ತೆರೆ ಮೇಲೆ ‘ದೊಡ್ಮನೆ ಹುಡ್ಗ’: ಅಭಿಮಾನಿಗಳ ಅಭಿಮಾನದ ಸಿನಿಮಾ

Published : Sep 29, 2016, 11:16 PM ISTUpdated : Apr 11, 2018, 12:52 PM IST
ತೆರೆ ಮೇಲೆ ‘ದೊಡ್ಮನೆ ಹುಡ್ಗ’: ಅಭಿಮಾನಿಗಳ ಅಭಿಮಾನದ ಸಿನಿಮಾ

ಸಾರಾಂಶ

ದೊಡ್ಮನೆ ಹುಡ್ಗ ಚಿತ್ರದ ಜಾತ್ರೆ ಶುರುವಾಗಿದೆ. ಥಿಯೇಟರ್​ ಮುಂದೆ ಕಟೌಟ್ ಕೂಡ ಎದ್ದು ನಿಂತಿವೆ. ಅಭಿಮಾನಿಗಳ ಖುಷಿಗೂ ಪಾರವೇ ಇಲ್ಲ. ಪುನೀತ್ ಚಿತ್ರ ಜೀವನದ 25 ಚಿತ್ರ ಇದಾಗಿರೋ ಕಾರಣ ಬೆಳಗ್ಗೆ 6ಕ್ಕೇ ಪ್ರದರ್ಶನ ಶುರುವಾಗಿದೆ. 300 ಥಿಯೇಟರ್​ನಲ್ಲಿ ದೊಡ್ಮನೆ ಹುಡ್ಗನ ಆಗಮನ ಆಗುತ್ತಿದೆ.

ದೊಡ್ಮನೆ ಹುಡ್ಗ, ರಾಧಿಕಾ ಪಂಡಿತ್ ಹಾಗೂ ಪುನೀತ್ ಜೋಡಿ ಈ ಚಿತ್ರದ ಮೂಲಕ ಮತ್ತೊಮ್ಮೆ ಒಟ್ಟಿಗೆ ಬಂದಿದೆ. ಬಹಳಷ್ಟು ಕ್ಯೂರಿಯಾಸಿಟಿ ಹುಟ್ಟಿಸಿರುವ ಈ ಸಿನಿಮಾ ರೋ ಸಿನಿಮಾ 300 ಥಿಯೇಟರ್'ಗಳಲ್ಲಿ ಇಂದು ರಿಲೀಸ್ ಆಗಿದೆ.

ಪುನೀತ್ 25ನೇ ಚಿತ್ರ ರಿಲೀಸ್​ಗೆ ಅಭಿಮಾನಿಗಳೇ ಸ್ವಂತ ಖರ್ಚಿನಲ್ಲಿ ಪ್ರಸನ್ನ ಥಿಯೇಟರ್​'ನಲ್ಲಿ ಕಟೌಟ್  ಕೂಡ ಹಾಕಿದ್ದಾರೆ. ಇನ್ನೂ  ನರ್ತಿಕಿ ಚಿತ್ರಮಂದಿರದ ಎದುರು ಚಿತ್ರತಂಡದಿಂದ ಅಪ್ಪು -ಅಂಬಿ ಅಪ್ಪಿಕೊಂಡ ಭಂಗಿಯ 81 ಅಡಿ ಕಟೌಟ್ ಹಾಕಲಾಗಿದೆ. ದೊಡ್ಮನೆ ಹುಡ್ಗ ಚಿತ್ರಕ್ಕೆ ಅಭಿಮಾನಿಗಳೇ ನಮ್ಮನೇ ದೇವ್ರು ಎನ್ನುವ ಟ್ಯಾಗ್ ಲೈನ್ ಇದೆ. ಚಿತ್ರದಲ್ಲಿ ಒಂದು ಹಾಡು ಕೂಡಾ ಅದನ್ನೇ ಬಿಂಬಿಸುತ್ತದೆ. ವಿ.ಹರಿಕೃಷ್ಣ ಸಂಗೀತ ಇತರ ಹಾಡುಗಳೂ ರಂಗೇರಿಸಿವೆ.

ಜಾಕಿ, ಅಣ್ಣಾ ಬಾಂಡ್ ನಂತ್ರ ದುನಿಯಾ ಸೂರಿ,ಪುನೀತ್​'ಗೆ ದೊಡ್ಮನೆ ಹುಡ್ಗ ಮಾಡಿದ್ದಾರೆ. ರೆಬಲ್ ಸ್ಟಾರ್ ಅಂಬರೀಶ್ ಈ ದೊಡ್ಮನೆ ದೊಡ್ಡ ಮನುಷ್ಯ. ಒಟ್ಟಿನಲ್ಲಿ  ಹಲವು ವಿಶೇಷತೆಯ ದೊಡ್ಮನೆ ಸಿನಿಮಾ ಹೇಗಿದೆ ಎನ್ನುವ ಕುತೂಹಲಕ್ಕೆ ಇಂದು ಉತ್ತರ ಸಿಕ್ಕಿದೆ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಸ್ಪೆಷಲ್ ಡ್ಯಾನ್ಸ್‌ಗಾಗಿಯೇ ನಾಯಕಿಯನ್ನು ಹುಡುಕುವ ನೆಲ್ಸನ್: ಜೈಲರ್ 2ನಲ್ಲಿ ರಜನಿಕಾಂತ್ ಆ ಫೀಲಿಂಗ್ಸ್ ಈಡೇರುತ್ತಾ?
ದುಬೈನಲ್ಲಿ ಮೋಸದಿಂದ 'ಬಾರ್​ ಗರ್ಲ್'​ ಆದೆ, ಆದ್ರೆ ಆ ಅನುಭವವೇ ಸೂಪರ್​: ರಾಧಾ ಕಲ್ಯಾಣ ನಟಿ ಮಾತು ಕೇಳಿ