
ಕೊರೋನಾ ವೈರಸ್ ಕಾಟದಿಂದ ಜಗತ್ತೇ ತತ್ತರಿಸುತ್ತಿರುವ ಸಂದರ್ಭ ರಾಜ್ಯದಲ್ಲಿ ಸಿನಿ ತಾರೆಯರೆಲ್ಲ ಸೇರಿ ವಿಡಿಯೋ ಮೂಲಕ ಜಾಗೃತಿ ಮೂಡಿಸಿದ್ದಾರೆ. ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರು ಇಂದು ವೈದ್ಯಕೀಯ ಶಿಕ್ಷಣ ಇಲಾಖೆ ವತಿಯಿಂದ ನಿರ್ಮಿಸಿರುವ 'ಬದಲಾಗು ನೀನು ಬದಲಾಯಿಸು ನೀನು" ದೃಶ್ಯ ರೂಪಕದಲ್ಲಿ ಕಿಚ್ಚ ಸುದೀಪ್ ಮಾತ್ರ ಇಲ್ಲ.
ರಾಜ್ಯದಲ್ಲಿ ಕೊರೋನಾ ಪ್ರಕರಣಗಳು ಹೆಚ್ಚಾಗುತ್ತಿದ್ದು, ಈ ನಿಟ್ಟಿನಲ್ಲಿ ಜನರಲ್ಲಿ ಜಾಗೃತಿ ಮೂಡಿಸುವುದಕ್ಕಾಗಿ 'ಬದಲಾಗು ನೀನು ಬದಲಾಯಿಸು ನೀನು" ಎಂಬ ದೃಶ್ಯ ರೂಪಕವನ್ನು ಚಿತ್ರೀಕರಿಸಲಾಗಿತ್ತು. ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಬಿಡುಗಡೆ ಮಾಡಿದ್ದರು. ವಿಡಿಯೋ ಬಿಡುಗಡೆಯಾಗಿ ಕೆಲವೇ ಹೊತ್ತಿನಲ್ಲಿ ವಿಡಿಯೋ ಬಗ್ಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿತ್ತು.
ಕೊರೋನಾ ವಿರುದ್ಧ ತಾರೆಗಳ ದೃಶ್ಯ ರೂಪಕ; ಇದು ಪವನ್ ಒಡೆಯರ್ ನಿರ್ದೇಶನದ!
ಕಾರ್ಯಕ್ರಮದಲ್ಲಿ ವೈದ್ಯಕೀಯ ಶಿಕ್ಷಣ ಇಲಾಖೆ ಸಚಿವ ಡಾ: ಕೆ.ಸುಧಾಕರ್, ಮುಖ್ಯ ಕಾರ್ಯದರ್ಶಿ ಟಿ. ಎಂ.ವಿಜಯಭಾಸ್ಕರ್ , ಆರೋಗ್ಯ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಜಾವೇದ್ ಅಖ್ತರ್ ಉಪಸ್ಥಿತರಿದ್ದರು. ಆದರೆ ಇದೀಗ ವಿಡಿಯೋದಲ್ಲಿ ಕೆಚ್ಚ ಸುದೀಪ್ ಇಲ್ಲದೇ ಇರುವ ಬಗ್ಗೆ ಸುದೀಪ್ ಅಭಿಮಾನಿಗಳು ಗರಂ ಆಗಿದ್ದಾರೆ.
ಕನ್ನಡ ಚಿತ್ರರಂಗದ ಪ್ರಮುಖ ನಟ, ನಟಿಯರೆಯಲ್ಲ ಭಾಗವಹಿಸಿರುವ ವಿಡಿಯೋದಲ್ಲಿ ಕಿಚ್ಚ ಸುದೀಪ್ ಅವರನ್ನು ಸೇರಿಸದಿರುವ ಬಗ್ಗೆ ಅಭಿಮಾನಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅಷ್ಟಕ್ಕೂ ಸುದೀಪ್ ಸೇರಿಸದಿರುವುದಕ್ಕೆ ಕಾರಣವೇನು ಎಂಬುದು ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಇದೀಗ ಈ ಗೊಂದಲಗಳಿಗೆ ತೆರೆ ಬಿದ್ದಿದೆ.
ಡಾ.ಕೆ.ಸುಧಾಕರ್ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಸುದೀಪ್ ಅವರನ್ನು ಸಂಪರ್ಕ ಮಾಡಲು ಪ್ರಯತ್ನ ಮಾಡಿದೆ. ಅವರು ಸಂಪರ್ಕಕ್ಕೆ ಸಿಗಲಿಲ್ಲ. ಮ್ಯಾನೇಜರ್ ಅವರನ್ನು ಸಂಪರ್ಕ ಮಾಡಿ ತಿಳಿಸಿದ್ದೆ. ಬಹುತೇಕ ಎಲ್ಲ ನಟನಟಿಯರು ಸ್ವಯಂ ಪ್ರೇರಿತರಾಗಿ ನಟನೆ ಮಾಡಿದ್ದಾರೆ. ದೃಶ್ಯ ರೂಪಕದಲ್ಲಿ ಸುದೀಪ್ ಅವರಿಗೂ ಅವಕಾಶ ಇತ್ತು ಎಂದು ಸುಧಾಕರ್ ತಿಳಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.