ರೊಮ್ಯಾಂಟಿಕ್ ಹೀರೋಗಳೇ ಈಗ ಅಸಾಸಿನ್‌ಗಳು: ಬಾಲಿವುಡ್‌ನಲ್ಲಿ ಈಗ ಹೊಸ ಟ್ರೆಂಡ್‌ನದ್ದೇ ಹವಾ!

Published : Oct 23, 2026, 04:54 PM IST
Bollywood new trend

ಸಾರಾಂಶ

ಬಾಲಿವುಡ್‌ನಲ್ಲಿ ಸಿನಿಮಾ ಟ್ರೆಂಡ್ ಬದಲಾಗುತ್ತಿದ್ದು, ಪ್ರೇಮಕಥೆ ಹಾಗೂ ಕಮರ್ಷಿಯಲ್ ಸಿನಿಮಾಗಳಿಗೆ ಸೀಮಿತವಾಗಿದ್ದ ಸ್ಟಾರ್ ನಟರು ಈಗ ಆಕ್ಷನ್, ಥ್ರಿಲ್ಲರ್, ಕ್ರೈಮ್ ಮತ್ತು ಹಾರರ್-ಕಾಮಿಡಿ ಜಾನರ್‌ಗಳತ್ತ ಮುಖ ಮಾಡುತ್ತಿದ್ದಾರೆ.

ಒಂದು ಕಾಲದಲ್ಲಿ ಬಾಲಿವುಡ್‌ನಲ್ಲಿ ಪ್ರೇಮಕಥೆಗಳು ಹಾಗೂ ಕೌಟುಂಬಿಕ ಸಿನಿಮಾಗಳಿಗೆ ಭಾರೀ ಬೇಡಿಕೆಯಿತ್ತು. ಕಥೆ ಹೇಗಿದ್ದರೂ ಸರಿ, ಸ್ಟಾರ್ ಹೀರೋಗಳು ತೆರೆಮೇಲೆ ಕಾಣಿಸಿಕೊಂಡರೆ ಸಾಕು, ಪ್ರೇಕ್ಷಕರು ಚಿತ್ರಮಂದಿರಗಳತ್ತ ಮುಖ ಮಾಡುತ್ತಿದ್ದರು. ಆದರೆ ಈಗ ಕಾಲ ಬದಲಾಗಿದೆ. ಬಾಲಿವುಡ್‌ನ ಸಿನಿಮಾ ಟ್ರೆಂಡ್‌ ಕೂಡ ಹೊಸ ತಿರುವು ಪಡೆದುಕೊಂಡಿದೆ.

ಒಂದು ಕಾಲದಲ್ಲಿ ರೊಮ್ಯಾಂಟಿಕ್ ಹಾಗೂ ಕಮರ್ಷಿಯಲ್ ಸಿನಿಮಾಗಳಿಗೆ ಹೆಚ್ಚು ಒತ್ತು ನೀಡುತ್ತಿದ್ದ ಸ್ಟಾರ್ ನಟರು, ಈಗ ವಿಭಿನ್ನ ಜಾನರ್‌ಗಳತ್ತ ಮುಖ ಮಾಡುತ್ತಿದ್ದಾರೆ. ಜಾಗತಿಕ ಪ್ರೇಕ್ಷಕರನ್ನು ಸೆಳೆಯುವ ಉದ್ದೇಶದಿಂದ ಆಕ್ಷನ್, ಥ್ರಿಲ್ಲರ್, ಹಾರರ್-ಕಾಮಿಡಿಯಂತಹ ಹೊಸ ಪ್ರಯೋಗಗಳಿಗೆ ಕೈಹಾಕುತ್ತಿದ್ದಾರೆ. ಹೀಗಾಗಿ, ಬಾಲಿವುಡ್‌ನಲ್ಲಿ ಈಗ ಸಾಂಪ್ರದಾಯಿಕ ಪ್ರೇಮಕಥೆಗಳಿಗಿಂತ ವಿಭಿನ್ನ ಕಥಾಹಂದರದ ಸಿನಿಮಾಗಳೇ ಹೆಚ್ಚು ಸದ್ದು ಮಾಡುತ್ತಿವೆ.

ಪವರ್‌ಫುಲ್ ಅಸಾಸಿನ್ ಪಾತ್ರ

ಒಂದು ಕಾಲದಲ್ಲಿ ‘ರೊಮ್ಯಾಂಟಿಕ್ ಕಿಂಗ್’ ಎಂದೇ ಖ್ಯಾತಿ ಪಡೆದಿದ್ದ ಶಾರುಖ್ ಖಾನ್ ಕೂಡ ಈಗ ತಮ್ಮ ಇಮೇಜ್ ಬದಲಿಸಿಕೊಳ್ಳುತ್ತಿದ್ದಾರೆ. ‘ಕಿಂಗ್’ ಸಿನಿಮಾದಲ್ಲಿ ಅವರು ಸಾಲ್ಡ್ ಅಂಡ್ ಪೆಪ್ಪರ್ ಕಲರ್ ಕೂದಲಿನೊಂದಿಗೆ ಪವರ್‌ಫುಲ್ ಅಸಾಸಿನ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ. ಮತ್ತೊಂದೆಡೆ, ಜಾನ್ ಅಬ್ರಹಾಂ ‘ಗುರು’ ಎಂಬ ಥ್ರಿಲ್ಲರ್ ಚಿತ್ರದ ಮೂಲಕ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದ್ದಾರೆ.

ನಿರ್ಮಾಪಕರಾಗಿಯೂ ಹೊಸ ಹೆಜ್ಜೆ

ಎನರ್ಜಿಟಿಕ್ ಸ್ಟಾರ್ ರಣವೀರ್ ಸಿಂಗ್ ಕೂಡ ಹೊಸ ಪ್ರಯೋಗಕ್ಕೆ ಮುಂದಾಗಿದ್ದಾರೆ. ‘ಪ್ರಳಯ್’ ಎಂಬ ಜಾಂಬಿ ಥ್ರಿಲ್ಲರ್ ಸಿನಿಮಾದ ಮೂಲಕ ಅವರು ನಿರ್ಮಾಪಕರಾಗಿಯೂ ಹೊಸ ಹೆಜ್ಜೆ ಇಟ್ಟಿದ್ದಾರೆ. ಇನ್ನು, ಅಜಯ್ ದೇವಗನ್ ‘ದೃಶ್ಯಂ 3’ಯಂತಹ ಕ್ರೈಮ್ ಥ್ರಿಲ್ಲರ್ ಸಿನಿಮಾಗಳ ಮೂಲಕ ಪ್ರೇಕ್ಷಕರನ್ನು ಸೆಳೆಯುತ್ತಿದ್ದಾರೆ. ಅಕ್ಷಯ್ ಕುಮಾರ್ ಕೂಡ ಹಾರರ್-ಕಾಮಿಡಿ ಹಾಗೂ ಥ್ರಿಲ್ಲರ್ ಜಾನರ್‌ಗಳತ್ತ ಹೆಚ್ಚು ಆಸಕ್ತಿ ತೋರಿಸುತ್ತಿದ್ದಾರೆ.

ಇನ್ನು ಬಾಲಿವುಡ್‌ನಲ್ಲಿ ಈಗ ಸ್ಟಾರ್‌ಗಳ ಇಮೇಜ್‌ಗಿಂತ ಕಥೆಯ ಹೊಸತನ, ವಿಭಿನ್ನ ಜಾನರ್‌ಗಳು ಹಾಗೂ ಜಾಗತಿಕ ಪ್ರೇಕ್ಷಕರನ್ನು ಸೆಳೆಯುವ ಪ್ರಯತ್ನಗಳಿಗೆ ಹೆಚ್ಚು ಮಹತ್ವ ಸಿಗುತ್ತಿದೆ. ಪ್ರೇಮಕಥೆಗಳಿಂದ ಆಕ್ಷನ್, ಕ್ರೈಮ್ ಥ್ರಿಲ್ಲರ್ ಮತ್ತು ಹಾರರ್-ಕಾಮಿಡಿಯತ್ತ ಸಾಗುತ್ತಿರುವ ಈ ಬದಲಾವಣೆ, ಬಾಲಿವುಡ್‌ನ ಹೊಸ ಟ್ರೆಂಡ್‌ಗೆ ನಾಂದಿ ಹಾಡಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಚೈತ್ರಾ ಆಚಾರ್ ನಟನೆ, ಪ್ರಶಾಂತ್ ನೀಲ್ ಹೆಸರು: ವಿಮರ್ಶೆಯಲ್ಲಿ ಬಯಲಾಯ್ತು ‘418’ ಹಾರರ್ ಅಸಲಿ ಆಟ
Darshan: ಶೋಕ್ದಾರ್‌ ಧನ್ವೀರ್‌ ಬುಡಕ್ಕೆ ಬೆಂಕಿ ಇಟ್ಟ ವಿಜಯಲಕ್ಷ್ಮೀ, ಆರ್‌ಆರ್‌ ನಗರ ಪೊಲೀಸ್‌ ಠಾಣೆಗೆ ದೂರು!