ಪವಿತ್ರಾ ಗೌಡಗೆ ಮತ್ತೆ ಶಾಕ್: ಪರಪ್ಪನ ಅಗ್ರಹಾರ ಜೈಲಲ್ಲಿ ನೈಜೀರಿಯಾ ಕೈದಿಗಳ ಜತೆಯೇ ದರ್ಶನ್ ಗೆಳತಿಯ ವಾಸ ಫಿಕ್ಸ್..!

Published : Oct 23, 2026, 04:39 PM IST
Pavitra Gowda and Darshan

ಸಾರಾಂಶ

ರೇಣುಕಾಸ್ವಾಮಿ ಪ್ರಕರಣದ ಆರೋಪಿ ಪವಿತ್ರಾ ಗೌಡ ಅವರು ಜೈಲಿನಲ್ಲಿ ಬ್ಯಾರಕ್ ಬದಲಾಯಿಸುವಂತೆ ಸಲ್ಲಿಸಿದ್ದ ಅರ್ಜಿಯನ್ನು ಕೋರ್ಟ್ ವಜಾಗೊಳಿಸಿದೆ. ಇದರಿಂದ ಅವರು ನೈಜೀರಿಯನ್ ಕೈದಿಗಳೊಂದಿಗೇ ಮುಂದುವರಿಯಬೇಕಾದ ಅನಿವಾರ್ಯತೆ ಎದುರಾಗಿದೆ. ಅಲ್ಲದೆ, ಸಹ ಆರೋಪಿಗಳಾದ ಜಗದೀಶ್ ಮತ್ತು ಅನುಕುಮಾರ್ ಅವರ ಜಾಮೀನು ಅರ್ಜಿಯನ್ನೂ ನ್ಯಾಯಾಲಯ ತಿರಸ್ಕರಿಸಿದೆ.

ಬೆಂಗಳೂರು: ರೇಣುಕಾಸ್ವಾಮಿ ಪ್ರಕರಣದ ಎ-1 ಆರೋಪಿ ಪವಿತ್ರಾ ಗೌಡಗೆ ಸೆಷನ್ ನಗರದ 59ನೇ ಸಿಸಿಹೆಚ್ ಕೋರ್ಟ್‌ ಮತ್ತೆ ಶಾಕ್ ನೀಡಿದೆ. ನಟ ದರ್ಶನ್ ಗೆಳತಿ ಹಾಗೂ ರೇಣುಕಾಸ್ವಾಮಿ ಕೊಲೆ ಆರೋಪಿ, ಜೈಲು ಅಧಿಕಾರಿಗಳು, ಕೋರ್ಟ್ ಆದೇಶವನ್ನು ಸರಿಯಾಗಿ ಪಾಲಿಸುತ್ತಿಲ್ಲ. ಕೋರ್ಟ್‌ಗೆ ಖುದ್ದು ನ್ಯಾಯಾಧೀಶರೇ ಭೇಟಿ ಮಾಡಿ ಸೌಲಭ್ಯಗಳ ಪರಿಶೀಲನೆ ಮಾಡಬೇಕು ಎಂದು ಪವಿತ್ರಾ ಗೌಡ ಸಲ್ಲಿಸಿದ್ದ ಅರ್ಜಿಯನ್ನು ನಗರದ 59ನೇ ಸಿಸಿಹೆಚ್ ಕೋರ್ಟ್‌ ವಜಾಗೊಳಿಸಿದೆ. ಇದರೊಂದಿಗೆ ಇದೀಗ ಪವಿತ್ರಾ ಗೌಡ ನೈಜೀರಿಯಾ ಕೈದಿಗಳೊಂದಿಗೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ಕಾಲಕಳೆಯಬೇಕಾದ ಪರಿಸ್ಥಿತಿ ಬಂದಿದೆ.

ಪವಿತ್ರಾ ಗೌಡ ಮನವಿ ಏನಾಗಿತ್ತು?

ಕಳೆದ ಅಕ್ಟೋಬರ್ 06ರಂದು ಪವಿತ್ರಾ ಗೌಡ ಅವರನ್ನು ಸದ್ಯ ಇರಿಸಲಾಗಿರುವ ಬ್ಯಾರಕ್‌ನಲ್ಲಿ ನೈಜೀರಿಯನ್ ಮೂಲದ ಮಹಿಳಾ ಪ್ರಜೆಗಳು (ಖೈದಿಗಳು) ಇದ್ದು, ಅವರಿಂದ ತಮಗೆ ತೀವ್ರ ಕಾಟ ಹಾಗೂ ಕಿರುಕುಳ ಎದುರಾಗುತ್ತಿದೆ ಎಂದು ಪವಿತ್ರ ಗೌಡ ಪರ ವಕೀಲರು ನ್ಯಾಯಾಲಯದ ಗಮನಕ್ಕೆ ತಂದಿದ್ದರು. ಈ ಹಿನ್ನೆಲೆಯಲ್ಲಿ ಅವರ ಬ್ಯಾರಕ್ ಬದಲಾಯಿಸುವಂತೆ ಹಾಗೂ ಆರೋಗ್ಯ ತಪಾಸಣೆ ನಡೆಸುವಂತೆ ಮನವಿ ಮಾಡಲಾಗಿತ್ತು. ಈ ಮನವಿಯನ್ನು ಪರಿಶೀಲಿಸಿದ್ದ ನ್ಯಾಯಾಲಯ, ಜೈಲು ಸಿಬ್ಬಂದಿಗಳಿಂದ ಸೂಕ್ತ ವರದಿಯನ್ನು ಕೇಳಿತ್ತು. ಇದಾದ ಬಳಿಕ ಜೈಲಾಧಿಕಾರಿಗಳು ಇ-ಮೇಲ್ ಮೂಲಕ 59ನೇ ಸಿಸಿಎಚ್‌ ಕೋರ್ಟ್‌ಗೆ ಪೂರ್ಣ ವರದಿಯನ್ನು ಸಲ್ಲಿಸಿತ್ತು.

ಇದಾದ ಬಳಿಕ ವರದಿಯನ್ನು ಕೂಲಂಕುಷವಾಗಿ ಪರಿಶೀಲಿಸಿದ ಕೋರ್ಟ್ ತೀರ್ಪನ್ನು ಅಕ್ಟೋಬರ್ 23ರವರೆಗೆ ಕಾಯ್ದಿರಿಸಿತ್ತು. ಇದೀಗ ನ್ಯಾಯಮೂರ್ತಿ ಸುಜಾತಾ ಸಂಬ್ರಾಣಿಯವರು, ವಾದ ವಿವಾದಗಳನ್ನು ಪರಿಶೀಲಿಸಿದ ಬಳಿಕ ಇದೀಗ ಪವಿತ್ರಾ ಗೌಡ ಅರ್ಜಿಯನ್ನು ವಜಾ ಮಾಡಿ ಆದೇಶ ಹೊರಡಿಸಿದೆ. ಹೀಗಾಗಿ ಪವಿತ್ರಾ ಗೌಡ ಯಥಾಸ್ಥಿತಿಯಂತೆ ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹದಲ್ಲಿ ನೈಜೀರಿಯನ್ ಕೈದಿಗಳ ಜತೆ ಕಾಲ ಕಳೆಯಬೇಕಾಗಿದೆ.

ಜಗದೀಶ್-ಅನುಕುಮಾರ್ ಅರ್ಜಿ ಕೂಡಾ ವಜಾ:

ಇನ್ನು ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊ*ಲೆ ಪ್ರಕರಣದ ಪ್ರಮುಖ ಆರೋಪಿಗಳಾಗಿ ಗುರುತಿಸಿಕೊಂಡಿರುವ ಜಗದೀಶ್ ಹಾಗೂ ಅನುಕುಮಾರ್ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಇದೀಗ 59ನೇ ಸೆಷನ್ಸ್ ಕೋರ್ಟ್ ವಜಾ ಮಾಡಿದೆ. 7ನೇ ಆರೋಪಿ ಅನುಕುಮಾರ್ ರೇಣುಕಾಸ್ವಾಮಿಯನ್ನು ಚಿತ್ರದುರ್ಗದಿಂದ ಬೆಂಗಳೂರಿಗೆ ಅಪಹರಿಸಿಕೊಂಡು ಬಂದ ತಂಡದಲ್ಲಿ ಸಕ್ರಿಯವಾಗಿ ಭಾಗಿಯಾಗಿದ್ದ ಎಂಬ ಗಂಭೀರ ಆರೋಪವಿದೆ. ಇನ್ನೊಂದೆಡೆ ಚಿತ್ರದುರ್ಗದಲ್ಲಿ ಆಟೋ ಚಾಲಕನಾಗಿದ್ದ ಜಗದೀಶ್, ಕೃತ್ಯ ನಡೆದ ನಂತರ ಮತ್ತೊಬ್ಬ ಆರೋಪಿ ಜೊತೆಗೂಡಿ ಚಿತ್ರದುರ್ಗದ ಡಿವೈಎಸ್ಪಿ ಅವರ ಎದುರು ಶರಣಾಗಿದ್ದ. ತದನಂತರ ಬೆಂಗಳೂರು ಪೊಲೀಸರು ಇಬ್ಬರನ್ನೂ ತಮ್ಮ ವಶಕ್ಕೆ ಪಡೆದು ಸುದೀರ್ಘ ವಿಚಾರಣೆ ನಡೆಸಿದ್ದರು. ಈ ಇಬ್ಬರು ತಮಗೆ ಕೋರ್ಟ್ ಜಾಮೀನು ನೀಡಬೇಕು ಎಂದು ಅರ್ಜಿ ಸಲ್ಲಿಸಿದ್ದರು. ಪ್ರಕರಣದ ವಾದ ವಿವಾದ ಆಲಿಸಿದ ಕೋರ್ಟ್, ಈ ಇಬ್ಬರ ಅರ್ಜಿಯನ್ನೂ ವಜಾ ಮಾಡಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Darshan: ಶೋಕ್ದಾರ್‌ ಧನ್ವೀರ್‌ ಬುಡಕ್ಕೆ ಬೆಂಕಿ ಇಟ್ಟ ವಿಜಯಲಕ್ಷ್ಮೀ, ಆರ್‌ಆರ್‌ ನಗರ ಪೊಲೀಸ್‌ ಠಾಣೆಗೆ ದೂರು!
ಪ್ರಭಾಸ್ ಹುಟ್ಟುಹಬ್ಬಕ್ಕೆ ಪ್ರಶಾಂತ್ ನೀಲ್ ಪತ್ನಿ ವಿಶಸ್ ಹೇಗಿತ್ತು?: 'ನನ್ನ ಫೌಜಿ' ಫೋಟೋ ವೈರಲ್!