ಕತ್ರಿನಾ, ಜಾಕ್ವಲಿನ್ ಕಾದಾಟ?: ವಿಡಿಯೋ ಹೇಳುವುದೇ ಬೇರೆ!

Published : Jun 30, 2018, 09:42 PM ISTUpdated : Jun 30, 2018, 09:43 PM IST
ಕತ್ರಿನಾ, ಜಾಕ್ವಲಿನ್ ಕಾದಾಟ?: ವಿಡಿಯೋ ಹೇಳುವುದೇ ಬೇರೆ!

ಸಾರಾಂಶ

ಕತ್ರಿನಾ, ಜಾಕ್ವಲಿನ್ ಕಾದಾಟದ ಗುಸುಗುಸು ಜಾಕ್ವಲಿನ್ ವಿಡಿಯೋ ಹೇಳುವುದೇ ಬೇರೆ ಕತ್ರಿನಾ , ಜಾಕ್ವಲಿನ್ ಒಂದೇ ವಿಮಾನದಲ್ಲಿ ಎಲ್ಲವೂ ಸರಿಯಿದೆ ಎಂಬ ಸಂದೇಶ ರವಾನೆ

ಮುಂಬೈ(ಜೂ.30): ಬಾಲಿವುಡ್ ನಟಿಯರಾದ ಕತ್ರಿನಾ ಕೈಫ್ ಮತ್ತು ಜಾಕ್ವಲಿನ್ ಫರ್ನಾಂಡೀಸ್ ನಡುವೆ ಜಗಳ ನಡೆದಿದೆ ಎಂಬ ಗುಸುಗುಸು ಬಾಲಿವುಡ್ ಅಂಗಳದಲ್ಲಿ ಕೇಳಿ ಬರುತ್ತಿತ್ತು. ಸಲ್ಮಾನ್ ಖಾನ್ ಅಭಿನಯದ ದಬಂಗ್ ಸರಣಿಯ ಮುಂದಿನ ಚಿತ್ರದಲ್ಲಿ ಇಬ್ಬರೂ ನಟಿಸುತ್ತಿದ್ದು, ಈ ಮಧ್ಯೆ ಕತ್ರಿನಾ, ಜಾಕ್ವಲಿನ್ ನಡುವೆ ಸಂಬಂಧ ಸರಿಯಿಲ್ಲ ಎಂದು ಹೇಳಲಾಗುತ್ತಿತ್ತು.

ಆದರೆ ಜಾಕ್ವಲಿನ್ ತಮ್ಮ ಇನ್ಸಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿರುವ ವಿಡಿಯೋವೊಂದು ಈ ಎಲ್ಲ ಗಾಸಿಪ್ ಗಳಿಗೆ ತೆರೆ ಎಳೆದಿದೆ. ಹೌದು, ದಬಂಗ್ ಚಿತ್ರದ ಶೂಟಿಂಗ್ ಗಾಗಿ ಕತ್ರಿನಾ, ಜಾಕ್ವಲಿನ್ ಮತ್ತು ಸೋನಾಕ್ಷಿ ಸಿನ್ಹಾ ಒಟ್ಟಿಗೆ ಚಾರ್ಟೆಡ್ ವಿಮಾನದಲ್ಲಿ ಪ್ರಯಾಣ ಬೆಳೆಸಿದ್ದಾರೆ.

 

ವಿಮಾನದಲ್ಲಿ ವಿಡಿಯೋ ಮಾಡಿರುವ ಜಾಕ್ವಲಿನ್, ಕತ್ರಿನಾ ಹಾಗೂ ಸೋನಾಕ್ಷಿ ಜೊತೆ ಮಜವಾಗಿ ಕಾಲ ಕಳೆಯುತ್ತಿರುವುದಾಗಿ ಹೇಳಿದ್ದಾರೆ. ಈ ಮೂಲಕ ತಮ್ಮ ನಡುವೆ ಎಲ್ಲವೂ ಸರಿಯಿದೆ ಎಂಬ ಸಂದೇಶವನ್ನು ಜಾಕ್ವಲಿನ್ ಕಳುಹಿಸಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Karna Serial ನಿಧಿ ಅರೆಸ್ಟ್​: ಪೊಲೀಸರು ಬಂಧಿಸಿ ಜೈಲಿಗೆ ಹಾಕಿದ್ದೇಕೆ? ಅಷ್ಟಕ್ಕೂ ಆಗಿದ್ದೇನು?
ಅಬ್ಬಬ್ಬಾ! ಟ್ವಿಸ್ಟ್‌ ಅಂದ್ರೆ ಇದಪ್ಪಾ- ಎದ್ದು ಬಂದ ಸತ್ತ ಸಂಧ್ಯಾ: ಲಾಯರ್‌ ಭಾರ್ಗವಿನೇ ಜೈಲಿಗೆ ಹೋಗ್ತಾಳಾ?