'ಕೌನ್ ಬನೇಗಾ ಕರೋಡ್‌ಪತಿ'ಯಲ್ಲಿ ಹರಿಪ್ರಿಯಾ ಈ ಪ್ರಶ್ನೆ ಕ್ವಿಟ್ ಮಾಡಿದ್ಯಾಕೆ? ನಿಮ್ಗೆ 'ಉತ್ತರ' ಗೊತ್ತಾ?

Published : Aug 30, 2025, 02:26 PM IST
Amitabh Bachchan

ಸಾರಾಂಶ

ಅಮಿತಾಭ್ ಬಚ್ಚನ್ ಅವರು ಕೇಳಿದ ಈ ಪ್ರಶ್ನೆಗೆ ಸರಿಯುತ್ತರ ಕೊಡಲು ವಿಫಲರಾದ ಸ್ಪರ್ಧಿ ಹರಿಪ್ರಿಯಾ ಅವರು ತಾವು ಈ ಪ್ರಶ್ನೆಯನ್ನು ಕ್ವಿಟ್ ಮಾಡಿದ್ದಾರೆ. ಆ ಮೂಲಕ ಅವರು ಅದಕ್ಕೂ ಮೊದಲು ಗೆದ್ದಿದ್ದ 12.5 ಲಕ್ಷ ರೂ,ಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.

ಸ್ಪರ್ಧಿ ಹರಿಪ್ರಿಯಾ ಸಾಕೇತಪುರಂ (Hari Priya) ಅವರಿಗೆ ಬಾಲಿವುಡ್ ಬಿಗ್‌ ಬಿ ಅಮಿತಾಭ್ ಬಚ್ಚನ್ (Amitabh Bachchan) ನಡೆಸಿಕೊಡುತ್ತಿರುವ 'ಕೌನ್ ಬನೇಗಾ ಕರೋಡ್‌ಪತಿ'ಯಲ್ಲಿ (Kaun Banega Crorepati Season 17) ಈ ಪ್ರಶ್ನೆ ಕೇಳಲಾಗಿದೆ. ರೂ. 25 ಲಕ್ಷ ಗೆಲ್ಲಲು ಕೇಳಲಾದ ಈ ಪ್ರಶ್ನೆ ಇದಾಗಿದ್ದು, ಅದು ಹೀಗಿದೆ.. 'ಪರಮಹಂಸ ಯೋಗಾನಂದ ಜೀವನ ಚರಿತ್ರೆ ಪ್ರಕಾರ, ಯಾವ ಹಣ್ಣನ್ನು ಸೇವಿಸಲು ಅವರು ಮಹಾತ್ಮಾ ಗಾಂಧಿಗೆ ಸಲಹೆ ನೀಡಿದ್ದರು ಹಾಗೂ ಹಾಗು ಕ್ಯಾಲಿಪೋರ್ನಿಯಾದಿಂದ ವಾರ್ಧಾಗೆ ಯಾವ ಗಿಡಗಳನ್ನು ಕಳುಹಿಸಿಕೊಟ್ಟಿದ್ದರು?'

ಇದಕ್ಕೆ ಆಯ್ಕೆಯಾಗಿ 1- ಕಂಟೋಲೌಪ್, 2- ಹಕಲ್‌ಬೆರ್ರಿ, 3- ಅವಕಾಡೋ ಹಾಗೂ 4- ಪೀಚ್ ಇತ್ತು. ಈ ಪ್ರಶ್ನೆಗೆ ಸರಿಯುತ್ತರ ಕೊಡಲು ವಿಫಲರಾದ ಸ್ಪರ್ಧಿ ಹರಿಪ್ರಿಯಾ ಸಾಕೇತಪುರಂ ಅವರು ಈ ಪ್ರಶ್ನೆಯನ್ನು ಕ್ವಿಟ್ ಮಾಡಿದ್ದಾರೆ. ನೀವು ಈ ಕಾರ್ಯಕ್ರಮ ನೋಡಿದ್ದರೆ ಅಥವಾ ಈ ಪ್ರಶ್ನೆಗೆ ನಿಮಗೇನಾದರೂ ಉತ್ತರ ಗೊತ್ತಿದ್ದರೆ ಖಂಡಿತ ಕಾಮೆಂಟ್‌ ಮೂಲಕ ತಿಳಿಸಬಹುದು.

ಡಾ ರಾಜ್‌ಕುಮಾರ್-ಶಿವರಾಜ್‌ಕುಮಾರ್ ಒಟ್ಟಿಗೇ ನಟಿಸಿದ ಸಿನಿಮಾಗಳಿವು; ನೋಡಿದ್ದೀರಾ?

ಅಮಿತಾಭ್ ಬಚ್ಚನ್ ಅವರು ಕೇಳಿದ ಈ ಪ್ರಶ್ನೆಗೆ ಸರಿಯುತ್ತರ ಕೊಡಲು ವಿಫಲರಾದ ಸ್ಪರ್ಧಿ ಹರಿಪ್ರಿಯಾ ಅವರು ತಾವು ಈ ಪ್ರಶ್ನೆಯನ್ನು ಕ್ವಿಟ್ ಮಾಡಿದ್ದಾರೆ. ಆ ಮೂಲಕ ಅವರು ಅದಕ್ಕೂ ಮೊದಲು ಗೆದ್ದಿದ್ದ 12.5 ಲಕ್ಷ ರೂ,ಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಅಪಾರ ಭರವಸೆ ಹಾಗೂ ಜ್ಷಾನ ಹೊಂದಿದ್ದ ಅವರು ಕೋಟಿ ರೂಪಾಯಿ ಗೆದ್ದು 'ಕರೋಡ್‌ಪತಿ' ಆಗಲು ಭಾರೀ ಉತ್ಸುಕತೆ ಹೊಂದಿದ್ದರು. ಆದರೆ, ಅವರ ಮಹದಾಸೆ ಕೈಗೂಡಲಿಲ್ಲ.

ಹೌದು, ಬಾಲಿವುಡ್‌ನ ಮೇರು ನಟ ಅಮಿತಾಭ್ ಬಚ್ಚನ್ ಅವರು ಇದೀಗ ಮತ್ತೆ ಕೌನ್ ಬನೇಗಾ ಕರೋಡ್‌ಪತಿ ಸೀಸನ್-17' ರಿಯಾಲಿಟಿ ಶೋ ನಡೆಸಿಕೊಡುತ್ತಿದ್ದಾರೆ. 11 ಆಗಸ್ಟ್ 2025ರಿಂದ ಶುರುವಾಗಿರುವ ಈ ಸೀಸನ್, ಸೋಮವಾರದಿಂದ ಶುಕ್ರವಾರ, ರಾತ್ರಿ 9.00 ಗಂಟೆಗೆ ಸೋನಿ ಎಂಟರ್‌ಟೈನ್‌ಮೆಂಟ್ ಟಿವಿಯಲ್ಲಿ ಪ್ರಸಾರ ಆಗುತ್ತಿದೆ. ಜೊತೆಗೆ, 'ಸೋನಿ ಲೈವ್'ನಲ್ಲೂ ಸ್ಟ್ರೀಮ್ ಆಗುತ್ತಿದೆ. ಸಾಕಷ್ಟು ವೀಕ್ಷಕರು ಈ ಶೋ ನೋಡುತ್ತಿದ್ದು, ಒಳ್ಳೆಯ ಟಿಅರ್‌ಪಿ ದಾಖಲಾಗಿದೆ ಎಂಬ ಮಾಹಿತಿ ಇದೆ.

ಡಾ ರಾಜ್‌ಕುಮಾರ್ ದೇಹದ ಮೇಲೆ ಚೇಳು ಕುಳಿತುಕೊಳ್ಳುತ್ತದೆ; ಅದನ್ನವರು ತೆಗೆದು ನೆಲಕ್ಕೆ ಬಿಡ್ತಾರೆ..!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಸೊಂಟ ಹಾಗೂ ತಲೆಯ ಮೇಲೆ ತಲವಾರು ಇರಿಸಿಕೊಂಡು ಬಾಲೆಯ ಬೆಲ್ಲಿ ಡಾನ್ಸ್‌: ವೀಡಿಯೋ ಭಾರಿ ವೈರಲ್
'ಹೊಟ್ಟೆಗೆ ಹಿಟ್ಟಿಲ್ಲದೇ ಬದುಕಬಲ್ಲೆ, ಆದ್ರೆ 'ಅದಿಲ್ಲದೇ' ಬದುಕಲಾರೆ: ಮದುವೆ ಬೆನ್ನಲ್ಲೇ ಸಮಂತಾ ಹಳೆಯ ಹೇಳಿಕೆ ವೈರಲ್!