
ದೇಶಾದ್ರಿ ಹೊಸ್ಮನೆ
ಕಣ್ ಹೊಡೆಯಲು ಕನ್ನಡಕ್ಕೂ ಬಂದ್ರೀ...
(ನಗು)ಕನ್ನಡ ಸಿನಿಮಾದಲ್ಲಿ ಅಭಿನಯಿಸುವ ಅವಕಾಶ ನನಗಿನ್ನು ಸಿಕ್ಕಿಲ್ಲ. ಅಂತಹ ಆಫರ್ ಇಂದಲ್ಲ ನಾಳೆ ಇಲ್ಲಿ ಸಿಗಬಹುದು ಎನ್ನುವ ನಿರೀಕ್ಷೆಯೂ ಇದೆ. ಆದ್ರೆ, ಈಗ ನನ್ನ ಮೊದಲ ಚಿತ್ರ ಕನ್ನಡಕ್ಕೆ ಡಬ್ ಆಗಿ ರಿಲೀಸ್ ಆಗುತ್ತಿದೆ. ತೆಲುಗು, ತಮಿಳು, ಹಿಂದಿಗೂ ಡಬ್ ಆಗಿದೆ. ಅಲ್ಲೂ ಏಕಕಾಲದಲ್ಲೇ ತೆರೆ ಕಾಣುತ್ತಿದೆ. ಮೊದಲ ಸಿನಿಮಾವೇ ಇಷ್ಟು ದೊಡ್ಡ ಮಟ್ಟದಲ್ಲಿ ಬಿಡುಗಡೆ ಆಗುತ್ತಿರುವುದು ನಂಗೂ ಖುಷಿ ಕೊಟ್ಟಿದೆ.
ಐದು ಭಾಷೆಗಳಿಗೆ ಈ ಸಿನಿಮಾ ಡಬ್ ಆಗಿದ್ದರ ಹಿಂದೆ ನಿಮಗಿದ್ದ ಜನಪ್ರಿಯತೆಯೇ ಕಾರಣ ಅಲ್ವಾ?
ನಾಟ್ ಲೈಕ್ ದಟ್, ಅದು ಆ ಥರ ಅಲ್ಲ. ಒಳ್ಳೆಯ ಸಿನಿಮಾ ಮಾಡದೆ, ಯಾರದೋ ಜನಪ್ರಿಯತೆ ಮೂಲಕವೇ ಐದಾರು ಭಾಷೆಗೆ ಹೋಗುತ್ತೇವೆ, ಅಲ್ಲೂ ಡಬ್ ಮಾಡಿ ಬಿಡುಗಡೆ ಮಾಡುತ್ತೇವೆ ಅನ್ನೋದು ಅರ್ಥಹೀನ. ಆಯಾ ಭಾಷೆಗಳಲ್ಲಿ ಡಬ್ ಮಾಡಲು ಒಪ್ಪಿಕೊಂಡ ನಿರ್ಮಾಪಕರು, ಸಂಸ್ಥೆಗಳ ಮುಖ್ಯಸ್ಥರು ಈ ಸಿನಿಮಾ ನೋಡಿದ್ದಾರೆ. ಅವರಿಗೆ ಇಷ್ಟವಾಗಿದೆ. ಮೇಲಾಗಿ ಇದು ಯುನಿವರ್ಸಲ್ ಕತೆ. ವಿಭಿನ್ನ ಲವ್‌ಸ್ಟೋರಿ. ಅದು ಚಿತ್ರದ ಡಬ್ಬಿಂಗ್‌ಗೆ ನಿಜವಾದ ಕಾರಣ.
ಸಿನಿಮಾ ತಡವಾಗಿ ಬರುತ್ತಿರೋದಕ್ಕೆ ಕಾರಣ?
ಚಿತ್ರೀಕರಣ ಮುಗಿಸಿ, ರಿಲೀಸ್‌ಗೆ ರೆಡಿ ಅಂತ ಆದಾಗ, ಡಬ್ಬಿಂಗ್ ಹಕ್ಕುಗಳಿಗೆ ಬೇಡಿಕೆ ಶುರುವಾಯಿತು. ನಿರ್ಮಾಪಕರು ಅದರಲ್ಲಿ ಬ್ಯುಸಿ ಆದರು. ಆ ಪ್ರಕಿಯೆಗಳು ಮುಗಿಯುವುದಕ್ಕೆ ಇಷ್ಟು ದಿನ ಬೇಕಾಯಿತು. ತಡವಾದರೇನಂತೆ,ನಷ್ಟವಿಲ್ಲ. ತಡವಾಗಿದ್ದಕ್ಕೆ ತಾನೇ ನಾವಿಲ್ಲಿ ಸಿಕ್ಕಿರೋದು?
ಪ್ರಿಯಾ ಹಿನ್ನೆಲೆ ಏನು? ಚಿತ್ರರಂಗಕ್ಕೆ ಹೇಗೆ ಬಂದ್ರಿ?
ಸ್ವಂತ ಊರು ಕೇರಳದ ತ್ರಿಶೂರ್. ಸದ್ಯಕ್ಕೆ ಬಿಕಾಂ ಸೆಕೆಂಡ್ ಇಯರ್ ಓದುತ್ತಿದ್ದೇನೆ. ಸಿನಿಮಾ ನಟಿ ಆಗ್ಬೇಕು ಅನ್ನೋದು ನನ್ನ ಬಾಲ್ಯದ ಕನಸು. ಫ್ಯಾಮಿಲಿಗೆ ಸಿನಿಮಾದ ಯಾವುದೇ ನಂಟಿಲ್ಲ. ನಂಗೆ ಮಾತ್ರ ನಟಿ ಆಗ್ಬೇಕು ಅನ್ನೋದಿತ್ತು. ಈ ಚಿತ್ರದ ಆಡಿಷನ್ ವಿಚಾರ ಗೊತ್ತಾಗಿ ಅಟೆಂಡ್ ಮಾಡಿದ್ದೆ. ನಿರ್ದೇಶಕರಿಗೆ ಫೋಟೋಸ್ ಕಳುಹಿಸಿದ್ದೆ. ಆಗ ಸಿಕ್ಕ ಸಿನಿಮಾವಕಾಶ ಇದು.
ನಟ-ನಟಿಯರು ನೇಮ್ ಆ್ಯಂಡ್ ಫೇಮ್‌ಗೆ ಸೈಕಲ್ ಹೊಡಿಯುತ್ತಿರುವಾಗ, ನೀವು ರಾತ್ರೋರಾತ್ರಿ ಫೇಮಸ್ ಆಗ್ಬಿಟ್ರಿ..
ನಾನು ಇದಕ್ಕೆಲ್ಲ ಕಾರಣ ಅಲ್ಲ. ಇಷ್ಟಕ್ಕೂ ಕಣ್ ಹೊಡೆಯುವ ಸೀನ್ ಇದೆಯಲ್ಲ, ಅದು ಸಿನಿಮಾದ ಸಾಂಗ್‌ನಲ್ಲಿ ಬರುವ ಒಂದು ಸೀನ್. ಸೋಷಲ್ ಮೀಡಿಯಾದಲ್ಲಿ ಅದರ ಟೀಸರ್ ವೈರಲ್ ಆಯ್ತು. ಅಲ್ಲಿಂದ ಎಲ್ಲಾ ಕಡೆ ಹರಿದಾಡಿತು. ಆ ಮೂಲಕ ಪ್ರಿಯಾ ವಾರಿಯರ್ ಹೆಸರು ಗೊತ್ತಾಯಿತು. ನಂಗೂ ಒಂದಷ್ಟು ಹೆಸರು ಬಂತು. ಆದ್ರೆ ನಾನು ಬಯಸಿದ್ದು ಇಂತಹ ಪಾಪ್ಯುಲಾರಿಟಿ ಅಲ್ಲ. ಒಳ್ಳೆಯ ನಟಿ ಆಗ್ಬೇಕು, ಆ ಮೂಲಕ ಗುರುತಿಸಿಕೊಳ್ಳಬೇಕು ಅನ್ನೋದು ನನ್ನಾಸೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.