
ನವದೆಹಲಿ(ಎ.24): 2015ರಲ್ಲಿ ತೆರೆಕಂಡ ಬಾಹುಬಲಿ: 'ದ ಬಿಗಿನಿಂಗ್' ಸಿನಿಮಾ ವಿಶ್ವ ಪ್ರಸಿದ್ಧವಾಗಿತ್ತು. ಇದೀಗ ಈ ಸಿನಿಮಾದ ಮುಂದಿನ ಭಾಗವಾಗಿ 'ಬಾಹುಬಲಿ 2' ತೆರೆ ಕಾಣಲು ಸಜ್ಜಾಗಿದೆ. ಈಗಾಗಲೇ ಸಿನಿಮಾ ತಂಡ ಬಿಡುಗಡೆಗೆ ದಿನಾಂಕ ನಿಗದಿಪಡಿಸಿದ್ದು, ಏಪ್ರಿಲ್ 28ರಂದು ಬಹುಸಮಯದಿಂದ ಕಾಡುತ್ತಿದ್ದ ಮಿಲಿಯನ್ ಡಾಲರ್ ಪ್ರಶ್ನೆ 'ಕಟ್ಟಪ್ಪ ಬಾಹುಬಲಿಯನ್ನೇಕೆ ಕೊಂದ?' ಎಂಬುವುದಕ್ಕೆ ಉತ್ತರ ಸಿಗಲಿದೆ.
2015ರಿಂದ ಈವರೆಗೆ 'ಕಟ್ಟಪ್ಪ ಬಾಹುಬಲಿಯನ್ನೇಕೆ ಕೊಂದ?' ಎಂಬ ಪ್ರಶ್ನೆಗೆ ಹಲವಾರು ಉತ್ತರಗಳು ಸಿಕ್ಕಿವೆಯಾದರೂ ಈ ಉತ್ತರ ಜನರ ಕುತೂಹಲಕ್ಕೆ ತೆರೆ ಎಳೆದಿಲ್ಲ. ಇನ್ನೇನಿದ್ದರೂ ಬಾಹುಬಲಿ ಬಿಡುಗಡೆಗೆ ಕೆಲವೇ ದಿನಗಳು ಬಾಕಿ ಉಳಿದಿದ್ದು, ಈ ಸಂದರ್ಭದಲ್ಲಿ ಸಿನಿಮಾ ನಿರ್ದೇಶಕ ರಾಜಮೌಳಿ ಸೇರಿದಂತೆ, ಬಾಹುಬಲಿಯಲ್ಲಿ ನಟಿಸಿದ ನಟರು ನೀಡಿದ ಉತ್ತರಗಳೇನು ಎಂಬುವುದನ್ನು ನಾವಿಲ್ಲಿ ನೀಡುತ್ತಿದ್ದೇವೆ.
1) ಈ ಪ್ರಶ್ನೆಗೆ ಉತ್ತರಿಸಿದ ಸಿನಿಮಾ ನಿರ್ದೇಶಕ ರಾಜಮೌಳಿ 'ಯಾಕೆಂದರೆ ನಾನು ಕಟ್ಟಪ್ಪನ ಬಳಿ ಹೇಳಿದೆ, ಹೀಗಾಗಿ ಅವರು ಬಾಹುಬಲಿಯನಗನು ಕೊಂದರು' ಎಂದಿದ್ದಾರೆ.
2) ಸಿನಿಮಾದಲ್ಲಿ ಕಟ್ಟಪ್ಪನ ಪಾತ್ರದಲ್ಲಿ ಕಾಣಿಸಿಕೊಂಡ ಸತ್ಯರಾಜ್ 'ಪ್ರಭಾಸ್(ಬಾಹುಬಲಿ)ಯನ್ನು ಕೊಲ್ಲಲು ನಿರ್ಮಾಪಕ ಶೋಭು ನನಗೆ ಉತ್ತಮ ಸಂಭಾವನೆ ನೀಡಿದ್ದರು. ಅಲ್ಲದೇ ರಾಜಮೌಳಿ ನನಗೆ ಬಾಹುಬಲಿಯನ್ನು ಕೊಲ್ಲಲು ಆದೇಶ ನೀಡಿದ್ದರು. ನಾನವರ ಮಾತನ್ನು ಪಾಲಿಸಿದೆ. ಇಲ್ಲದಿದ್ದರೆ ಬಾಹುಬಲಿಯನ್ನು ಕೊಲ್ಲುವ ಅಗತ್ಯ ನನಗೇನಿದೆ?' ಎಂದಿದ್ದಾರೆ.
ಸಾಮಾಜಿಕ ಜಾಲಾತಾಣಗಳಲ್ಲಿ ಲಭ್ಯವಾದ ಉತ್ತರಗಳು:
3) 'ಪ್ರಭಾಸ್(ಬಾಹುಬಲಿ)ಗೆ ಐಸ್ ಕ್ರೀಂ ಎಂದರೆ ಬಹಳ ಇಷ್ಟ, ಅವರು ಐಸ್ ಕ್ರೀಂಗಾಗಿ ಹಠ ಮಾಡುತ್ತಿದ್ದರು ಹೀಗಾಗಿ ಕಟ್ಟಪ್ಪ ಅವರನ್ನು ಕೊಂದರು'.
4) 'ರಾಜಮಾತೆ ಇಡೀ ರಾಜ್ಯವನ್ನು ಬಾಹುಬಲಿಯ ಸುಪರರ್ಧಿಗೆ ಒಪ್ಪಿಸುತ್ತಾಳೆಂಬ ಭಯ ಬಲ್ಲಾಳದೇವನಿಗೆ ಕಾಡುತ್ತಿತ್ತು. ಹೀಗಾಗಿ ಆತ ಬಾಹುಬಲಿಯನ್ನು ಕೊಲ್ಲುವಂತೆ ಕಟ್ಟಪ್ಪನಿಗೆ ಆದೇಶ ನೀಡಿದ್ದರಿಂದ ಈ ಕೊಲೆ ನಡೆಯಿತು'
5) 'ಖುದ್ದು ಬಾಹುಬಲಿಯೇ ತನ್ನನ್ನು ಕೊಲ್ಲುವಂತೆ ಕಟ್ಟಪ್ಪನಿಗೆ ಆದೇಶ ನೀಡಿದ್ದು, ಕಟ್ಟಪ್ಪ ಆದೇಶ ಪಾಲಿಸಿದ'.
ಇವಿಷ್ಟು ಈವರೆಗೆ ಸಿಕ್ಕ ಉತ್ತರಗಳಾಗಿವೆ. ಇನ್ನೇನಿದ್ದರೂ ಸಿನಿಮಾ ತೆರೆ ಕಂಡ ಬಳಿಕವಷ್ಟೇ ಈ ಪ್ರಶ್ನೆಗೆ ಸರಿಯಾದ ುತ್ತರ ಸಿಗುವುದಲ್ಲದೇ ಪ್ರೇಕ್ಷಕರ ಕುತೂಹಲಕ್ಕೆ ತೆರೆ ಬೀಳುತ್ತದೆ.
ಕೃಪೆ: NDTv
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.