ಬಾಲಿವುಡ್ ನಟಿ ಸೋನಾಕ್ಷಿ ವಿರುದ್ಧ ಎಫ್ ಐಆರ್ ದಾಖಲು

Published : Feb 24, 2019, 01:54 PM IST
ಬಾಲಿವುಡ್ ನಟಿ ಸೋನಾಕ್ಷಿ ವಿರುದ್ಧ ಎಫ್ ಐಆರ್ ದಾಖಲು

ಸಾರಾಂಶ

ಬಾಲಿವುಡ್ ನಟಿ ಸೋನಾಕ್ಷಿ ವಿರುದ್ಧ ದೂರು ದಾಖಲಿಸಲಾಗಿದೆ. ಕಾರ್ಯಕ್ರಮ ಆಯೋಜಕರಿಗೆ ವಂಚನೆ ಮಾಡಿದ ಹಿನ್ನೆಲೆಯಲ್ಲಿ ದೂರು ದಾಖಲಾಗಿದೆ. 

ನವದೆಹಲಿ : ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾ ವಿರುದ್ಧ ದೂರು ದಾಖಲಿಸಲಾಗಿದೆ. ಕಾರ್ಯಕ್ರಮವೊಂದಕ್ಕೆ ಆಗಮಿಸುವುದಾಗಿ ಹಣವನ್ನು ಪಡೆದು ಕಾರ್ಯಕ್ರಮಕ್ಕೆ ಹಾಜರಾಗದ ಹಿನ್ನೆಲೆಯಲ್ಲಿ ದೂರು ದಾಖಲಿಸಲಾಗಿದೆ. 

ಸೋನಾಕ್ಷಿ ಸಿನ್ಹಾ ಸೇರಿ ಒಟ್ಟು ಐವರ ವಿರುದ್ಧ ದೂರು ದಾಖಲಾಗಿದೆ. ಸೆಪ್ಟೆಂಬರ್ 30ರಂದು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದಾಗಿ 37 ಲಕ್ಷ ಹಣ ಪಡೆದು ವಂಚಿಸಿದ್ದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ. 

ಶ್ರೀದೇವಿ ನೆಚ್ಚಿನ ಸೀರೆ ಆನ್‌ಲೈನ್‌ನಲ್ಲಿ ಹರಾಜು: ಬೆಲೆ ಕೇಳಿದ್ರೆ ಶಾಕ್!

ದೂರು ದಾಖಲಾದ ಹಿನ್ನೆಲೆಯಲ್ಲಿ ಸೋನಾಕ್ಷಿ ಸಿನ್ಹಾ, ಅಭಿಷೇಕ್ ಸಿನ್ಹಾ, ಮಾಳವಿಕಾ ಪಂಜಾಬಿ, ದುಮಿಲ್ ತಕ್ಕರ್, ಈದ್ಗರ್ ಎನ್ನುವವರ ವಿರುದ್ಧ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಮೊರದಾಬಾದ್ ಡಿಎಸ್ ಪಿ ಗಜ್ರಾಜ್ ಸಿಂಗ್ ಹೇಳಿದ್ದಾರೆ. 

ಅಯ್ಯೋ ಪಾಪ..ಎಫ್‌ಐಆರ್‌ ದಾಖಲಾಗೋ ಕೆಲಸ ಏನ್‌ ಮಾಡಿದ್ಲು ಸನ್ನಿ!

ಈ ಬಗ್ಗೆ ಪ್ರತಿಕ್ರಿಯಿಸಿದ ದೂರುದಾರರು ಸೋನಾಕ್ಷಿ ಬಳಿ ಸಾಕಷ್ಟು ಬಾರಿ ಕೇಳಿಕೊಂಡರು ಅವರು ಪ್ರದರ್ಶನ ನೀಡಲು ನಿರಾಕರಿಸಿದರು. ಇದರಿಂದ ತಮಗೆ ಸಾಕಷ್ಟು ಪ್ರಮಾಣದಲ್ಲಿ ನಷ್ಟ ಉಂಟಾಗಿದ್ದಾಗಿ ದೂರಿನಲ್ಲಿ ತಿಳಿಸಿದ್ದಾರೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ರಾಜ್ಯದ ಗಡಿ ಆನೇಕಲ್‌ನಲ್ಲಿ ದರ್ಶನ್ 'ಡೆವಿಲ್‌'ಗೆ ಹೀಗೆಲ್ಲಾ ಆಗ್ತಿದ್ಯಾ?
Year 2025: ವಿದೇಶದಲ್ಲಿ ಬಾಲಿವುಡ್‌ಗೆ ಮಣ್ಣು ಮುಕ್ಕಿಸಿದ ಏಳು ಸೌಥ್ ಸಿನಿಮಾಗಳು