ದರ್ಶನ್ ಚಿತ್ರದಲ್ಲಿ ಆರಡಿ ಮಾಜಿ ಸೈನಿಕ ಎಂಟ್ರಿ

Published : Sep 15, 2018, 10:52 AM ISTUpdated : Sep 19, 2018, 09:26 AM IST
ದರ್ಶನ್ ಚಿತ್ರದಲ್ಲಿ ಆರಡಿ ಮಾಜಿ ಸೈನಿಕ ಎಂಟ್ರಿ

ಸಾರಾಂಶ

ಯಜಮಾನ ಚಿತ್ರದಲ್ಲಿ ದರ್ಶನ್‌ಗೆ ಎದುರಿಗೆ ವಿಲನ್. ಸೆಟ್‌ನಲ್ಲಿ ಮೊದಲ ಮುಖಾಮುಖಿ. ದರ್ಶನ್ ಇವರನ್ನು ನೋಡಿದವರೇ ಹತ್ತಿರ ಬಂದು ನಿಮ್ಮಂತೆ ಕಾಲಿನ ಮಸಲ್ ಇರುವವರನ್ನು ನಾನು ನೋಡಿಯೇ ಇಲ್ಲ, ಒಳ್ಳೆಯದಾಗಲಿ ಎಂದರು.

ಅದನ್ನು ನೆನಪಿಸಿಕೊಂಡು ಈಗಲೂ ಖುಷಿಯಾಗುತ್ತಾರೆ ಅರುಣ್. ತಮಿಳಿನಲ್ಲಿ ವಿಶಾಲ್ ಜೊತೆ, ತೆಲುಗಿನಲ್ಲಿ ಜೂ.ಎನ್ ಟಿಆರ್ ಜತೆ ನಟಿಸಿದ ಖ್ಯಾತಿ ಇವರದು. ಇವರ ಎತ್ತರ ಆರಡಿ
ತೂಕ 112 ಕೆಜಿ. ಭಾರಿ ಜೀವ. ಒಂದೊಮ್ಮೆ ಬಾಹುಬಲಿ ಚಿತ್ರದ ಕಾಲಕೇಯ ಪ್ರಭಾಕರ್ ಅವರನ್ನು ನೆನಪಿಸುವ ಪರ್ಸನಾಲಿಟಿ.

ಇವರ ಮೂಲ ಕೇರಳ. ಬೆಳೆದಿದ್ದೆಲ್ಲಾ ಬೆಂಗಳೂರು. ಬೆಂಗಳೂರಿನ ಪ್ರಖ್ಯಾತ ಗವರ್ನಮೆಂಟ್ ಸೈನ್ಸ್ ಕಾಲೇಜಿನಲ್ಲಿ ಪಿಯುಸಿ ಓದುತ್ತಿರುವಾಗ ಸೈನ್ಯಕ್ಕೆ ಆಯ್ಕೆಯಾದರು. ಎಬಿ ವಾಜಪೇಯಿ ಅವರು ಪ್ರಧಾನಿಯಾಗಿದ್ದಾಗ ನಡೆದ ಆಪರೇಷಮ್ ಪರಾಕ್ರಮದಲ್ಲಿ ಭಾಗವಹಿಸಿದ ಕೀರ್ತಿ ಇವರಿಗಿದೆ. ಒಂಭತ್ತು ವರ್ಷ ಸೈನ್ಯದಲ್ಲಿದ್ದು, ಅನಂತರ ನಿವೃತ್ತಿ ತೆಗೆದುಕೊಂಡು ಬಂದವರಿಗೆ ಫಿಟ್‌ನೆಸ್ ಕ್ಷೇತ್ರ ಆರಿಸಿಕೊಂಡರು. ಅಲ್ಲಿ ಕೆಲವು ಸಮಯ ಕಳೆದು ತೂಕ
ಹೆಚ್ಚಿಸಿಕೊಂಡರು. 135 ಕೆಜಿ ಏರಿತು ತೂಕ. ನಂತರ ಜಿಮ್ ಸೇರಿ 112 ಕೆಜಿಗೆ ಬಂದು ಈಗ ಚಿತ್ರರಂಗ ಸೇರಿದ್ದಾರೆ.

ಕನ್ನಡದಲ್ಲಿ ದರ್ಶನ್ ಜೊತೆ ನಟಿಸಿ ಖುಷಿಯಾಗಿದ್ದಾರೆ. ದರ್ಶನ್ ಅವರ ಸರಳತೆಯನ್ನು ಕೊಂಡಾಡುವ ಅರುಣ್‌ಗೆ ಕನ್ನಡ ಚಿತ್ರರಂಗ ಒಪ್ಪಿಕೊಂಡು ಅಪ್ಪಿಕೊಳ್ಳುತ್ತದೆ ಅನ್ನುವ ವಿಶ್ವಾಸ. ನೋಡಲು ವಿಲನ್‌ನಂತೆ ಇರುವ ಇವರ ಮನಸ್ಸು ಮಾತ್ರ ಮಗು ಥರ. ಬಾಕ್ಸಿಂಗ್ ಮತ್ತು ಬೈಕಿಂಗ್ ಇವರ ಆಸಕ್ತಿ. ಒಳ್ಳೆಯ ಪರ್ಸನಾಲಿಟಿ ಇರುವ ಇವರು ಈ ಕಾಲದ ಯಾವುದೇ ಯಂಗ್ ಆ್ಯಂಡ್ ಎನರ್ಜೆಟಿಕ್ ಸಿಕ್ಸ್ ಪ್ಯಾಕ್ ವಿಲನ್‌ಗಳಿಗಿಂತ ಕಡಿಮೆ ಇಲ್ಲ

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Mark Movie: ಡಿಸೆಂಬರ್‌ನಲ್ಲಿ ಏಕಕಾಲಕ್ಕೆ ಸ್ಟಾರ್‌ಗಳ ಸಿನಿಮಾ ರಿಲೀಸ್;‌ ಕಿಚ್ಚ ಸುದೀಪ್‌ ಏನಂದ್ರು?
ಬಾಲಿವುಡ್ ನಿರ್ದೇಶಕ ವಿಕ್ರಂ ಭಟ್, ಪತ್ನಿ ಶ್ವೇತಾಂಬರಿ ಭಟ್ ಬಂಧನ; ಅಂತಿಂಥ ವಂಚನೆ ಕೇಸಲ್ಲ ಇದು ಅಂತೀರಾ?!