
ಕನ್ನಡ ಚಿತ್ರರಂಗದ ಮೇರು ನಟರಲ್ಲಿ ಡಾ ವಿಷ್ಣುವರ್ಧನ್ (Vishnuvardhan) ಕೂಡ ಒಬ್ಬರು. ನಾಗರಹಾವು ಸಿನಿಮಾದಲ್ಲಿ ನಾಯಕನಟರಾಗುವ ಮೂಲಕ ಕನ್ನಡ ಚಿತ್ರರಂಗವನ್ನು ಪ್ರವೇಶಿಸಿದ ನಟ ವಿಷ್ಣುವರ್ಧನ್ ಅವರು, ಅದಕ್ಕೂ ಮೊದಲು ವಂಸವೃಕ್ಷ ಸಿನಿಮಾ ಮೂಲಕ ಪೋಷಕನಟರಾಗಿ ಕಾಲಿಟ್ಟಿದ್ದರು. ಆದರೆ ನಾಗರಹಾವು ಚಿತ್ರವು ಸೂಪರ್ ಹಿಟ್ ಆಗುವ ಮೂಲಕ ನಟ ವಿಷ್ಣುವರ್ಧನ್ ಅವರು ಸ್ಯಾಂಡಲ್‌ವುಡ್‌ನಲ್ಲಿ ಸ್ಟಾರ್ ನಟರಾಗಿ ಬೆಳೆದವರು. ಬಳಿಕ ಅವರು 200ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿ ಕನ್ನಡ ಮಾತ್ರವಲ್ಲ, ಇಡೀ ಭಾರದ ಚಿತ್ರರಂಗವೇ ಗುರುತಿಸಿ ಮನ್ನಣೆ ಕೊಡವಂತೆ ಬೆಳೆದರು.
ಇಂಥ ನಟ ವಿಷ್ಣುವರ್ಧನ್ ಅವರು ಒಮ್ಮೆ ಪತ್ರಿಕೆಯೊಂದರ ಸಂದರ್ಶನದಲ್ಲಿ 'ನಾನೂ ಕೂಡ ನಿಮ್ಮವನೇ.. ಯಾಕೆ ನನ್ನನ್ನು ಪಾಕಿಸ್ತಾನಿ ತರಹ ನೋಡ್ತೀರಿ?' ಎಂದು ಹೇಳಿದ್ದರು. ಆ ಕಾಲದಲ್ಲಿ ನಟ ವಿಷ್ಣುವರ್ಧನ್ ನೋವಿನಿಂದ ನುಡಿದ ಈ ನುಡಿಗಳು ಸಾಕಷ್ಟು ಪ್ರಚಾರ ಪಡೆದು ಹಲವರು ಸಹಾನುಭೂತಿ ವ್ಯಕ್ತಪಡಿಸಿದ್ದರು. ಹಾಗಿದ್ದರೆ, ನಟ ವಿಷ್ಣು ಅವರು ಯಾಕೆ ಹೀಗೆ ಹೇಳಿದ್ದರು? ಚಿತ್ರರಂಗದಲ್ಲಿ ಸಾಕಷ್ಟು ಹೆಸರು ಮಾಡಿದ ಮೇಲೂ ಹೀಗ್ಯಾಕೆ ಹೇಳಿದ್ದರು? ಈ ಮಾತಿನ ಹಿಂದೆ ಅದ್ಯಾವ ನೋವಿತ್ತು?
ಹೌದು, ನಟ ವಿಷ್ಣುವರ್ಧನ್ ಅವರು ಕನ್ನಡ ಚಿತ್ರರಂಗದಲ್ಲಿ ಅಂದು ಬೆಳೆದು ನಿಂತಿದ್ದ ಒನ್ನೊಬ್ಬರು ಮೇರು ನಟ ಡಾ ರಾಜ್‌ಕುಮಾರ್ (Dr Rajkumar) ಅವರಿಗೆ ಪರ್ಯಾಯ ಎಂಬಂತೆ ಬೆಳೆದಿದ್ದರು. ಅವರಿಬ್ಬರ ಮಧ್ಯೆ ಬರೋಬ್ಬರಿ 21 ವರ್ಷಗಳ ವಯಸ್ಸಿನ ಅಂತರವಿತ್ತು. ನಟ ವಿಷ್ಣುವರ್ಧನ್ ಅವರು ಚಿತ್ರರಂಗಕ್ಕೆ ಬರುವಷ್ಟರಲ್ಲಿ ಡಾ ರಾಜ್‌ಕುಮಾರ್ ಅವರು 150 ಸಿನಿಮಾಗಳಲ್ಲಿ ನಟಿಸಿ ಮುಗಿಸಿದ್ದರು. ಆದರೂ ಕೂಡ ಯಾಕೆ ವಿಷ್ಣುವರ್ಧನ್ ಅವರನ್ನು ಯಾಕೆ ಡಾ ರಾಜ್ ಅವರಿಗೆ ಪ್ರತಿಸ್ಪರ್ಧಿ ಅಥವಾ ಪರ್ಯಾಯ ನಟ ಎಂದಿಕೊಂಡಿದ್ದು? ಡಾ ರಾಜ್‌ಕುಮಾರ್ ಅಭಿಮಾನಿಗಳು ನಿಜವಾಗಿಯೂ ವಿಷ್ಣು ಅವರನ್ನು ದ್ವೇಷಿಸುತ್ತಿದ್ದರೇ? ಈ ಪ್ರಶ್ನೆಗೆ ಉತ್ತರವನ್ನು ಅವರೇ ಹೇಳಬೇಕು!
ಅದಕ್ಕೆ ಕಾರಣ, ಅಂದು ಡಾ ರಾಜ್‌ಕುಮಾರ್ ಅವರನ್ನು ಬಿಟ್ಟರೆ ಇನ್ಯಾರೂ ಸ್ಟಾರ್ ನಟರಾಗಿ ಬೆಳೆದಿರಲೇ ಇಲ್ಲ. ಆದರೆ, ನಟ ವಿಷ್ಣುವರ್ಧನ್ ಅವರು ತಮ್ಮ ಮೊಟ್ಟಮೊದಲ ಸಿನಿಮಾದಲ್ಲಿಯೇ ಡಾ ರಾಜ್‌ಕುಮಾರ್ ಅವರಂತೆ ಸ್ಟಾರ್ ನಟರು ಎಂಬ ಪಟ್ಟವನ್ನು ಪಡೆದುಬಿಟ್ಟರು. ಅದು ಬಹುಶಃ ಡಾ ರಾಜ್‌ಕುಮಾರ್ ಅವರ ಸಾಂಪ್ರದಾಯಿಕ ಅಭಿಮಾನಿಗಳಿಗೆ ಅಥವಾ ಅಣ್ಣಾವ್ರ ಅಭಿಮಾನಿಗಳು ಎಂದು ಹೇಳಿಕೊಂಡ ಕೆಲವರಿಗೆ ಇಷ್ಟವಾಗಲಿಲ್ಲ ಎನ್ನಬಹುದೇನೋ! ಒಟ್ಟಿನಲ್ಲಿ, ಅಂದು ನಟ ವಿಷ್ಣುವರ್ಧನ್ ಅವರನ್ನು ವಿರೋಧಿಸುವ ಕೆಲವು ಜನರ ಗುಂಪು ಅವರಿಗೆ ತುಂಬಾ ತೊಂದರೆ ಕೊಟ್ಟಿದ್ದರು.
ಚಿತ್ರರಂಗಕ್ಕೆ ಬಂದಾಗಿನಿಂದಲೂ ಒಂದಲ್ಲ ಮತ್ತೊಂದು ವಿವಾದಕ್ಕೆ, ತೊಂದರೆಗೆ ಸಿಲುಕಿ ಬಳಲಿ ಬೆಂಡಾಗಿದ್ದ ನಟ ವಿಷ್ಣುವರ್ಧನ್ ಅವರು, ಪತ್ರಿಕೆಯೊಂದರ ಸಂದರ್ಶನದಲ್ಲಿ 'ನಾನೂ ಕೂಡ ನಿಮ್ಮವನೇ.. ಯಾಕೆ ನನ್ನನ್ನು ಪಾಕಿಸ್ತಾನಿ ತರಹ ನೋಡ್ತೀರಿ?' ಎಂದು ಹೇಳಿದ್ದರು. ಕಾರಣ, ಅವರು ಬೇರೆ ಒಬ್ಬರು ನಟ ಅಭಿಮಾನಿಗಳು ಎಂದು ಹೇಳಿಕೊಂಡ ಒಂದು ಗುಂಪಿನಿಂದ ಅಷ್ಟರಮಟ್ಟಿಗೆ ತೊಂದರೆ ಅನುಭವಿಸಿದ್ದರು. ಸಹಿಸಿಕೊಳ್ಳಲು ಅಸಾಧ್ಯ ಎಂದಾಗ ಅವರು ಕನ್ನಡ ಚಿತ್ರರಂಗ ತೊರೆದು ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿ ಚಿತ್ರರಂಗದ ಕಡೆ ವಲಸೆ ಕೂಡ ಹೋಗಿದ್ದರು.
ಆದರೆ, ಒಂದು ಹಂತದಲ್ಲಿ, ನಾನು ನನ್ನ ಮಾತೃಭಾಷೆ ಕನ್ನಡದಲ್ಲಿಯೇ ಸಿನಿಮಾ ಮಾಡಬೇಕು, ನನ್ನನ್ನು ತುಳಿದಲ್ಲೇ ಬೆಳೆಯಬೇಕು ಎಂದು ನಿರ್ಧರಿಸಿ ಮತ್ತೆ ಕನ್ನಡಕ್ಕೇ ವಾಪಸ್ಸಾಗಿ ಸಾಯುವರೆಗೂ ಕನ್ನಡ ಚಿತ್ರರಂಗಕ್ಕೆ ಬಹಳಷ್ಟು ಸಿನಿಮಾ ಕೊಟ್ಟರು. ಡಾ ರಾಜ್‌ಕುಮಾರ್ ಬಳಿಕ ಕನ್ನಡದಲ್ಲಿ ಮತ್ತೊಬ್ಬ ಮೇರನಟ ಎಂಬ ಪಟ್ಟ ಪಡೆದರು ನಟ ವಿಷ್ಣುವರ್ಧನ್. ರೆಬೆಲ್ ಸ್ಟಾರ್ ಅಂಬರೀಷ್, ಅನಂತ್ ನಾಗ ಕೂಡ ಕನ್ನಡದಲ್ಲಿ ಮೇರುನಟರೇ ಆಗಿದ್ದಾರೆ. ಪ್ರತಿಭಾವಂತ ನಟ-ನಿರ್ದೇಶಕರಾದ ಶಂಕರ್ ನಾಗ್ ಸಹ ಕನ್ನಡದ ಮೇರು ನಟರಲ್ಲಿ ಒಬ್ಬರು.
ಆದರೆ, ವಿಷ್ಣುವರ್ಧನ್ ಅವರು ಕಷ್ಟಪಟ್ಟೂ ಬೆಳೆದ ಪರಿ ಅನನ್ಯ. ಅವರೇ ಹೇಳುವಂತೆ, ಕನ್ನಡ ನೆಲದಲ್ಲೇ ಹುಟ್ಟಿ, ಕನ್ನಡ ಸಿನಿಮಾಗಳನ್ನು ಉಸಿರು ಅಂದುಕೊಂಡಿದ್ದರೂ, ಕನ್ನಡ ಸಿನಿಪ್ರೇಕ್ಷಕರಿಗೆ ತುಂಬಾ ಇಷ್ಟವಾಗಿದ್ದರೂ ಅದ್ಯಾಕೆ ಅವರು ವಿರೋಧಿಗಳಿಂದ ಅಷ್ಟು ಕಟ್ಟ ಅನುಭವಿಸಬೇಕಾಯ್ತು? ಈ ಪ್ರಶ್ನಗೆ ಸ್ವತಃ ನಟ ವಿಷ್ಣುವರ್ಧನ್ ಅವರಿಗೂ ತಮ್ಮ ಜೀವಿತದ ಕೊನೆ ಕ್ಷಣದವರೆಗೂ ಉತ್ತರ ಕಂಡುಕೊಳ್ಳಲು ಸಾಧ್ಯವೇ ಆಗಲಿಲ್ಲ ಎಂಬ ಸಂಗತಿ ಅಚ್ಚರಿಯಾದರೂ ಸತ್ಯ. ಅದಕ್ಕೇ ಅವರು 'ನಾನೇನೂ ಪಾಕಿಸ್ತಾನಿ ಅಲ್ಲ, ಆದ್ರೂ ಯಾಕೆ ನಂಗೆ ಇಷ್ಟು ಕಷ್ಟ ಕೊಡ್ತೀರಾ? ' ಎಂದು ಅಂಗಲಾಚಿ ಬೇಡಿಕೊಂಡಿದ್ದರು ಎನ್ನಬಹುದು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.