ದುನಿಯಾ ವಿಜಿಗೆ ಮೊದಲ ‘ಯು’!

Published : Oct 03, 2016, 12:14 PM ISTUpdated : Apr 11, 2018, 12:51 PM IST
ದುನಿಯಾ ವಿಜಿಗೆ ಮೊದಲ ‘ಯು’!

ಸಾರಾಂಶ

ದುನಿಯಾ ವಿಜಯ್ ಸಿನಿ ಬದುಕಿನಲ್ಲಿ ಈಗೊಂದು ಅದ್ಭುತ ಘಟಿಸಿದೆ. ಸೂರಿ ನಿರ್ದೇಶನದ ‘ದುನಿಯಾ’ ಚಿತ್ರದಿಂದ 28ಕ್ಕೂ ಹೆಚ್ಚು ಚಿತ್ರಗಳಲ್ಲಿ ವಿಜಯ್ ನಟಿಸಿದ್ದಾರೆ. ಈಗ ಯೋಗರಾಜ್ ಭಟ್ ನಿರ್ದೇಶನದ ‘ದನ ಕಾಯೋನು’ ಸಿನಿಮಾ ತೆರೆಗೆ ಬರುತ್ತಿದೆ. ಅಂದಹಾಗೆ ಈ ಚಿತ್ರಕ್ಕೆ ಸೆನ್ಸಾರ್ ಮುಗಿದಿದ್ದು ‘ಯು’ ಪ್ರಮಾಣ ಪತ್ರ ಸಿಕ್ಕಿದೆ. ಅದರಲ್ಲೇನು ವಿಶೇಷತೆ ಅಂತೀರಾ? ಅಲ್ಲೇ ಇರೋದು ಗುಟ್ಟು! ವಿಜಯ್ ನಟಿಸಿರುವ ಯಾವ ಚಿತ್ರಕ್ಕೂ ಇದುವರೆಗೂ ‘ಯು’ ಸರ್ಟಿಫಿಕೆಟ್ ಸಿಕ್ಕೇ ಇಲ್ಲ! ಎಲ್ಲ ಸಿನಿಮಾಗಳೂ ‘ಎ’ ಇಲ್ಲವೇ ‘ಯು/ಎ’ ಸರ್ಟಿಫಿಕೆಟ್ ಪಡೆದೇ ತೆರೆಕಂಡಿದ್ದವು. ತಮ್ಮ ಕೆರಿಯರ್‌ನಲ್ಲಿ ಯಾವಾಗ ಪರಿಪೂರ್ಣವಾಗಿ ‘ಯು’ ಸರ್ಟಿಪಿಕೆಟ್ ಪಡೆದುಕೊಳ್ಳುತ್ತೇನೋ ಎಂದು ಕಾಯುತ್ತಲೇ ಬಂದಿದ್ದ ವಿಜಯ್ ಅವರು 20ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಾಯಕ ನಟರಾಗಿ ಕಾಣಿಸಿಕೊಂಡಿದ್ದಾರೆ.

‘ನಾನು ಚಿತ್ರರಂಗಕ್ಕೆ ಬಂದು 10 ವರ್ಷಗಳಾಗುತ್ತಿವೆ. ಯಾವ ಸಿನಿಮಾ ಕೂಡ ನನ್ನನ್ನು ಫ್ಯಾಮಿಲಿ ಹೀರೋ ಅಂತ ಗುರುತಿಸಲಿಲ್ಲ. ಮೊದಲ ಬಾರಿಗೆ ದನ ಕಾಯೋನು ಚಿತ್ರ ನನಗೆ ಫ್ಯಾಮಿಲಿ ಸರ್ಟಿಫಿಕೆಟ್ ಕೊಡಿಸಿದೆ’ ಎನ್ನುತ್ತಾರೆ ವಿಜಯ್. ಅಲ್ಲದೆ ಯೋಗರಾಜ್ ಭಟ್ ಅವರ ಈ ಚಿತ್ರದಲ್ಲಿ ಸನ್ನಿ ಲಿಯೋನ್ ನಟಿಸಿರುತ್ತಿದ್ದರೂ ‘ಯು’ ಸರ್ಟಿಫಿಕೆಟೇ ಸಿಗುತ್ತಿತ್ತೆಂಬ ಮಾತು ‘ದನ ಕಾಯೋನು’ ಚಿತ್ರತಂಡದ್ದು. ಅಂದಹಾಗೆ ಈ ಸಿನಿಮಾ ಅಕ್ಟೋಬರ್ 7ಕ್ಕೆ ತೆರೆ ಕಾಣುತ್ತಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಪ್ರಿಯಾಂಕಾ ಉಪೇಂದ್ರ ದಾಂಪತ್ಯ ಜೀವನಕ್ಕೆ 25 ವರ್ಷ: ಸ್ಟಾರ್ ಜೋಡಿಗಳ Love Story ಸೂಪರ್
ಧುರಂಧರದಲ್ಲಿ ರಣವೀರ್ ಲುಕ್‌ ಬದಲಿಸಿದ ಮಾಜಿ ಮಹಿಳಾ ಟೆಕ್ಕಿ, ಯಾರೀಕೆ ಪ್ರೀತಿಶೀಲ್? ದಿನವೊಂದಕ್ಕೆ ಎಷ್ಟು ವೇತನ??