
ಬೆಂಗಳೂರು (ಡಿ. 05): ಸ್ಯಾಂಡಲ್‌ವುಡ್‌ನ ಕ್ಯೂಟ್ ಕಪಲ್ ದಿಗಂತ್ ಹಾಗೂ ಐಂದ್ರಿತಾ ಡಿಸೆಂಬರ್ 11 ಹಾಗೂ 12ರಂದು ಹಸೆಮಣೆ ಏರಲಿದ್ದಾರೆ.
ಮನಸಾರೆ, ಪಾರಿಜಾತ, ಪಂಚರಂಗಿ ಸಿನಿಮಾಗಳಲ್ಲಿ ಒಟ್ಟಾಗಿ ನಟಿಸಿದ್ದ ನಟ ದಿಗಂತ್ ಹಾಗೂ ಐಂದ್ರಿತಾ ರೇ ಲವ್ವಲ್ಲಿ ಬಿದ್ದು ಸಾಕಷ್ಟು ವರ್ಷಗಳೇ ಆಗಿವೆ. ಈ ಪ್ರೀತಿಗೆ ಅಧಿಕೃತವಾಗಿ ಮದುವೆ ಮುದ್ರೆ ಬೀಳಲಿದೆ.
ಐಂದ್ರಿತಾ ರೈ ಬಂಗಾಳಿ ಚೆಲುವೆ. ದಿಗಂತ್ ಮಲೆನಾಡಿನ ಹುಡುಗ. ಬಾಂಗ್ ವೆಡ್ಸ್ ಬೊಮ್ಮನ್ ಎಂದು ಇವರಿಬ್ಬರ ಮದುವೆ ಟ್ರೆಂಡ್ ಆಗುತ್ತಿದೆ. ಮದುವೆ ಆಮಂತ್ರಣ ಪತ್ರವೂ ಸಕತ್ ಕ್ರಿಯೇಟೀವಾಗಿದೆ. ಈಗಾಗಲೇ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
ಈ ಆಮಂತ್ರಣ ಪತ್ರಿಕೆ ಸಖತ್ ಡಿಫರೆಂಟಾಗಿದೆ. ಬಾಂಗ್ಸ್ ವೆಡ್ಸ್ ಬೊಮ್ಮನ್ ಎಂದು ಬರೆಯಲಾಗಿದೆ. ನೋಡುವುದಕ್ಕೂ ಕ್ಯೂಟ್ ಆಗಿದೆ.
ದಿಗ್ಗಿ- ಆ್ಯಂಡಿ ಮದುವೆಗೆ ಹೋಗುವವರಿಗೆ ಕಂಡೀಶನ್ ಇದೆ. ಆಮಂತ್ರಣ ಪತ್ರಿಕೆಯಲ್ಲಿ ಕಂಡೀಶನ್ ಹಾಕಲಾಗಿದೆ. ಮದುವೆಗೆ ಹೋಗುವವರು ಅಪ್ಪಟ ಭಾರತೀಯ ಶೈಲಿಯಲ್ಲಿ ಹೋಗಬೇಕಂತೆ!
ಕುಟುಂದವರು, ಹತ್ತಿರದ ಬಂಧುಗಳಿಗಾಗಿ ಮಲೆನಾಡ ಶೈಲಿಯಲ್ಲಿ ಆಮಂತ್ರಣ ಪತ್ರ ಮಾಡಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.