Oscars 2023: ಕಾಂತಾರಗೆ ನಿರಾಸೆ, ಆಸ್ಕರ್‌ ಪ್ರಶಸ್ತಿಗೆ RRR ಚಿತ್ರದ ನಾಟು-ನಾಟು ಗೀತೆ ಫೈಟ್‌!

By Santosh NaikFirst Published Jan 25, 2023, 12:10 AM IST
Highlights

ಇತ್ತೀಚೆಗೆ ಗೋಲ್ಡನ್‌ ಗ್ಲೋಬ್ಸ್‌ ಪ್ರಶಸ್ತಿ ಗೆಲ್ಲುವ ಮೂಲಕ ಇತಿಹಾಸ ಸೃಷ್ಟಿಸಿದ್ದ ಆರ್‌ಆರ್‌ಆರ್‌ ಚಿತ್ರದ ನಾಟು-ನಾಟು ಗೀತೆ, ಆಸ್ಕರ್‌ ಪ್ರಶಸ್ತಿಯ ಅತ್ಯುತ್ತಮ ಮೂಲ ಗೀತೆ ವಿಭಾಗದಲ್ಲಿ ಅಂತಿಮ ನಾಮ ನಿರ್ದೇಶನ ಪಟ್ಟಿಯಲ್ಲಿದೆ. ಅದರೊಂದಿಗೆ ಭಾರತದ ಎರಡು ಸಾಕ್ಷ್ಯಚಿತ್ರಗಳು ಕೂಡ ಆಸ್ಕರ್‌ ಪ್ರಶಸ್ತಿಗೆ ಫೈನಲ್‌ ನಾಮಿನೇಷನ್‌ ಆಗಿದೆ.

ಕ್ಯಾಲಿಫೋರ್ನಿಯಾ (ಜ.24): ಆಸ್ಕರ್ 2023 ರ ಅಂತಿಮ ನಾಮನಿರ್ದೇಶನಗಳನ್ನು ಪ್ರಕಟಿಸಲಾಗಿದೆ. ಇದರಲ್ಲಿ ಭಾರತೀಯ ಚಲನಚಿತ್ರ RRRನ ನಾಟು-ನಾಟು ಹಾಡು ಅತ್ಯುತ್ತಮ ಮೂಲ ಗೀತೆ ವಿಭಾಗದಲ್ಲಿ ನಾಮನಿರ್ದೇಶನಗೊಂಡಿದೆ. ಈ ಹಾಡನ್ನು ಎಂಎಂ ಕೀರವಾಣಿ ಸಂಯೋಜಿಸಿದ್ದಾರೆ. ಇತ್ತೀಚೆಗೆ, ನಾಟು-ನಾಟು ಹಾಡು ಗೋಲ್ಡನ್ ಗ್ಲೋಬ್ ಪ್ರಶಸ್ತಿಗಳಲ್ಲಿ ಅತ್ಯುತ್ತಮ ಗೀತೆ ವಿಭಾಗದಲ್ಲಿ ಪ್ರಶಸ್ತಿಯನ್ನು ಗೆದ್ದುಕೊಂಡಿತ್ತು. RRR ಅತ್ಯುತ್ತಮ ವಿದೇಶಿ ಭಾಷಾ ಚಲನಚಿತ್ರ ಮತ್ತು ನಟು-ನಾಟು ಅತ್ಯುತ್ತಮ ಗೀತೆಯನ್ನು ಕ್ರಿಟಿಕ್ಸ್‌ ಚಾಯ್ಸ್‌ ಪ್ರಶಸ್ತಿಗಳಲ್ಲಿ ಗೆದ್ದುಕೊಂಡಿದೆ. ಆಸ್ಕರ್ ಅಂತಿಮ ನಾಮನಿರ್ದೇಶನಗಳನ್ನು 20 ವಿಭಾಗಗಳಲ್ಲಿ ಪ್ರಕಟಿಸಲಾಗಿದೆ, ಅವತಾರ್: ದಿ ವೇ ಆಫ್ ವಾಟರ್ ಮತ್ತು ದಿ ಟಾಪ್‌ಗನ್ ಮೇವರಿಕ್ ಅತ್ಯುತ್ತಮ ಚಿತ್ರ ವಿಭಾಗದಲ್ಲಿ ನಾಮನಿರ್ದೇಶನಗಳನ್ನು ಪಡೆಯುತ್ತಿವೆ. ಆದರೆ, ಇಂಡಿಯಾಸ್ ಆಲ್ ದಟ್ ಬ್ರೀಥ್ಸ್ ಅತ್ಯುತ್ತಮ ಸಾಕ್ಷ್ಯಚಿತ್ರಕ್ಕಾಗಿ ಮತ್ತು ದಿ ಎಲಿಫೆಂಟ್ ವಿಸ್ಪರ್ಸ್ ಅತ್ಯುತ್ತಮ ಸಾಕ್ಷ್ಯಚಿತ್ರ ಕಿರುಚಿತ್ರಕ್ಕಾಗಿ ನಾಮನಿರ್ದೇಶನಗೊಂಡಿದೆ.

WE CREATED HISTORY!! 🇮🇳

Proud and privileged to share that has been nominated for Best Original Song at the 95th Academy Awards. pic.twitter.com/qzWBiotjSe

— RRR Movie (@RRRMovie)


ಎಸ್‌ಎಸ್ ರಾಜಮೌಳಿ ಅವರ ಬ್ಲಾಕ್‌ಬಸ್ಟರ್ 'ಆರ್‌ಆರ್‌ಆರ್', ಸಂಜಯ್ ಲೀಲಾ ಬನ್ಸಾಲಿ ಅವರ 'ಗಂಗೂಬಾಯಿ ಕಥಿಯಾವಾಡಿ', ವಿವೇಕ್ ಅಗ್ನಿಹೋತ್ರಿ ಅವರ 'ದಿ ಕಾಶ್ಮೀರ್ ಫೈಲ್ಸ್', ರಿಷಬ್ ಶೆಟ್ಟಿ ಅವರ ಹಿಟ್ ಕನ್ನಡ ಚಿತ್ರ 'ಕಾಂತಾರ' ಪಾಲಿಗೆ ಅತ್ಯುತ್ತಮ ಚಿತ್ರ ವಿಭಾಗದಲ್ಲಿ ಆಸ್ಕರ್‌ ಪ್ರಶಸ್ತಿ ಸಂಭ್ರಮ ಕೊನೆಗೊಂಡಿದೆ. ಭಾರತದ ಅಧಿಕೃತ ಆಸ್ಕರ್ ಪ್ರವೇಶ ಆಗಿದ್ದ ಚೆಲೋ ಶೋ (ದಿ ಲಾಸ್ಟ್ ಫಿಲ್ಮ್ ಶೋ) ಅತ್ಯುತ್ತಮ ವಿದೇಶಿ ಚಲನಚಿತ್ರ ಕಿರುಪಟ್ಟಿಗೆ ಸೇರಿತ್ತು. ಆದರೆ, ಅಂತಿಮ ನಾಮನಿರ್ದೇಶನಕ್ಕೇರಲು ವಿಫಲವಾಯಿತು. 'ಅರ್ಜೆಂಟೀನಾ, 1985' ಚಿತ್ರದ ಎದುರು ಸೋಲು ಕಂಡಿತ್ತು. ಇದೇ ಚಿತ್ರ ಈ ತಿಂಗಳ ಆರಂಭದಲ್ಲಿ ಗೋಲ್ಡನ್ ಗ್ಲೋಬ್ ಪ್ರಶಸ್ತಿಗಳಲ್ಲಿ ಅತ್ಯುತ್ತಮ ಚಿತ್ರ (ಇಂಗ್ಲಿಷ್ ಅಲ್ಲದ ಭಾಷೆ) ವಿಭಾಗದಲ್ಲಿ ಭಾರತದ ಆರ್‌ಆರ್‌ಆರ್‌ ಚಿತ್ರವನ್ನು ಸೋಲಿಸಿತ್ತು.

ಅತ್ಯುತ್ತಮ ಚಿತ್ರ ವಿಭಾಗದಲ್ಲಿ ಫೈನಲ್‌ ನಾಮಿನೇಷನ್‌ ಆಗದೇ ಇದ್ದರೂ, ಅತ್ಯುತ್ತಮ ಗೀತೆ ವಿಭಾಗದಲ್ಲಿ ನಾಟು-ನಾಟು ಹಾಡು ಅಂತಿಮ ರೇಸ್‌ಗೆ ಆಯ್ಕೆಯಾಗಿದ್ದಕ್ಕೆ ಚಿತ್ರತಂಡ ಸಂಭ್ರಮ ಪಟ್ಟಿದೆ. 'ನಾವು ಇತಿಹಾಸವನ್ನು ರಚಿಸಿದ್ದೇವೆ. 95 ನೇ ಅಕಾಡೆಮಿ ಪ್ರಶಸ್ತಿಗಳಿಗೆ ಅತ್ಯುತ್ತಮ ಮೂಲ ಗೀತೆ ವಿಭಾಗದಲ್ಲಿ ನಾಟು-ನಾಟು ನಾಮನಿರ್ದೇಶನಗೊಂಡಿದೆ ಎಂದು ಘೋಷಿಸಲು ನಾವು ಹೆಮ್ಮೆಪಡುತ್ತೇವೆ ಎಂದು ಚಿತ್ರತಂಡ ಟ್ವಿಟರ್‌ನಲ್ಲಿ ಬರೆದುಕೊಂಡಿದೆ.

ಮಾರ್ಚ್‌ 12 ರಂದು ಪ್ರಶಸ್ತಿ ಪ್ರದಾನ ಸಮಾರಂಭ: ಒಟ್ಟು 301 ಚಲನಚಿತ್ರಗಳ ಪಟ್ಟಿಯನ್ನು ಜನವರಿ 9 ರಂದು ವೋಟಿಂಗ್ ಆಸ್ಕರ್ಸ್‌ಗಾಗಿ ಬಿಡುಗಡೆ ಮಾಡಲಾಯಿತು, ಇದು ಜನವರಿ 12 ರಿಂದ 17 ರವರೆಗೆ ನಡೆಯಿತು. ಈ ಎಲ್ಲಾ ಚಿತ್ರಗಳ ನಾಮನಿರ್ದೇಶನ ಮತದಾನವು ಜನವರಿ 12 ರಿಂದ 17 ರವರೆಗೆ ನಡೆಯಿತು. ಅಂತಿಮವಾಗಿ ಜನವರಿ 24 ರಂದು ಫೈನಲ್‌ ನಾಮಿನೇಷನ್‌ ಹೊರಬಿದ್ದಿದೆ. ಇದರಲ್ಲಿ RRR ಚಿತ್ರದ ಗೀತೆ ಅಗ್ರಸ್ಥಾನದಲ್ಲಿದೆ. 95ನೇ ಆಸ್ಕರ್‌ ಪ್ರಶಸ್ತಿ ಪ್ರದಾನ ಸಮಾರಂಭ ಮಾರ್ಚ್‌ 12 ರಂದು ಕ್ಯಾಲಿಫೋರ್ನಿಯಾದಲ್ಲಿ ನಡೆಯಲಿದೆ. 

ಹಾಲಿವುಡ್ ಸಿನಿಮಾ ಮಾಡುವಂತೆ ರಾಜಮೌಳಿಗೆ ಖ್ಯಾತ ನಿರ್ದೇಶಕ ಜೇಮ್ಸ್ ಕ್ಯಾಮರಾನ್ ಆಹ್ವಾನ

ಭಾರತೀಯ ಸಾಕ್ಷ್ಯಚಿತ್ರ 'ಆಲ್ ದಟ್ ಬ್ರೀತ್ಸ್' ಸಾಕ್ಷ್ಯಚಿತ್ರ ಫೀಚರ್ ಫಿಲ್ಮ್ ವಿಭಾಗದಲ್ಲಿ ನಾಮನಿರ್ದೇಶನಗೊಂಡಿದೆ. ಭಾರತೀಯ ಸಾಕ್ಷ್ಯಚಿತ್ರ ದಿ ಎಲಿಫೆಂಟ್ ವಿಸ್ಪರ್ಸ್ ಸಾಕ್ಷ್ಯಚಿತ್ರ ಕಿರುಚಿತ್ರ ವಿಭಾಗದಲ್ಲಿ ನಾಮನಿರ್ದೇಶನಗೊಂಡಿದೆ.

ನಾನು ಸಿನಿಮಾ ಮಾಡೋದು ಹಣಕ್ಕಾಗಿ, ವಿಮರ್ಶಕರ ಮೆಚ್ಚುಗೆಗೆ ಅಲ್ಲ; RRR ನಿರ್ದೇಶಕ ರಾಜಮೌಳಿ

RRR ಭಾರತೀಯ ಗಲ್ಲಾಪೆಟ್ಟಿಗೆಯಲ್ಲಿ ಸೂಪರ್ ಹಿಟ್ ಆಗಿದ್ದಲ್ಲದೆ, ವಿಮರ್ಶಕರು ಕೂಡ ಚಿತ್ರವನ್ನು ತುಂಬಾ ಮೆಚ್ಚಿದ್ದಾರೆ. ಈ ಚಿತ್ರದಲ್ಲಿ ರಾಮ್ ಚರಣ್, ಜೂನಿಯರ್ ಎನ್ಟಿಆರ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದರೆ, ಅಜಯ್ ದೇವಗನ್ ಮತ್ತು ಆಲಿಯಾ ಭಟ್ ಕೂಡ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರವು ವಿಶ್ವಾದ್ಯಂತ 1200 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ವಿದೇಶಗಳಲ್ಲಿಯೂ ಸಾಕಷ್ಟು ಜನಪ್ರಿಯತೆ ಗಳಿಸಿದೆ. ಈ ಚಿತ್ರ ಅಮೆರಿಕ ಮತ್ತು ಜಪಾನ್‌ನಲ್ಲಿ ಸಾಕಷ್ಟು ಜನಪ್ರಿಯವಾಗಿದೆ.

click me!