ಡಿಪ್ಪಿಗಾಗಿ ಕಾಯುತ್ತಿದ್ದಾರಾ ಸಲ್ಲು ಬಾಯ್ ?

Published : Mar 28, 2019, 01:25 PM IST
ಡಿಪ್ಪಿಗಾಗಿ ಕಾಯುತ್ತಿದ್ದಾರಾ ಸಲ್ಲು ಬಾಯ್ ?

ಸಾರಾಂಶ

ಕನ್ನಡತಿ ದೀಪಿಕಾ ಪಡುಕೋಣೆ ಬಾಲಿವುಡ್‌ನಲ್ಲಿ ಬಹು ಬೇಡಿಕೆಯ ನಟಿ. ಅಭಿನಯ, ಸೌಂದರ್ಯ ಎಲ್ಲದರಲ್ಲಿಯೂ ಮೇಲುಗೈ ಸಾಧಿಸಿರುವ ಈ ನಟಿಗಾಗಿಯೇ ಸಲ್ಲು ಚಿತ್ರ ಮಾಡಲು ಕಾಯುತ್ತಿದ್ದಾರಾ?

 

'ದೀಪಿಕಾ ಪಡುಕೋಣೆ ಜೊತೆ ನಟಿಸುವ ಕನಸು ನನಸಾಗದೆ ಉಳಿದಿದೆ....' ಎಂದು ಕಾರ್ಯಕ್ರಮವೊಂದರಲ್ಲಿ ಹೇಳಿಕೊಂಡಿದ್ದಾರೆ ಬಾಲಿವುಡ್ ಬ್ಯಾಡ್ ಬಾಯ್ ಸಲ್ಮಾನ್ ಖಾನ್ ಹೇಳಿಕೊಂಡಿದ್ದಾರೆ.

 

53 ವರ್ಷವಾದರೂ ಎಂಗ್ ಆ್ಯಂಡ್ ಎನರ್ಜಿಟಿಕ್ ಬಾಯ್ ಎಂದೇ ಫೇಮಸ್ ಆದ ಸಲ್ಮಾನ್ ಖಾನ್‌ಗೆ ಹಾಗೊಂದು ಆಸೆ ಇರುವುದು ಸುಳ್ಳಲ್ಲ. ದೀಪಿಕಾ ಪಡುಕೋಣೆ ಜೊತೆ ರೊಮ್ಯಾಂಟಿಕ್ ಚಿತ್ರವೊಂದರಲ್ಲಿ ನಟಿಸಬೇಕೆಂಬುವುದು ಸಲ್ಲುವಿನ ಬಹುದಿನಗಳ ಆಸೆ.

ಬಾಲಿವುಡ್ ಮೊಸ್ಟ್ ಬ್ಯುಟಿಫುಲ್ ಆ್ಯಂಡ್ ಹಾಟ್ ಹುಡುಗಿಯರೊಂದಿಗೆ ನಟಿಸಿರುವ ಸಲ್ಲುಗೆ ಇದುವರೆಗೂ ಯಾವ ನಿರ್ದೇಶಕರೂ ದೀಪಿಕಾ ಜೊತೆ ಸ್ಕ್ರಿಪ್ಟ್ ತಯಾರಿಸಿಲ್ಲ, ಎಂದು ಬೇಸರಿಸಿಕೊಂಡಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚು ಟ್ರೋಲ್ ಆಗುವ ಸೆಲಬ್ರಿಟಿಗಳಿವರು

ಪತ್ರಕರ್ತೆಯೊಬ್ಬರು ‘ದೀಪಿಕಾ ಜೊತೆ ಯಾವುದೇ ಸಿನಿಮಾ ಬಂದರೂ NO ಹೇಳದೆ ಅಭಿನಯಿಸುತ್ತೀರಾ ?’ ಎಂದು ಕೇಳಿದ್ದಕ್ಕೆ ಸಲ್ಮಾನ್, ‘ಬಾಲಿವುಡ್ ನಲ್ಲಿ ಹಿಟ್ ಸಿನಿಮಾಗಳ ಮೂಲಕ, ಜನರ ಸೇವೆ ಮಾಡುವ ಮೂಲಕ ಎಲ್ಲರ ಪ್ರೀತಿಗಳಿಸಿರುವ ದೀಪಿಕಾಳೊಂದಿಗೆ ಸಿನಿಮಾ ಮಾಡಲೂ ಅರ್ಹತೆ ಇರಬೇಕು...’ ಎಂದಿದ್ದಾರೆ.

ಸಲ್ಮಾನ್ ಆಲ್ ಟೈಂ ಫೇವರೇಟ್ ಆಗಿದ್ದ ನಟಿ ಕತ್ರೀನಾ ಕೈಫ್. ಇದೀಗ ಸಲ್ಲು ಒಟ್ಟಿಗೆ ಕತ್ರೀನಾ ದೂರವಾಗಿದ್ದಾರೆ. ದೀಪಿಕಾ ಫೇವರೇಟ್ ನಟಿ ಎನ್ನುವಂತೆ ಮಾತನಾಡುತ್ತಿದ್ದಾರೆ. ಹೇಗಿರುತ್ತೆ ಡಿಪ್ಪಿ-ಸಲ್ಲು ಒಟ್ಟಾಗಿ ನಟಿಸಿದರೆ?

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ರಗಡ್‌ ಕಾಪ್‌, ಮ್ಯಾಕ್ಸಿಮಮ್‌ ಮಾಸ್‌.. 'ಮಾರ್ಕ್' ಕಥೆ ಬಗ್ಗೆ ಸ್ಫೋಟಕ ಸತ್ಯ ಬಿಚ್ಚಿಟ್ಟ ಕಿಚ್ಚ ಸುದೀಪ್!
ನನ್ನ ತಂದೆ ಕೂಡ ಗುಮ್ಮಡಿ ನರಸಯ್ಯ ಅವರಂತೆಯೇ ಜನರ ಸೇವೆ ಮಾಡಿದವರು: ನಟ ಶಿವಣ್ಣ ಹೇಳಿದ್ದೇನು?