ಸಖತ್‌ ಸೌಂಡ್‌ ಮಾಡುತ್ತಿದೆ ಕುರುಕ್ಷೇತ್ರದ ಪ್ರೇಮ ಗೀತೆ!

By Web Desk  |  First Published Jul 16, 2019, 9:09 AM IST

ರಾಜಕೀಯ ಕುರುಕ್ಷೇತ್ರದ ಕಾರಣದಿಂದಲೋ ಏನೋ ‘ಮುನಿರತ್ನ ಕುರುಕ್ಷೇತ್ರ’ದ ರಿಲೀಸ್‌ ಮುಂದಕ್ಕೆ ಹೋಗಿದೆ. ವರಮಹಾಲಕ್ಷ್ಮಿ ಹಬ್ಬಕ್ಕೆ ಬರಬೇಕಾಗಿದ್ದ ಚಿತ್ರ ಆಗಸ್ಟ್‌ 2ಕ್ಕೆ ತೆರೆಕಾಣಲಿದೆ ಎಂಬುದು ಈಗಿನ ಮಾತು.


ದರ್ಶನ್‌ ಪಾತ್ರದ ಇಂಟ್ರೋಡಕ್ಷನ್‌ ಸಾಂಗ್‌ ನಂತರ ಮತ್ತೊಂದು ಲಿರಿ​ಕಲ್‌ ಸಾಂಗ್‌ ಸೋಷಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಇದು ಸುಯೋಧನ ಹಾಗೂ ಭಾನುಮತಿಯರ ಪ್ರೀತಿ-ಪ್ರೇಮ-ಪ್ರಣಯ ಗೀತೆ ಎನ್ನುವುದೇ ವಿಶೇಷ.

ದರ್ಶನ್ ಅಭಿಮಾನಿ ಬೆನ್ನ ಮೇಲೆ ದುರ್ಯೋಧನ ಟ್ಯಾಟೋ

Tap to resize

Latest Videos

ದುರ್ಯೋಧನನ ಪಾತ್ರದಲ್ಲಿ ದರ್ಶನ್‌ ಗತ್ತು, ಗಾಂಭೀರ್ಯ ತೋರುವ ಹಾಡು ಕೆಲವೇ ಗಂಟೆಗಳಲ್ಲಿ ವೈರಲ್‌ ಆಗಿತ್ತು. ಇದೀಗ ದುರ್ಯೋಧನನ ಪ್ರೇಮ ಪರ್ವದ ಹಾಡು ಕೂಡ ಅಷ್ಟೇ ಪ್ರಸಿದ್ಧವಾಗಿದೆ. ಚಾರು ತಂತಿ ನಿನ್ನ ತನುವು ...ನುಡಿಸ ಬರುವೆನು ದಿನಾ..ಎಂಬ ಸೊಗಸಾದ ಡಾ.ನಾಗೇಂದ್ರಪ್ರಸಾದ್‌ ಬರೆದ ಸಾಹಿ​ತ್ಯಕ್ಕೆ ವಿ.ಹರಿ​ಕೃಷ್ಣ ಸಂಗೀ​ತ​ವಿದೆ. ಸೋನು ನಿಗಮ್‌ ಹಾಗೂ ಶ್ರೇಯಾ ಘೋಷಾಲ್‌ ಹಾಡಿ​ದ್ದಾರೆ. ಸಾಹಿ​ತ್ಯಕ್ಕೆ ತಕ್ಕ​ಂತೆ ಅದನ್ನು ವೈಭ​ವಯು​ತ​ವಾಗಿ ಚಿತ್ರೀ​ಕ​ರಿ​ಸ​ಲಾ​ಗಿ​ದೆ.

 

click me!