
ಕನ್ನಡ ಚಿತ್ರರಂಗದ ಖ್ಯಾತ ನಟ ಜೈ ಜಗದೀಶ್ ಹಾಗೂ ನಿರ್ಮಾಪಕಿ ವಿಜಯಲಕ್ಷ್ಮಿ ಸಿಂಗ್ ಮುದ್ದು ಮಗಳು ವೈಭವಿ ನೋಡೋಕೆ ಸಿಕ್ಕಾಪಟ್ಟೆ ಬೋಲ್ಡ್ ಆ್ಯಂಡ್ ಸ್ಟ್ರೇಟ್ ಫಾರ್ವರ್ಡ್. 'ಕೋತಿಗಳು ಸಾರ್ ಕೋತಿಗಳು' ಚಿತ್ರದಲ್ಲಿ ಬಾಲ್ಯ ನಟಿಯಾಗಿ ಕಾಣಿಸಿಕೊಂಡ ವೈಭವಿ 'ಈ ಬಂಧನ' ಚಿತ್ರದಲ್ಲಿ ಸಣ್ಣದೊಂದು ಪಾತ್ರದಲ್ಲಿ ಕಾಣಿಸಿಕೊಂಡಿದ್ದು ಆ ನಂತರ ನಟಿಯಾಗಿ ಲಾಂಚ್ ಆದ ಸಿನಿಮಾವೇ 'ಯಾನ'.
ಇನ್ನು ಸಾಮಾಜಿಕ ಜಾಲತಾಣದಲ್ಲಿ ಆ್ಯಕ್ಟೀವ್ ಇರುವ ವೈಭವಿ ಕೆಲದಿನಗಳ ಹಿಂದೆ ಪಡ್ಡೆ ಹುಡುಗರ ನಿದ್ದೆಗೆಡಿಸುವ ಫೋಟೋವೊಂದನ್ನು ಅಪ್ಲೋಡ್ ಮಾಡಿದ್ದರು. 'Nothing but blue skies' ಎಂದು ಬರೆದುಕೊಂಡಿದ್ದರು.
ವೈಭವಿಗೆ ಇಬ್ಬರು ಅವಳಿ-ಜವಳಿ ತಂಗಿಯರು. ತುಂಟಾಟಿಕೆ ಮಾಡಿಕೊಂಡು ‘ಕೋತಿಗಳು ಸಾರ್ ಕೋತಿಗಳು’ ಚಿತ್ರದಲ್ಲಿ ಕಾಣಿಸಿಕೊಂಡಿದ್ದು ತಮ್ಮ ಮಕ್ಕಳ ಮೊದಲ ಸಿನಿಮಾವನ್ನು ತಾನೇ ಲಾಂಚ್ ಮಾಡಬೇಕೆಂದು ವಿಜಯಲಕ್ಷ್ಮಿ ಸಿಂಗ್ 'ಯಾನ' ಚಿತ್ರವನ್ನು ನಿರ್ದೇಶಿಸಿದ್ದರು. ಈ ಫೋಟೋವನ್ನು ರತಿನ್ ಸೆರೆ ಹಿಡಿದಿದ್ದು ಮೇಕಪ್ಪನ್ನು ಸ್ನೇಹ ಮಾಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.