ಡಾ. ವಿಷ್ಣುವರ್ಧನ್ ಸಮಾಧಿ ವಿವಾದ: ವೀರಕಪುತ್ರ ಶ್ರೀನಿವಾಸ್ ಭೇಟಿ ಬಗ್ಗೆ ಈಶ್ವರ್ ಖಂಡ್ರೆ ಹೇಳಿದ್ದೇನು?

Published : Aug 30, 2025, 04:26 PM IST
Eshwar Khandre Veerakaputhra Srinivas

ಸಾರಾಂಶ

ವಿಷ್ಣು ಸೇನಾ ಸಮಿತಿ ಅಧ್ಯಕ್ಷ ವೀರಕ ಪುತ್ರ ಶ್ರೀನಿವಾಸ್ ಮನವಿ ಮಾಡಿದ್ದಾರೆ. ಈ ವಿಷಯವನ್ನು ಸಿಎಂ ಗಮನಕ್ಕೆ ತರುತ್ತೇವೆ. ಅರಣ್ಯ ಭೂಮಿಯಲ್ಲಿ ಸಮಾಧಿ ನಿರ್ಮಾಣ ಮಾಡೋ ಬಗ್ಗೆ ಏನು ಮಾಡಬೇಕು ನೋಡೋಣ. ಇವರ ಮನವಿ ಪರಿಶೀಲಿಸಿ ಮುಂದೇನು ಮಾಡಬಹುದು ಅಂತ ತೀರ್ಮಾನ ಮಾಡುತ್ತೇವೆ

ಕನ್ನಡದ ಮೇರುನಟ ಡಾ. ವಿಷ್ಣುವರ್ಧನ್ (Dr Vishnuvardhan Memorial) ಅವರ ಸ್ಮಾರಕ ಮರುನಿರ್ಮಾಣಕ್ಕೆ ಯೋಜನೆ ಸಿದ್ಧಪಡಿಸುತ್ತಿರುವುದು ಗೊತ್ತೇ ಇದೆ. ವಿಷ್ಣು ಅಭಿಮಾನಿ ವೀರಕಪುತ್ರ ಶ್ರೀನಿವಾಸ್ (Veerakaputhra Srinivas) ಅವರು ಕ್ಯಾಬಿನೆಟ್ ಮಂತ್ರಿ ಈಶ್ವರ ಖಂಡ್ರೆ (Eshwar Khandre) ಅವರನ್ನು ಭೇಟಿಯಾಗಿ ಈ ಬಗ್ಗೆ ಮಾತುಕತೆ ನಡೆಸಿದ್ದಾರೆ. ಅರಣ್ಯ ಸಚಿವ ಈಶ್ವರ್ ಖಂಡ್ರೆ ಭೇಟಿ ಮಾಡಿದ ವೀರಕ ಪುತ್ರ ಶ್ರೀನಿವಾಸ್ ಅವರು ದಿವಂಗತ ಮೇರುನಟ ಡಾ. ವಿಷ್ಣುವರ್ಧನ್ ಸಮಾಧಿ ವಿವಾದದ ಬಗ್ಗೆ ಮಾತನಾಡಲು ಭೇಟಿ ಅಗಿದ್ದಾರೆ.

ಸಮಾಜಸೇವಕ, ವಿಷ್ಣು ಅಭಿಮಾನಿ ವೀರಕಪುತ್ರ ಶ್ರೀನಿವಾಸ್ ಅವರು ವಿಕಾಸ ಸೌಧದಲ್ಲಿ ಅರಣ್ಯ ಸಚಿವರನ್ನ ಭೇಟಿ ಮಾಡಿ 'ವಿಷ್ಣು ಸಮಾಧಿ' ನಿರ್ಮಾಣಕ್ಕೆ ಜಾಗ ಕೊಡಿ ಎಂದು ಮನವಿ ಮಾಡಿದ್ದಾರೆ. ಅಭಿಮಾನ್ ಸ್ಟುಡಿಯೋ ಜಾಗದಲ್ಲಿ ಅವಕಾಶ ವಿಷ್ಣು ಸ್ಮಾರಕ ನಿರ್ಮಾಣಕ್ಕೆ ಜಾಗ ಕೊಡಿ ಎಂದು ಮನವಿ ಮಾಡಿದ್ದಾರೆ. ಅಭಿಮಾನ್ ಸ್ಟುಡಿಯೋ ಜಾಗ ಅರಣ್ಯ ಭೂಮಿ ಎಂದು ಘೋಷಣೆ ಮಾಡಿದ ಹಿನ್ನೆಲೆಯಲ್ಲಿ ಈ ಮಾತುಕತೆ ನಡೆದಿದೆ.

ಈ ಬಗ್ಗೆ ಹೇಳಿಕೆ ನೀಡಿರುವ ಅರಣ್ಯ ಸಚಿವ ಈಶ್ವರ್ ಕಂಡ್ರೆ 'ರಾಜ್ಯ ಅರಣ್ಯ ಅಂತ ಅಧಿಸೂಚನೆ ಆಗಿದೆ. ಆಗ 20 ಎಕರೆ ಜಾಗವನ್ನು 6 ಸಾವಿರ ರೂಪಾಯಿ ಗೆ ಮಂಜೂರು ಮಾಡಲಾಗಿತ್ತು. ಆದರೆ ಆಗ ಶರತ್ತು ಹಾಕಲಾಗಿತ್ತು. ಸ್ಟುಡಿಯೋ ಅಭಿವೃದ್ಧಿ ಮಾಡಬೇಕು ಅಂತ ಹೇಳಲಾಗಿತ್ತು. ಷರತ್ತು ಉಲ್ಲಂಘನೆ ಮಾಡಿದ್ರೆ ಭೂಮಿಯನ್ನ ವಾಪಾಸ್ ಪಡೆಯಲಾಗುತ್ತೆ ಅಂತ ಕೂಡ ಹೇಳಲಾಗಿತ್ತು.

ಅಭಿಮಾನ್ ಸ್ಟುಡಿಯೋ ಅಭಿವೃದ್ಧಿಗೆ 10 ಎಕರೆ ಜಾಗ ಮಾರಾಟ ಮಾಡೋಕೆ ಸರ್ಕಾರಕ್ಕೆ ಮನವಿ ಕೊಡುತ್ತಾರೆ. ಆಗ ಸ್ಟುಡಿಯೋ ಅಭಿವೃದ್ಧಿ ದೃಷ್ಟಿಯಿಂದ ಸರ್ಕಾರ ಪರವಾನಿಗೆ ಕೊಟ್ಟಿತ್ತು. ಆದರೆ ಅವರು ಆಗ ಹೇಳಿದಂತೆ ಆ ಸ್ಟುಡಿಯೋ ಅಭಿವೃದ್ಧಿ ಆಗಲಿಲ್ಲ. ಮತ್ತೆ ಈಗ ಉಳಿದಿರೋ 10 ಎಕರೆ ಜಾಗವನ್ನು ಮಾರಾಟ ಮಾಡೋಕೆ ಪ್ಲಾನ್ ಮಾಡಿದ್ದಾರೆ.

ಇದೀಗ ವಿಷ್ಣು ಸೇನಾ ಸಮಿತಿ ಅಧ್ಯಕ್ಷ ವೀರಕ ಪುತ್ರ ಶ್ರೀನಿವಾಸ್ ಮನವಿ ಮಾಡಿದ್ದಾರೆ. ಈ ವಿಷಯವನ್ನು ಸಿಎಂ ಗಮನಕ್ಕೆ ತರುತ್ತೇವೆ. ಅರಣ್ಯ ಭೂಮಿಯಲ್ಲಿ ಸಮಾಧಿ ನಿರ್ಮಾಣ ಮಾಡೋ ಬಗ್ಗೆ ಏನು ಮಾಡಬೇಕು ನೋಡೋಣ. ಇವರ ಮನವಿ ಪರಿಶೀಲಿಸಿ ಮುಂದೇನು ಮಾಡಬಹುದು ಅಂತ ತೀರ್ಮಾನ ಮಾಡುತ್ತೇವೆ' ಎಂದಿದ್ದಾರೆ ಅರಣ್ಯ ಸಚಿವ ಈಶ್ವರ ಖಂಡ್ರೆ.

ಇನ್ನು, ನಟ ವಿಷ್ಣುವರ್ಧನ್ ಸಮಾಧಿ ಮರುನಿರ್ಮಾಣಕ್ಕೆ ಕನ್ನಡದ ಖ್ಯಾತ ನಿರ್ಮಾಪಕ ಕೆ. ಮಂಜು ಹಾಗೂ ನಟ ಕಿಚ್ಚ ಸುದೀಪ್ ಕೂಡ ಸಹಮತ ವ್ಯಕ್ತಪಡಿಸಿದ್ದು, ಈ ಬಗ್ಗೆ ಎಲ್ಲಾ ಸಹಾಯ ಮಾಡುವುದಾಗಿ ಭರವಸೆ ನೀಡಿದ್ದಾರೆ. ನಟ ಶಿವರಾಜ್‌ಕುಮಾರ್ ಕೂಡ ವಿಷ್ಣು ಸ್ಮಾರಕ ನಿರ್ಮಾಣಕ್ಕೆ ಕೈ ಜೋಡಿಸುವುದಾಗಿ ಹೇಳಿದ್ದು, ಕೆ ಮಂಜು ಅವರು ಈ ಸಂಗತಿಯನ್ನು ವೀರಕಪುತ್ರ ಶ್ರೀನಿವಾಸ್ ಅವರ ಬಳಿ ಮಾತುಕತೆ ನಡೆಸಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

'ನನಗೆ ಡೈವೋರ್ಸ್‌ ಸಿಗೋದು ಪಕ್ಕಾ..' ನ್ಯಾಷನಲ್‌ ಕ್ರಶ್‌ ಗಿರಿಜಾ ಓಕ್‌ ಫೋಟೋಗೆ ಫ್ಯಾನ್ಸ್ ರಿಯಾಕ್ಷನ್‌
ಐಎಂಡಿಬಿ 2025 ಪಟ್ಟಿಯಲ್ಲಿ ದಾಖಲೆ: ಮೂವರು ಕನ್ನಡದ ತಾರೆಗಳಿಗೆ ಟಾಪ್‌ 10ರಲ್ಲಿ ಸ್ಥಾನ!