೇಶಕ ರಾಜಮೌಳಿ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಕೆಜೆಎಫ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಾ ಮಾತನಾಡುವ ವೇಳೆ, ‘ಯಶ್ ಯಶಸ್ಸಿನ ಬಗ್ಗೆ ಹೆಮ್ಮೆ ಪಡುತ್ತೇನೆ. ಯಶ್ ಇಲ್ಲಿಯವರೆಗೆ ನಡೆದುಬಂದ ಹಾದಿಯ ಬಗ್ಗೆ ನೆನೆಸಿಕೊಳ್ಳುತ್ತಾ, ಬಸ್ ಡ್ರೈವರ್ ಮಗನೊಬ್ಬ ಇಂದು ಕನ್ನಡ ಚಿತ್ರರಂಗದ ಸ್ಟಾರ್ ನಟರಾಗಿದ್ದಾರೆ. ನಿಜಕ್ಕೂ ಯಶ್ ಬೆಳೆದ ಬಂದ ಹಾದಿಯನ್ನು ನೋಡಿದ್ರೆ ಹೆಮ್ಮೆ ಎನಿಸುತ್ತದೆ‘ ಎಂದು ರಾಜಮೌಳಿ ಹೇಳಿದ್ದಾರೆ. 

ಯಶ್ ಇನ್‌ಸ್ಟಾಗ್ರಾಮ್‌ಗೆ ಶೇರ್ ಮಾಡಿದ ಮೊದಲ ಫೋಟೋ ನೋಡಿದ್ರಾ?


 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

2006ರಲ್ಲಿ 'ಮುಂಗಾರು ಮಳೆ', 2026ರಲ್ಲಿ 'ಪ್ರೇಮದ ಊರಲಿ': ಕನ್ನಡ ಚಿತ್ರರಂಗ ಗೆಲ್ಲಿಸಿದ 3 ಸಾಮ್ಯತೆಗಳು!
9.2 ಸಿನಿಮಾ ರೇಟಿಂಗ್; ಮನೋವೈದ್ಯನ ಕೈಗೆ ಸಿಕ್ಕ ಹುಚ್ಚಿ, ಹಾಡುಗಳಿಲ್ಲದ ಇಂಗ್ಲೀಷ್ ಸಿನಿಮಾದಂತಿದೆ ಚಿತ್ರಕಥೆ!