ಗಾಂಧಿನಗರದಲ್ಲಿ ದೃವ ಸರ್ಜಾ ಬಗ್ಗೆ ಹರಿದಾಡುತ್ತಿದೆ ಮತ್ತೊಂದು ಮಾತು ?

Published : Oct 31, 2017, 06:55 PM ISTUpdated : Apr 11, 2018, 12:43 PM IST
ಗಾಂಧಿನಗರದಲ್ಲಿ ದೃವ ಸರ್ಜಾ ಬಗ್ಗೆ ಹರಿದಾಡುತ್ತಿದೆ ಮತ್ತೊಂದು ಮಾತು ?

ಸಾರಾಂಶ

ಅರ್ಜುನ್ ಸರ್ಜಾ ಬ್ಯಾನರ್​ನಲ್ಲಿ ದೃವ ಸರ್ಜಾ 6 ನೇ ಸಿನಿಮಾ ಮಾಡಲಿದ್ದಾರೆ. ಇದೀಗ ಏಳನೇ ಸಿನಿಮಾನೂ ಫಿಕ್ಸ್ ಆಗಿದೆ. ಅದೂ ಚಿರಂಜೀವಿ ಸರ್ಜಾ- ದೃವ ಸರ್ಜಾ ಹೋಂ ಬ್ಯಾನರ್ ಚಿತ್ರ. 

ಭರ್ಜರಿ ಸಿನಿಮಾದ ಬಿಗ್​ ಹಿಟ್​ ನಂತರ ದೃವ ಸರ್ಜಾ ಯಾವ ಸಿನಿಮಾ ಮಾಡ್ತಾರೆ ಅನ್ನೋದರ ಕಡೆಯೇ ಎಲ್ಲರ ದೃಷ್ಟಿ. ಅದ್ದೂರಿ ಬಹದ್ದೂರ್  ಭರ್ಜರಿ ಮೂರು ಹಿಟ್ ಸಿನಿಮಾ ಕೊಟ್ಟ ರೈಸಿಂಗ್ ಸ್ಟಾರ್​ ಬಗ್ಗೇನೆ ಈಗ ಗಾಂಧಿನಗರದಲ್ಲಿ ಮತ್ತೊಂದು ಸುದ್ದಿ ಹರಿದಾಡುತ್ತಿದೆ

ದೃವ ಸರ್ಜಾ ಸಂಪೂರ್ಣ ದೃಷ್ಟಿ ಈಗ ತನ್ನ ನಾಲ್ಕನೇ ಸಿನಿಮಾ ಪೊಗರು ಕಡೆಗಿದೆ. ಇದಾದ ನಂತರ ಮತ್ತೊಂದು ಸಿನಿಮಾಗೆ ಕಮಿಟ್ ಆಗಿದ್ದಾರೆ. ಇತ್ತೀಚೆಗಷ್ಟೆ ಮಾವನ ಸಿನಿಮಾಗೆ ಅಳಿಯಾ ಹೀರೋ ಅನ್ನೋ ಸುದ್ದಿಯನ್ನು ಓದಿದ್ದಿರಿ. ಅರ್ಜುನ್ ಸರ್ಜಾ ಬ್ಯಾನರ್​ನಲ್ಲಿ ದೃವ ಸರ್ಜಾ 6 ನೇ ಸಿನಿಮಾ ಮಾಡಲಿದ್ದಾರೆ. ಇದೀಗ ಏಳನೇ ಸಿನಿಮಾನೂ ಫಿಕ್ಸ್ ಆಗಿದೆ. ಅದೂ ಚಿರಂಜೀವಿ ಸರ್ಜಾ- ದೃವ ಸರ್ಜಾ ಹೋಂ ಬ್ಯಾನರ್ ಚಿತ್ರ. 

ಅತ್ತಿಗೆ ಚಿತ್ರದಲ್ಲಿ ಅಭಿನಯ

ಅತ್ತಿಗೆ ಮೇಘನಾ ರಾಜ್ ನಿರ್ಮಾಣದಲ್ಲಿ ದೃವ ಸರ್ಜಾ ಅಭಿನಯಿಸಲಿದ್ದಾರೆ. ಈ ಅಚ್ಚರಿಯ ಸುದ್ದಿಯನ್ನ ನಟಿ ಮೆಘನಾ ರಾಜ್ ಇತ್ತೀಚೆಗಷ್ಟೆ ಸರ್ಪ್ರೈಸ್​ ಎಂದು ಹಂಚಿಕೊಂಡಿದ್ದಾರೆ. ಅದೇನೆ ಇದ್ರೂ ಈ ಸಿನಿಮಾ ಆಗಲು ಇನ್ನು ಮೂರು ವರ್ಷವಂತೂ ಆಗಿಯೇ ಆಗುತ್ತೆ.  ಸದ್ಯ ಪೊಗರು ಸ್ಕ್ರಿಪ್ಟ್​  ರೆಡಿಯಾಗುವ ಕಡೆಗೆ ದೃವ ದೃಷ್ಟಿ ನೆಟ್ಟಿದೆ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

'ಬೆಂಕಿಯಿಲ್ದೇ ಹೊಗೆ ಆಡೋದಿಲ್ಲ'.. ಸಂದೀಪ್ ವಂಗಾ-ಪ್ರಭಾಸ್ ಜೋಡಿಯ 'ಸ್ಪಿರಿಟ್'ನಿಂದ ಪ್ರಕಾಶ್ ರಾಜ್ ಔಟ್ ಆಗಿರೋದು ಪಕ್ಕಾ?
ತಾಯ್ತನದ ಬಳಿಕ ಕತ್ರಿನಾ, ಕಿಯಾರಾ ಮತ್ತೆ ಸಿನಿಮಾದಲ್ಲಿ ಮಿಂಚೋದು ಅನುಮಾನ.. ಶೋಭಾ ಡೇ ಮಾತಿಗೆ ಬಾಲಿವುಡ್ ಶಾಕ್!