
ಜನಪ್ರಿಯ ಗಾಯಕಿ ರಿಮಿ ಟಾಮಿ ಸೆಕೆಂಡ್ ಇನ್ನಿಂಗ್ಸ್‌ಗೆ ರೆಡಿ ಆಗ್ತಿದ್ದಾರೆ. ತಮ್ಮ ಮೊದಲ ಪತಿಗೆ ಡಿವೋರ್ಸ್ ನೀಡಿ ಆರು ವರ್ಷಗಳು ಕಳೆದ ಬಳಿಕ ಎರಡನೇ ಮದುವೆಗೆ ತಯಾರಿ ನಡೆಸಿದ್ದಾರೆ. ರಿಮಿ ಟಾಮಿ ಗಾಯಕಿ ಮತ್ತು ದೂರದರ್ಶನ ನಿರೂಪಕಿ ಕೂಡ ಹೌದು.
ಗಾಯಕಿ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಮದುವೆ ಬಗ್ಗೆ ಮಾಹಿತಿಯನ್ನ ಹಂಚಿಕೊಂಡಿದ್ದಾರೆ. ನನ್ನಿಷ್ಟದ, ನನಗೆ ಬೇಕಾಗಿದ್ದ ಸೂಕ್ತ ಸಂಗಾತಿ ಬಾಳಿಗೆ ಸಿಕ್ಕಾಗಿದೆ. ನಾನು ನಿಮ್ಮೊಂದಿಗೆ ಅತ್ಯಂತ ಸಂತೋಷ ತರುವ ವಿಚಾರವನ್ನ ಹಂಚಿಕೊಳ್ಳುತ್ತಿದ್ದೇನೆ. ನಾನು ಅವರೊಂದಿಗೆ ಕೈಹಿಡಿದು ಹೆಜ್ಜೆಯನ್ನಿಡಲು ಮತ್ತು ನನ್ನೊಂದಿಗೆ ಬದುಕಲು ಇಷ್ಟಪಡುವ ವ್ಯಕ್ತಿ ಅವರು. ನನ್ನ ಕುಟುಂಬ ನನ್ನೊಂದಿಗೆ ಇದ್ದರೂ ನನಗೆ ಜೀವನದ ಸಂಗಾತಿಯ ಕೊರತೆ ಇತ್ತು. ಇದೀಗ ಅಂದರೆ 2026ರಲ್ಲಿ ಜೀವನದಲ್ಲಿ ಯಾರೋ ಒಬ್ಬರು ಬಂದರು ಎಂದು ರಿಮಿ ಯೂಟ್ಯೂಬ್ ವಿಡಿಯೋದಲ್ಲಿ ಹೇಳಿದ್ದಾರೆ.
ನನ್ನ ಬದುಕಿಗೆ ಬಂದವರು ನಟ, ಗಾಯಕ, ಪ್ರಸಿದ್ಧ ವ್ಯಕ್ತಿ ಅಥವಾ ಮಿಲಿಯನೇರ್ ಅಲ್ಲ. ಜೀವನ ಸಂಗಾತಿ ಎಂದರೆ ನೀವು ಬೇಗನೆ ಹೋಗಿ ಆಯ್ಕೆ ಮಾಡಬಹುದಾದ ವ್ಯಕ್ತಿಯಲ್ಲ. ನಾವು ಒಬ್ಬರನ್ನೊಬ್ಬರು ಮುಕ್ತವಾಗಿ ಅರ್ಥಮಾಡಿಕೊಳ್ಳಲು ಮತ್ತು ಹೊಂದಾಣಿಕೆಯ ವೈಬ್ ಹೊಂದಲು ಸಾಧ್ಯವಾಗುತ್ತದೆ. ಅವರು ವೈಯಕ್ತಿಕವಾಗಿ ಮತ್ತು ವೃತ್ತಿಪರವಾಗಿ ಬೆಳೆಯಲು ಸಹಾಯ ಮಾಡುವ ಮತ್ತು ಮನಸ್ಸಿಗೆ ಶಾಂತಿಯನ್ನು ನೀಡುವ ವ್ಯಕ್ತಿ ಆಗಿರಬೇಕು. ಹಣ ಅಥವಾ ಖ್ಯಾತಿಯ ಬಗ್ಗೆ ಅಲ್ಲ. ನನ್ನ ಬಗ್ಗೆ ಕಾಳಜಿ ವಹಿಸುವ ಮತ್ತು ನೆಮ್ಮದಿಯನ್ನು ನೀಡಲು ಯಾರಾದರೂ ಬೇಕು.
ನನ್ನ ಪ್ರಕಾರ ಇದು ದೇವರ ಕೊಡುಗೆ ಎಂದು ಭಾವಿಸುತ್ತೇನೆ. ಜೀವನದಲ್ಲಿ ಮುಂದೆ ಸಾಗಿದಾಗ ಮಾತ್ರ ಉಳಿದೆಲ್ಲವೂ ತಾನಾಗಿಯೇ ಹೊರಬರುತ್ತದೆ. ಜೀವನದಲ್ಲಿ ದೊಡ್ಡ ವಿಷಯ ಏನೆಂದರೆ ಹಣ ಅಥವಾ ಖ್ಯಾತಿಯಲ್ಲ ಎಂಬುದನ್ನ ಅರಿತುಕೊಂಡೆ. ನನ್ನನ್ನು ನೋಡಿಕೊಳ್ಳುವ ಮತ್ತು ನನ್ನ ಎಲ್ಲಾ ಮುಖಗಳನ್ನು ಅರ್ಥಮಾಡಿಕೊಳ್ಳುವ ಶಾಂತಿಯುತ ವ್ಯಕ್ತಿ ನನಗೆ ಬೇಕಾಗಿದ್ದರು. ಅಲ್ಪಾವಧಿಯಲ್ಲಿಯೇ, ನಾವಿಬ್ಬರೂ ಒಬ್ಬರನ್ನೊಬ್ಬರು ಅರ್ಥಮಾಡಿಕೊಂಡೆವು. ಅದಕ್ಕಿಂತ ಹೆಚ್ಚಾಗಿ ನನ್ನ ಮನಸ್ಸು ಅತ್ಯಂತ ಶಾಂತವಾಯಿತು. ನನಗೆ ಒಳ್ಳೆಯ ಜೀವನ ಸಿಗುತ್ತದೆ ಎಂಬ ಭರವಸೆ ಇದೆ. ಹೀಗಾಗಿ ಈ ನಿರ್ಧಾರ ತೆಗೆದುಕೊಂಡೆ ಎಂದು ವಿಡಿಯೋದಲ್ಲಿ ಟಾಮಿ ಹೇಳಿದ್ದಾರೆ.
ಅಂದ್ಹಾಗೆ ರಿಮಿ ಟಾಮಿ ತಮ್ಮ ಭಾವಿ ಪತಿಯ ಬಗ್ಗೆ ಹೆಚ್ಚಿನ ವಿವರಗಳನ್ನ ನೀಡಿಲ್ಲ. ನವೆಂಬರ್ 2 ರಂದು ಪೋಸ್ಟ್ ಮಾಡಿರುವ ವಿಡಿಯೋದಲ್ಲಿ ರಿಮಿ ತನ್ನ ಸಂಗಾತಿಯ ಗುರುತನ್ನು ಬಹಿರಂಗಪಡಿಸಿದ್ದಾರೆ. ಅವರ ಹೆಸರು ಲಿಬಿನ್ ಮ್ಯಾಥ್ಯೂ. ಅವರೊಬ್ಬ ಮುಂಬೈ ಮೂಲದ ಬಾಡಿ ಬಿಲ್ಡರ್ ಮತ್ತು ಟ್ರೈನರ್ ಎಂದು ತಿಳಿಸಿದ್ದಾರೆ. ಈ ಜೋಡಿ ಇದೇ ತಿಂಗಳಿನಲ್ಲಿ ಡೊಂಬಿವ್ಲಿಯ ಚರ್ಚ್‌ನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡಲಿದೆ.
ರಿಮಿ ಟಾಮಿ ಈ ಹಿಂದೆ ಉದ್ಯಮಿ ರಾಯ್ಸ್ ಕಿಜಾಕೂಡನ್ ಅವರನ್ನು ವಿವಾಹವಾಗಿದ್ದರು . ಅವರು ಏಪ್ರಿಲ್ 27, 2008 ರಂದು ತ್ರಿಶೂರ್‌ನಲ್ಲಿ ವಿವಾಹವಾದರು. 11 ವರ್ಷಗಳ ದಾಂಪತ್ಯದ ನಂತರ ರಿಮಿ ಟಾಮಿ ಮತ್ತು ರಾಯ್ಸ್ 2020 ರಲ್ಲಿ ವಿಚ್ಛೇದನಕ್ಕಾಗಿ ಎರ್ನಾಕುಲಂ ಕೌಟುಂಬಿಕ ನ್ಯಾಯಾಲಯದ ಮೆಟ್ಟಿಲೇರಿ. ಅಧಿಕೃತವಾಗಿ ಡಿವೋರ್ಸ್ ಪಡೆದುಕೊಂಡಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.