ಬಿಚ್ಚುಗತ್ತಿ ಸಿನಿಮಾ ಶೂಟಿಂಗ್ ವೇಳೆ ಕೆಳಗೆ ಬಿದ್ದ ನಟ | ಬೆನ್ನುಮೂಳೆಗೆ ಗಾಯವಾಗಿರುವ ಸಾಧ್ಯತೆ |
ಬೆಂಗಳೂರು (ಫೆ. 23): ಬಿಚ್ಚುಗತ್ತಿ ಚಿತ್ರದ ಸಾಹಸ ದೃಶ್ಯ ಚಿತ್ರೀಕರಣ ವೇಳೆ ಅವಗಢ ಸಂಭವಿಸಿದೆ.
ಚಿತ್ರೀಕರಣ ವೇಳೆ ಹಾರ್ಸ್ ರೈಡಿಂಗ್ ಮಾಡುವ ಸೀನ್ ಇತ್ತು. ಆಗ ನಟ ರಾಜವರ್ಧನ್ ಕಂಟ್ರೋಲ್ ಸಿಗದೇ ಕೆಳಕ್ಕೆ ಬಿದ್ದಿದ್ದಾರೆ. ಯಶವಂತಪುರ ಪಿಪಲ್ ಟ್ರೀ ಆಸ್ಪತ್ರೆಗೆ ದಾಖಲಿಸಲಾಗಿದೆ. ಬೆನ್ನು ಮೂಳೆಗೆ ಪೆಟ್ಟಾಗಿರೋ ಸಾಧ್ಯತೆ ಇದೆ ಎನ್ನಲಾಗಿದ್ದು ರಾಜವರ್ಧನ್ ಗೆ ಹದಿನೈದು ದಿನ ಬೆಡ್ ರೆಸ್ಟ್ ಗೆ ವೈದ್ಯರು ತಿಳಿಸಿದ್ದಾರೆ. ಸದ್ಯ ಅವರನ್ನು ಅಬ್ಸರ್ ವೇಷನ್ ನಲ್ಲಿ ಇಡಲಾಗಿದೆ.
ಚಿತ್ರದುರ್ಗದ ಪಾಳೇಗಾರ ಬಿಚ್ಚುಗತ್ತಿ ಭರಮಣ್ಣ ನಾಯಕನ ಬದುಕಿನ ಕುರಿತ ಚಿತ್ರ. ಅದರಲ್ಲೂ ಆತನ ಅಧಿಕಾರವಧಿಯಲ್ಲಿ ದಾಖಲಾಗಿ ಉಳಿದ ‘ದಳವಾಯಿ ದಂಗೆ’ಯೇ ಈ ಚಿತ್ರದ ಪ್ರಧಾನ ಕಥಾ ಹಂದರ.