
ಮುಂಬೈ(ಏ.23): ಮಲಯಾಳಂ'ನ ಸೂಪರ್ ಸ್ಟಾರ್ ಮೋಹನ್ ಲಾಲ್'ನನ್ನು ಬಾಲಿವುಡ್ ನಟ ಕಮಲ್ ಆರ್ ಖಾನ್ ಟ್ವಿಟರ್'ನಲ್ಲಿ ಚೋಟ್ ಭೀಮ್ ಎಂದು ಕರೆದಿರುವುದು ಈಗ ವಿವಾದಕ್ಕೆ ಕಾರಣವಾಗಿದೆ.
ಅಷ್ಟೇನು ಖ್ಯಾತಿಯಿಲ್ಲದ ಕೆಲವೆ ಹಿಂದಿ ಚಿತ್ರಗಳಲ್ಲಿ ನಟನೆ ಹಾಗೂ ನಿರ್ಮಾಣ ಮಾಡಿರುವ ಕಮಲ್ ಆರ್ ಖಾನ್ ಎಂಬ ನಟ ಮೋಹನ್ ಲಾಲ್ ಅವರನ್ನು ಚೋಟಾ ಭೀಮ್ ಎಂದು ಅಣಕಿಸಿ ಟ್ವೀಟ್ ಮಾಡಿದ್ದರು. ಅಲ್ಲದೆ ನೋಡಲು ಚೋಟಾ ಭೀಮ್ ತರಹ ಇದ್ದೀರಾ ನೀವೇಕೆ ಮಹಾಭಾರತ ಚಿತ್ರದ ಭೀಮನ ಪಾತ್ರ ಮಾಡಿ ಬಿ.ಆರ್. ಶೆಟ್ಟಿಯವರ ಹಣವನ್ನು ಪೋಲು ಮಾಡುತ್ತೀರಿ' ಎಂದು ಮತ್ತೊಂದು ಟ್ವೀಟ್ ಸಹ ಮಾಡಿದ್ದ.
ಮಲಯಾಳಿ ಅಭಿಮಾನಿಗಳ ಬೈಗುಳ ಶುರುವಾದಾಗ ನಾನು ಅವರಿಗಿಂತ ಸೂಪರ್ ಸ್ಟಾರ್ ನಟ ಅವರಿಗೆ 1.7 ಮಿಲಿಯನ್ ಫಾಲೋವರ್ಸ್'ಗಳಿದ್ದರೆ ನನಗೆ 3.7 ಫಾಲೋವರ್ಸ್'ಗಳಿದ್ದಾರೆ' ಎಂದು ಅಭಿಮಾನಿಗಳಿಗೆ ಟಾಂಟ್ ಕೊಡಲು ಶುರು ಮಾಡಿದ.
ಅನಂತರ ಚಿತ್ರೋದ್ಯಮಗಳಿಂದಲೂ ಟೀಕೆಗಳು ವ್ಯಕ್ತವಾದಾಗ ರಿಟ್ವೀಟ್ ಮಾಡಿದ ಕಮಲ್ ' ಮೋಹನ್'ಲಾಲ್ ಅವರಿಗೆ ಟ್ಯಾಗ್ ಮಾಡಿ 'ನನಗೆ ನೀವು ಮಲಯಾಳಿ ಚಿತ್ರರಂಗದ ಸೂಪರ್ ಸ್ಟಾರ್ ಎಂದು ಗೊತ್ತಿರಲಿಲ್ಲ. 'ನಾನು ನಿಮ್ಮನ್ನು ಚೋಟಾಭೀಮ್ ಎಂದು ಕರೆದಿದ್ದಕ್ಕೆ ನನ್ನನ್ನು ಮನ್ನಿಸಿ' ಎಂದು ಕ್ಷಮಾಪಣೆ ಕೇಳಿದ್ದಾನೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.