
ಬೆಂಗಳೂರು (ಜ. 28): ಇದುವರೆಗಿನ ಅಷ್ಟೂ ಚಿತ್ರಗಳನ್ನು ಒಂದಕ್ಕಿಂತ ಒಂದು ಭಿನ್ನವೆಂಬಂತೆ ನಿರ್ದೇಶನ ಮಾಡಿದವರು ಸಿಂಪಲ್ ಸುನಿ. ಪ್ರೀತಿ ಪ್ರೇಮಗಳ ಸುತ್ತನೇ ಸುತ್ತಿದರೂ ಪ್ರತೀ ಚಿತ್ರದಲ್ಲಿಯೂ ಸುನಿಯ ವಿಭಿನ್ನ ಒಳನೋಟಗಳೇ ಗೆಲುವಿಗೆ ಸಾಥ್ ನೀಡುತ್ತಾ ಬಂದಿವೆ. ಹೀಗಿದ್ದ ಮೇಲೆ ಇದೇ ಫೆಬ್ರವರಿ ಒಂದರಂದು ಬಿಡುಗಡೆಗೆ ಸಿದ್ಧವಾಗಿರೋ ’ಬಜಾರ್’ ಚಿತ್ರವೂ ವಿಶೇಷವಾಗಿಯೇ ಇರುತ್ತದೆ ಎಂಬುದರಲ್ಲಿ ಸಂದೇಹವೇನಿಲ್ಲ.
ಸಿಂಪಲ್ ಸುನಿ ಇದೇ ಮೊದಲ ಬಾರಿಗೆ ರೌಡಿಸಂ ಸಬ್ಜೆಕ್ಟನ್ನು ಆರಿಸಿಕೊಂಡಿದ್ದಾರೆ. ಆದರೆ ಇಲ್ಲಿನ ಕಥೆ ಖಂಡಿತಾ ಸಿಂಪಲ್ ಆಗಿಲ್ಲ. ಇತ್ತೀಚೆಗೆ ಬಿಡುಗಡೆಯಾಗಿರೋ ಟ್ರೈಲರ್ ಮೂಲಕವೇ ಸುನಿ ಈ ಟ್ರ್ಯಾಕಿನಲ್ಲಿಯೂ ವಿಜಯ ಪತಾಕೆ ಹಾರಿಸುತ್ತಾರೆಂಬುದು ಸ್ಪಷ್ಟವಾಗಿದೆ. ರೌಡಿಸಂ ಎಂಬುದು ಯಾವತ್ತಿದ್ದರೂ ಮಾಮೂಲಿ ಸಿನಿಮಾ ವಸ್ತು. ಆದರೆ ಸುನಿ ’ಬಜಾರ್’ ಚಿತ್ರದಲ್ಲಿ ಅದನ್ನು ತೋರಿಸಿರೋ ರೀತಿ ಮಾಮೂಲಿಯಲ್ಲ.
ಸದಾ ಪ್ರೀತಿಯ ಕಣ್ಣುಗಳಿಂದಲೇ ದೃಶ್ಯ ಕಟ್ಟುತ್ತಾ ಬಂದಿರೋ ಸುನಿ ಈವರೆಗೂ ಭಾವನೆಗಳ ಮೇಲಾಟದ ಸಬ್ಜೆಕ್ಟ್ ಗಳ ಮೂಲಕವೇ ಪ್ರೇಕ್ಷಕರ ಮನ ತಾಕಿದ್ದರು. ಅಂಥಾ ಪ್ರೀತಿಪೂರ್ವಕ ಕಣ್ಣುಗಳಲ್ಲಿ ಮಚ್ಚು ಲಾಂಗುಗಳ ದುನಿಯಾ ಸೆರೆಯಾಗಿದೆ ಅಂದರೆ ಕುತೂಹಲ ಹುಟ್ಟದಿರುತ್ತಾ? ಖಂಡಿತಾ ಅಂಥದ್ದೊಂದು ಅಗಾಧ ಕುತೂಹಲ ಬಜಾರ್ ವಿಚಾರದಲ್ಲಿ ಪ್ರೇಕ್ಷಕರಲ್ಲಿದೆ. ಅದೇ ಈ ಚಿತ್ರದ ಗೆಲುವನ್ನೂ ಬಿಂಬಿಸುತ್ತಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.