
ಬೆಂಗಳೂರು(ಜೂ.11): ಕನ್ನಡದ ನಟ ಲೂಸ್ ಮಾದ ಯೋಗಿಗೆ ಕಂಕಣ ಭಾಗ್ಯ ಕೂಡಿ ಬಂದಿದೆ. ಯೋಗಿ, ಮನ ಮೆಚ್ಚಿದ ಹುಡುಗಿಯನ್ನು ಕೈ ಹಿಡಿಯಲಿದ್ದಾರೆ.
ತಮ್ಮ ಸ್ಟೈಲೀಶ್ ಅಭನಯದ ಮೂಲಕವೇ ಗುರುತಿಸಿಕೊಂಡ ಯೋಗಿ ತಮ್ಮ ಬಹುಕಾಲದ ಗೆಳತಿ ಸಾಹಿತ್ಯ ಅರಸ್ ಜೊತೆ ಇಂದು ನಿಶ್ಚತಾರ್ಥ ಮಾಡಿಕೊಳ್ಳಲಿದ್ದಾರೆ. ಯಡಿಯೂರ್ ಲೇಕ್'ನಲ್ಲಿರುವ ಸಾಹಿತ್ಯ ನಿವಾಸದಲ್ಲಿ ಸುಮಾರು 11 ಗಂಟೆ ಶುಭಗಳಿಗೆಯಲ್ಲಿ ಯೋಗಿ ಸಾಹಿತ್ಯ ಕುಟುಂಬದವರು ಹಾಗೂ ಆಪ್ತರ ಸಮ್ಮುಖದಲ್ಲಿ ಯೋಗಿ, ಸಾಹಿತ್ಯ ಉಂಗುರ ತೊಡಿಸುವ ಮೂಲಕ ನಿಶ್ಚಿತಾರ್ಥ ಶಾಸ್ತ್ರ ಮುಗಿಸಲಿದ್ದಾರೆ.
ಇನ್ನು ನವೆಂಬರ್ 2 ರಂದು ಮದುವೆ ಡೇಟ್ ಫಿಕ್ಸ್ ಆಗಿದ್ದು. ಚಿತ್ರರಂಗದ ಕಲಾವಿದರು, ಅಭಿಮಾನಿಗಳು ಆಪ್ತರ ಸಮ್ಮುಖದಲ್ಲಿ ಯೋಗಿ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.