ಉಪ್ಪಿ ಹುಟ್ಟುಹಬ್ಬದಂದು ಹೊಸ ಚಿತ್ರ ಘೋಷಣೆ?

Published : Aug 11, 2018, 02:57 PM ISTUpdated : Sep 09, 2018, 09:42 PM IST
ಉಪ್ಪಿ ಹುಟ್ಟುಹಬ್ಬದಂದು ಹೊಸ ಚಿತ್ರ ಘೋಷಣೆ?

ಸಾರಾಂಶ

ಉಪೇಂದ್ರ ಹುಟ್ಟುಹಬ್ಬದ ದಿನ ಉತ್ತಮ ಪ್ರಜಾಕೀಯ ಪಕ್ಷದ ಅಧಿಕೃತ ಉದ್ಘಾಟನೆಯಾಗಲಿದೆ. ಈಗಾಗಲೇ ಪಕ್ಷದ ಪ್ರನಾಳಿಕೆಗಳು, ಉದ್ದೇಶಗಳು, ಕೈಗೊಳ್ಳಲಿರುವ ಕೆಲಸ ಕಾರ್ಯಗಳ ಪಟ್ಟಿ ಉಪ್ಪಿ ಅಭಿಮಾನಿಗಳ ಗ್ರೂಪುಗಳಲ್ಲಿ ಓಡಾಡುತ್ತಿದೆ. ಉಪೇಂದ್ರ ಕೂಡ ಸಕ್ರಿಯವಾಗಿ ಪಕ್ಷ ಕಟ್ಟುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಹೀಗಾಗಿ ಈ ಸಲ ಉಪೇಂದ್ರ ಹುಟ್ಟುಹಬ್ಬದಂದು ಉತ್ತಮ ಪ್ರಜಾಕೀಯ ಪಕ್ಷದ ಸಂಭ್ರಮವಂತೂ ಖಾತ್ರಿ ಎನ್ನುತ್ತಿದೆ ಮೂಲಗಳೂ. 

 ಬೆಂಗಳೂರು (ಆ. 11): ಉಪೇಂದ್ರ ನಿರ್ದೇಶನದ ಹೊಸ ಚಿತ್ರ ಯಾವಾಗ? ಮತ್ತೆ ಮತ್ತೆ ಕೇಳಿಬರುತ್ತಿರುವ ಪ್ರಶ್ನೆ ಇದು. ಇದೀಗ ಉಪೇಂದ್ರ ಹುಟ್ಟುಹಬ್ಬ ಸಮೀಪಿಸುತ್ತಿರುವ ಹೊತ್ತಲ್ಲಿ, ಅವರ ಹುಟ್ಟುಹಬ್ಬದಂದೇ ಅವರ ನಿರ್ದೇಶನದ ಹೊಸ ಚಿತ್ರವೂ ಘೋಷಣೆ ಆಗಲಿದೆಯೇ? ಈ ಸುದ್ದಿ ಜೋರಾಗಿದೆ.

ಉಪೇಂದ್ರ ಅವರೇ ಹೇಳುವ ಪ್ರಕಾರ ಹುಟ್ಟುಹಬ್ಬದ ದಿನ ಉತ್ತಮ ಪ್ರಜಾಕೀಯ ಪಕ್ಷದ ಅಧಿಕೃತ ಉದ್ಘಾಟನೆಯಾಗಲಿದೆ. ಈಗಾಗಲೇ ಪಕ್ಷದ ಪ್ರನಾಳಿಕೆಗಳು, ಉದ್ದೇಶಗಳು, ಕೈಗೊಳ್ಳಲಿರುವ ಕೆಲಸ ಕಾರ್ಯಗಳ ಪಟ್ಟಿ ಉಪ್ಪಿ
ಅಭಿಮಾನಿಗಳ ಗ್ರೂಪುಗಳಲ್ಲಿ ಓಡಾಡುತ್ತಿದೆ. ಉಪೇಂದ್ರ ಕೂಡ ಸಕ್ರಿಯವಾಗಿ ಪಕ್ಷ ಕಟ್ಟುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಹೀಗಾಗಿ ಈ ಸಲ ಉಪೇಂದ್ರ ಹುಟ್ಟುಹಬ್ಬದಂದು ಉತ್ತಮ ಪ್ರಜಾಕೀಯ ಪಕ್ಷದ ಸಂಭ್ರಮವಂತೂ ಖಾತ್ರಿ.

ಇದರ ಜೊತೆಗೇ ಆಗಸ್ಟ್ 12 ನ್ನು ವಿಶ್ವ ಪ್ರಜಾಕೀಯ ದಿನವನ್ನಾಗಿ ಆಚರಿಸಲು ಉಪೇಂದ್ರ ಪಕ್ಷದ ಅಭಿಮಾನಿಗಳು ನಿರ್ಧರಿಸಿದ್ದಾರೆ. ಅಂದು ಉಪೇಂದ್ರ ಪಕ್ಷ ಕಟ್ಟಿ ಒಂದು ವರ್ಷ ಆಗುತ್ತದೆ. ಈ ವಾರ್ಷಿಕೋತ್ಸವವನ್ನು ಅದ್ಧೂರಿಯಾಗಿ ಆಚರಿಸಲು ಪಕ್ಷದ ಸದಸ್ಯರು, ಉಪೇಂದ್ರ ಅಭಿಮಾನಿಗಳು ಹಲವಾರು ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.

ಈ ಮಧ್ಯೆ ಎಲ್ಲವೂ ಸರಿಹೋದರೆ ಸೆಪ್ಟೆಂಬರ್ 18 ರ ಹೊತ್ತಿಗೆ ಹೋಮ್ ಮಿನಿಸ್ಟರ್ ಚಿತ್ರ ತೆರೆಕಂಡರೂ ಆಶ್ಚರ್ಯವಿಲ್ಲ. ಈಗಾಗಲೇ ಶೂಟಿಂಗ್ ಮುಗಿಸಿ ರೀರೆಕಾರ್ಡಿಂಗ್ ಹಂತದಲ್ಲಿರುವ ಚಿತ್ರ ಹೋಮ್ ಮಿನಿಸ್ಟರ್. ಕೈಲಿರುವ ನಾಲ್ಕೈದು ಚಿತ್ರಗಳ ಶೂಟಿಂಗ್ ಮುಗಿದ ನಂತರ, ಸ್ವಂತ ನಿರ್ದೇಶನ ಕೈಗೊಳ್ಳುವುದು ಉಪೇಂದ್ರ ಸದ್ಯದ ಪ್ಲಾನು.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Kichcha Sudeep: ರಣಹದ್ದಿನ ಬಗ್ಗೆ ಕಿಚ್ಚ ಸುದೀಪ್‌ ಹೇಳಿದ್ದೇನು? ನಿಜ ಏನು?
BBK 12 ಫಿನಾಲೆ ಬೆನ್ನಲ್ಲೇ ಹೊಸ ವಿವಾದ, ಗಿಲ್ಲಿ ನಟ ಅಶ್ವಿನಿ ಗೌಡ ಫ್ಯಾನ್ಸ್ ನಡುವೆ ಭಾಷೆ ಜೊತೆ ಜಾತಿ ಜಗಳ..!