ದೇವೇಂದ್ರನೂ ಬೇಡ, ಆದಿತ್ಯನೂ ಬೇಡ ಮಹಾರಾಷ್ಟ್ರದ ಸಿಎಂ ಆಗಿ ಅನಿಲ್ ಕಪೂರ್!

By Web Desk  |  First Published Oct 31, 2019, 5:28 PM IST

ಮಹಾರಾಷ್ಟ್ರದ ಸಿಎಂ ಆಗಿ ಅನಿಲ್ ಕಪೂರ್! ಟ್ವಿಟರ್ ನಲ್ಲಿ ಪ್ರತಿಕ್ರಿಯೆ ಹೊರಹಾಕಿದ ಅಭಿಮಾನಿಗಳು/ ಕೂಲಾಗಿಯೇ ರಿಯಾಕ್ಷನ್ ಮನೀಡಿದ ಅನಿಲ್/ ನಾಯಕ್ ಸಿನಿಮಾದ ಚರ್ಚೆ ಬಲು ಜೋರು


ಮುಂಬೈ(ಅ.31) ಟ್ವಿಟರ್ ನಲ್ಲಿ ಮಹಾರಾಷ್ಟ್ರ ರಾಜಕಾರಣದ ಪ್ರತಿಧ್ವನಿಯಾಗಿದ್ದು ಬಾಲಿವುಡ್ ನಟ ಅನಿಲ್ ಕಪೂರ್ ಅವರೇ ಮಹಾರಾಷ್ಟ್ರದ ಸಿಎಂ ಆಗಲಿ ಎಂದು ಅನೇಕರು ಅಭಿಪ್ರಾಯ ಹೊರ ಹಾಕಿದ್ದಾರೆ. ಕೊನೆಗೆ ಅನಿಲ್ ಕಪೂರ್ ಸಹ ಪ್ರತಿಕ್ರಿಯೆ ನೀಡಿದ್ದಾರೆ.

ಅನಿಲ್ ಕಪೂರ್ ಸಿಎಂ ಆಗಿ ಕಾಣಿಸಿಕೊಂಡಿದ್ದ 2001ರ ನಾಯಕ್ ಸಿನಿಮಾ ಉಲ್ಲೇಖಿಸಿ ಯೂಸರ್ ಒಬ್ಬರು ಕಮೆಂಟ್ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯೆಯನ್ನು ನಂತರ ಅನಿಲ್ ನೀಡಿದ್ದಾರೆ.

Tap to resize

Latest Videos

ಮಹಾರಾಷ್ಟ್ರದ ಸಮಸ್ಯೆಗಳಿಗೆ ಎಲ್ಲಿಯವರೆಗೆ ಉತ್ತರ ಸಿಗುವುದಿಲ್ಲವೋ ಅಲ್ಲಿಯವರೆಗೆ ಅನಿಲ್ ಕಪೂರ್ ಅವರನ್ನೇ ಸಿಎಂ ಆಗಿ ಯಾಕೆ ಮಾಡಬಾರದು? ಸಿನಿಮಾದಲ್ಲಿ ಒಂದು ದಿನಕ್ಕೆ ಸಿಎಂ ಆಗಿದ್ದ ಅನಿಲ್ ಕಪೂರ್ ಮಾಡಿದ್ದ ಮೋಡಿ ಎಲ್ಲರಿಗೂ ಗೊತ್ತಿದೆ. ದೇವೇಂದ್ರ ಫಡ್ನವೀಸ್ ಮತ್ತು ಆದಿತ್ಯ ಠಾಕ್ರೆ ಈ ಬಗ್ಗೆ ಏನು ಹೇಳುತ್ತೀರಿ? ಎಂದು ಪ್ರಶ್ನೆ ಮಾಡಿದ್ದಾರೆ.

ಬಿಜೆಪಿ ಶಾಸಕಾಂಗ ಪಕ್ಷದ ನಾಯಕರಾಗಿ ದೇವೇಂದ್ರ ಮರು ಆಯ್ಕೆ, ಆದಿತ್ಯ ಠಾಕ್ರೆಗೆ ಧನ್ಯವಾದ ಎಂದ ಫಡ್ನವೀಸ್

ಇದಕ್ಕೆ ಪ್ರತಿಕ್ರಿಯೆ ನೀಡಿರುವ ಅನಿಲ್, ಮೈ ನಾಯಕ್ ಹಿ ಠೀಕ್ ಹೂ.. ಅಂದಿದ್ದಾರೆ. ಅಂದರೆ ನನಗೆ ಒಬ್ಬ ಉತ್ತಮ ನಟನಾಗಿ ಇರುವುದೆ ಇಷ್ಟ ಎಂದಿದ್ದಾರೆ.

ಇದಾದ ಮೇಲೆ ಟ್ವಿಟರ್ ನಲ್ಲಿ ಕಮೆಂಟ್ ಗಳ ಸುರಿಮಳೆಯಾಗಿದೆ.  ಕೆಲವರು ಇದಕ್ಕೆ ಸ್ಮೈಲಿ ಮೂಲಕವೂ ಉತ್ತರ ನೀಡಿದ್ದಾರೆ.ನಿಮ್ಮಷ್ಟು ಬುದ್ಧಿವಂತರು ಈ ರಾಝ್ಯದಲ್ಲಿ ಇಲ್ಲ..ನೀವು ಸಿಎಂ ಆಗಿ ಪ್ರಮಾಣ ತೆಗೆದುಕೊಳ್ಳಿ ಎಂಬ ಸಲಹೆಯನ್ನು ನೀಡಿದ್ದಾರೆ.

ಅನಿಲ್ ಕಪೂರ್, ರಾಣಿ ಮುಖರ್ಜಿ, ಅಮರೀಶ್ ಪುರಿ ಅಭಿನಯದ ಸಿನಿಮಾ 2001 ರಲ್ಲಿ ಸೂಪರ್ ಹಿಟ್ ಆಗಿತ್ತು. ಟಿವಿ  ಜರ್ನಲಿಸ್ಟ್ ಆಗಿ ಕೆಲಸ ಮಾಡುತ್ತಿದ್ದ ಅನಿಲ್  ಕಪೂರ್ ಸಿನಿಮಾದ ಮುಖ್ಯಮಂತ್ರಿಗೆ ಸವಾಲು ಹಾಕುತ್ತಾರೆ. ಒಂದು ದಿನ ಸಿಎಂ ಆದರೆ ಏನು ಮಾಡಿ ತೋರಿಸುತ್ತೇನೆ ಎನ್ನುತ್ತಾರೆ. ಸಿಎಂ ಸಹ ಇದಕ್ಕೆ ಒಪ್ಪಿ ಒಂದು ದಿನ ಕುರ್ಚಿ ಬಿಟ್ಟುಕೊಟ್ಟಾಗ ಅನಿಲ್ ಕಪೂರ್ ಮ್ಯಾಜಿಕ್ ಮಾಡುತ್ತಾರೆ. ಇದಾದ ಮೇಲೆ ಅನಿಲ್ ಕಪೂರ್ ಸಿಎಂ ಆಗಿ ಎಲೆಕ್ಟ್ ಆಗುತ್ತಾರೆ.

ಬಿಜೆಪಿ ಮತ್ತು ಶಿವಸೇನೆ ನಡುವೆ ಆಡಳಿದ ಹಗ್ಗಜಗ್ಗಾಟ ನಡೆಯುತ್ತಿದ್ದು ಅಂತಿಮವಾಗಿ ಒಂದು ಸೂತ್ರಕ್ಕೆ ಬಂದಂತೆ ಕಾಣುತ್ತಿದ್ದರೂ ಇನ್ನೂ ಸಿಎಂ ಆಯ್ಕೆ ಆಗಿಲ್ಲ. 

 

मैं nayak ही टीक हूँ 😎 https://t.co/zs7OPYEvCP

— Anil Kapoor (@AnilKapoor)
click me!