ಎಲ್ಲಾ ಓಕೆ ಸ್ವಿಮ್ ಸೂಟ್ ಯಾಕೆ?: ಲಿಸಾ ಫೋಟೋಗೆ ವಿರೋಧ!

First Published Jun 30, 2018, 8:24 PM IST
Highlights

ಲಿಸಾ ಹೆಡೆನ್ ಅಪ್ಲೋಡ್ ಮಾಡಿರುವ ಫೋಟೋಗೆ ವಿರೋಧ

ಮಗನ ಜೊತೆಗಿನ ಫೋಟೋಗೂ ಯಾಕಿಷ್ಟು ವಿರೋಧ?

ಲಿಸಾ ಧರಿಸಿರುವ ಸ್ವಿಮ್ ಸೂಟ್ ಸರಿಯಿಲ್ವಂತೆ

ನವದೆಹಲಿ(ಜೂ.30): ನಟಿ ಲಿಸಾ ಹೆಡನ್ ಏನೇ  ಮಾಡಿದ್ರೂ ಅದು ಸುದ್ದಿಯಾಗುತ್ತೆ. ಲಿಸಾ ಅಪ್ಲೋಡ್ ಮಾಡುವ ಒಂದು ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡುತ್ತದೆ.

ಹೌದು, ಲಿಸಾ ಇತ್ತೀಚಿಗೆ ತಮ್ಮ ಇನ್ಸಟಾಗ್ರಾಮ್‌ನಲ್ಲಿ ಫೋಟೋವೊಂದನ್ನು ಅಪ್ಲೋಡ್ ಮಾಡಿದ್ದಾರೆ. ಆದರೆ ಈ ಫೋಟೋ ಕೆಲವು ನೆಟಿಜನ್ ಗಳ ಆಕ್ರೋಶಕ್ಕೆ ತುತ್ತಾಗಿದೆ. ಅಷ್ಟಕ್ಕೂ ಲಿಸಾ ತಮ್ಮ ಒಂದು ವರ್ಷದ ಮುದ್ದಾದ ಮಗ ಜ್ಯಾಕ್ ಜೊತೆಗಿರುವ ಫೋಟೋ ಅಪ್ಲೋಡ್ ಮಾಡಿದ್ದಾರೆ.

ಆದರೆ ಈ ಫೋಟೋದಲ್ಲಿ ಲಿಸಾ ಧರಿಸಿರುವ ಬಟ್ಟೆ ಮತ್ತು ಮಗನ ಜೊತೆಗೆ ಆಕೆಯ ಭಂಗಿ ನೆಟಿಜನ್ ಗಳ ಆಕ್ರೋಶಕ್ಕೆ ಕಾರಣವಾಗಿದೆ. ಲಿಸಾ ತಮ್ಮ ಮಗ ಜ್ಯಾಕ್ ಜೊತೆ ಬೀಚ್ ನಲ್ಲಿ ಎಂಜಾಯ್ ಮಾಡುತ್ತಿರುವ ಫೋಟೋ ಅಪ್ಲೋಡ್ ಮಾಡಿದ್ದಾರೆ.

 

My ❤️

A post shared by Lisa Haydon (@lisahaydon) on Jun 29, 2018 at 6:40am PDT

ಆದರೆ ಫೋಟೋದಲ್ಲಿ ಲಿಸಾ ಸ್ವಿಮ್ಮಿಂಗ್ ಸೂಟ್ ಧರಿಸಿರುವುದು ಮತ್ತು ಮಗುವಿನ ಜೊತೆ ಆಕೆ ಇರುವ ಭಂಗಿಯನ್ನು ಹಲವರು ಪ್ರಶ್ನಿಸಿದ್ದಾರೆ. ಮಗನ ಜೊತೆಗೂ ಈ ಭಂಗಿಯಲ್ಲಿ ಪೋಸ್ ಕೊಡುವುದು ಬೇಕಿತ್ತಾ ಎಂಬುದು ಹಲವರ ಪ್ರಶ್ನೆ.

 

 

🖖☀️ HK never fails to impress 💘

A post shared by Lisa Haydon (@lisahaydon) on May 28, 2018 at 5:50am PDT

ಇದೇ ವೇಳೆ ಲಿಸಾ ಅಪ್ಲೋಡ್ ಮಾಡಿರುವ ಫೋಟೋಗಳಿಗೆ ಕೆಲವರು ಮೆಚ್ಚುಗೆಯನ್ನೂ ವ್ಯಕ್ತಪಡಿಸಿದ್ದಾರೆ. ಮಗುವಿನ ಜೊತೆಗಿನ ತಯಿಯ ಭಾಂಧವ್ಯವನ್ನು ಲಿಸಾ ಚೆನ್ನಾಗಿಯೇ ಪ್ರಸ್ತುತಪಡಿಸಿದ್ದಾರೆ ಎಂಬುದು ಹಲವರ ಅಭಿಪ್ರಾಯ.

 

click me!