
ಐಶ್ವರ್ಯಾ ರೈ ಅವರ ಆಪ್ತ ಸರ್ಕಲ್‌ನಲ್ಲಿರುವ ಪ್ರಹ್ಲಾದ್ ಕಕ್ಕರ್!
ಲಿವುಡ್ ನಟಿ, ಮಾಜಿ ವಿಶ್ವ ಸುಂದರಿ ಐಶ್ವರ್ಯಾ ರೈ (Aishwarya Rai) ಹಾಗೂ ಅಮಿತಾಭ್ ಬಚ್ಚನ್ ಮಗ, ಬಾಲಿವುಡ್ ನಟ ಅಭಿಷೇಕ್ ಬಚ್ಚನ್ (Abhishek Bachchan) ಅವರಿಬ್ಬರ ಡಿವೋರ್ಸ್ ಬಗ್ಗೆ ಸುದ್ದಿ ಆಗುತ್ತಲೇ ಇತ್ತು. ಆದರೆ ಇದೀಗ ಸುತ್ತುತ್ತಿರುವ ಈ ಸುದ್ದಿಯ ಬಗೆಗಿನ ಪಕ್ಕಾ ಮಾಹಿತಿ ಬಹಿರಂಗವಾಗಿದೆ. ಅದನ್ನು ಸಂದರ್ಶನವೊಂದರಲ್ಲಿ ಐಶ್ವರ್ಯಾ ರೈ ಅವರ ಆಪ್ತ ಸರ್ಕಲ್‌ನಲ್ಲಿರುವ ಪ್ರಹ್ಲಾದ್ ಕಕ್ಕರ್ ಎನ್ನುವವರು 'ಜೀ ನ್ಯೂಸ್' ಸಂದರ್ಶನದಲ್ಲಿ ಬಹಿರಂಗೊಳಿಸಿದ್ದಾರೆ. ಹಾಗಿದ್ದರೆ ಅವರೇನು ಹೇಳಿದ್ದಾರೆ ನೋಡಿ..
ಪ್ರಹ್ಲಾದ್ ಕಕ್ಕರ್ ಅವರು 'ನನಗೆ ಐಶ್ವರ್ಯಾ ರೈ ಅವರು ತುಂಬಾ ಸಮಯದಿಂದ ಗೊತ್ತಿರುವವರು. ಅವರ ಮದುವೆಗೂ ಮೊದಲಿನಿಂದಲೂ ನಾನು ಅವರನ್ನು ಬಲ್ಲೆ. ಅವರು ನಟಿಯಾಗುವುದಕ್ಕೂ ಮೊದಲು ಮಾಡೆಲ್ ಆಗಿದ್ದ ಕಾಲದಿಂದಲೂ ನನಗೆ ಅವರು ಗೊತ್ತು. ಐಶ್ವರ್ಯಾ ರೈ ಅವರು ತುಂಬಾ ಶಿಸ್ತುಬದ್ಧ ಜೀವನ ನಡೆಸುವವರು ಹಾಗೂ ಕೌಟುಂಬಿಕ ಮೌಲ್ಯಗಳಿಗೆ ಹೆಚ್ಚು ಮಹತ್ವ ಕೊಡುವಂಥವರು. ಅವರ ಬಗ್ಗೆ ಅಪಪ್ರಚಾರ ನಡೆಸಿದರೂ ಕೂಡ ಅವರು ಅದಕ್ಕಾಗಿ ತಲೆ ಕೆಡಿಸಿಕೊಂಡು ಕುಳಿತುಕೊಳ್ಳುವಂಥವರಲ್ಲ.
ಸತ್ಯ ಸಂಗತಿ ಏನೆಂದರೆ, ಐಶ್ವರ್ಯಾ ರೈ ಅವರು ಯಾವತ್ತೂ ಕೂಡ ತಮ್ಮ ಗಂಡನ ಮನೆಯ್ನು ಬಿಟ್ಟು ಹೋಗಿಲ್ಲ. ಅವರು ಹೋಗುವಂಥವರೂ ಅಲ್ಲ. ಆದರೆ ಅವರು ತಾಯಿಯ ಮನೆಯನ್ನು ಕೂಡ ಬಿಟ್ಟಿಲ್ಲ. ಕಾರಣ , ಅವರ ತಾಯಿಯವರ ಅನಾರೋಗ್ಯ. ಐಶ್ವರ್ಯಾ ರೈ ತಾಯಿಯ ಆರೋಗ್ಯದಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಈ ಕಾರಣಕ್ಕೆ ಐಶ್ವರ್ಯಾ ರೈ ಅವರು ಮಗಳನ್ನು ಸ್ಕೂಲಿಗೆ ಬಿಟ್ಟು ತಾಯಿಯ ಮನೆಗೆ ಹೋಗುತ್ತಾರೆ. ಮಗಳನ್ನು ಸ್ಕೂಲಿನಿಂದ ಕರೆದುಕೊಂಡು ವಾಪಸ್ ತಮ್ಮ ಗಂಡನ ಮನೆಗೆ ಹೋಗುತ್ತಾರೆ. ಇದು ಬಹಳಷ್ಟು ವರ್ಷಗಳಿಂದ ನಡೆದಿದೆ.
ಮಗಳ ಸ್ಕೂಲಿಗೆ ರಜಾ ಇದ್ದಾಗ ತಮ್ಮ ತಾಯಿಯನ್ನೂ ತಮ್ಮ ಮನೆಗೆ ಕರೆದುಕೊಂಡು ಹೋಗಿ ಮಗಳ ಜೊತೆ ತಮ್ಮ ತಾಯಿಯನ್ನೂ ನೋಡಿಕೊಳ್ಳುತ್ತಾರೆ. ಅಲ್ಲಿ ಅತ್ತೆಯ ಮನೆಯನ್ನು ಕೂಡ ನಿಭಾಯಿಸುತ್ತಾರೆ. ಅವರಿಗೆ ಅತ್ತೆ ಜಯಾ ಬಚ್ಚನ್ ಜೊತೆಗೆ ಯಾವುದೇ ಸಮಸ್ಯೆ ಇಲ್ಲ. ಅಷ್ಟಕ್ಕೂ ಆ ಫ್ಯಾಮಿಲಿಯಲ್ಲಿ ಸಾಮಾನ್ಯರಂತೆ ಯಾರೂ ಇಡೀ ದಿನ ಮನೆಯಲ್ಲಿ ಇರುವುದಿಲ್ಲ. ಅಮಿತಾಭ್, ಅಭಿಷೇಕ್ ಸಿನಿಮಾ ಹಾಗೂ ಮನೆಯ ವ್ಯವಹಾರಗಳಲ್ಲಿ ಬ್ಯುಸಿ ಆಗಿರುತ್ತಾರೆ. ಅತ್ತೆ ಜಯಾ ಬಚ್ಚನ್ ರಾಜಕೀಯದಲ್ಲಿ ಬ್ಯುಸಿ ಇರ್ತಾರೆ.
ಇನ್ನು ಐಶ್ವರ್ಯಾ ರೈ ಅವರು ತಾಯಿ ಮನೆ ಹಾಗೂ ಅತ್ತೆ ಮನೆ ಎರಡೂ ಕಡೆಗಳಲ್ಲಿ ಅಗತ್ಯ ಕೆಲಸಗಳಲ್ಲಿ ಮುಳುಗಿರುತ್ತಾರೆ. ಜೊತೆಗೆ, ಮಗಳ ಜೊತೆ ಹೆಚ್ಚಿನ ಸಮಯ ಕಳೆಯುತ್ತಾರೆ. ಆ ಕಾರಣಕ್ಕೆ ಅವರಿಗೆ ಜಗಳವಾಡಲೂ ಕೂಡ ಸಮಯ ಇರುವುದಿಲ್ಲ. ಜೊತೆಗೆ, ಅವರಿಗೆಲ್ಲಾ ಜಗ:ವಾಡಲು ವಿಷಯಗಳೂ ಇರೋದಿಲ್ಲ..' ಎಂದಿದ್ದಾರೆ, ಅಭಿ-ಐಶೂ ಡಿವೋಸ್ ಕೇವಲ ಅದೊಂದು ವದಂತಿ, ಆ ರೂಮರ್‌ಗೆ ಯಾವುದೇ ಆಧಾರವಿಲ್ಲ.. ಅಷ್ಟಕ್ಕೂ ಐಶ್ವರ್ಯಾ ರೈ ಸಂಸಾರಕ್ಕೆ ವಿಚ್ಛೇದನ ನೀಡುವಷ್ಟು ದಡ್ಡಿಯೂ ಅಲ್ಲ..' ಎಂದಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.