ಶ್ಲೋಕ ಜಪಿಸುತ್ತಾ ಬಂದ ಶ್ರೀ ಹರಿ ಆನಂದ್!

Published : Aug 26, 2019, 11:01 AM IST
ಶ್ಲೋಕ ಜಪಿಸುತ್ತಾ ಬಂದ ಶ್ರೀ ಹರಿ ಆನಂದ್!

ಸಾರಾಂಶ

  ಕರ್ಮಣ್ಯೇ ವಾಧಿಕಾರಸ್ತೇ...! ನಿನ್ನ ಕೆಲಸ ನೀನು ಮಾಡು, ಅದರ ಫಲಾಫಲವನ್ನು ದೇವರಿಗೆ ಬಿಡು ಎನ್ನುವುದು ಇದರರ್ಥ. ಇದು ಭಗವದ್ಗೀತೆಯ ಶ್ಲೋಕ. ಮಹಾಭಾರತದಲ್ಲಿ ಕೃಷ್ಣ , ಅರ್ಜುನನಿಗೆ ಹೇಳಿದ ಮಾತು. ಇದನ್ನೇ ಆಧರಿಸಿ ನಿರ್ಮಾಣವಾಗುತ್ತಿರುವ ಚಿತ್ರವೇ ‘ಕರ್ಮಣ್ಯೇ ವಾಧಿಕಾರಸ್ತೇ’.

ವರ್ಷದ ಹಿಂದೆ ಇದು ‘ಟಿಪಿಕಲ್ ಬ್ರಾಹ್ಮಣ’ಎನ್ನುವ ಹೆಸರಲ್ಲಿ ಈ ಸಿನಿಮಾ ಸುದ್ದಿ ಮಾಡಿತ್ತು. ಆದರೆ ಆ ಟೈಟಲ್‌ಗೆ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಅನುಮತಿ ಸಿಗದ ಕಾರಣ, ಟೈಟಲ್ ಬದಲಾಯಿಸಿಕೊಂಡು ಸಿನಿಮಾ ಮಾಡಿದ್ದಾರೆ ನಿರ್ದೇಶಕ ಶ್ರೀಹರಿ ಆನಂದ್. ಅಮೆರಿಕ ವಾಸಿ ಕನ್ನಡಿಗ ರಮೇಶ್ ರಾಮಯ್ಯ ಈ ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ. ಯುವ ಪ್ರತಿಭೆ ಪ್ರತೀಕ್ ಚಿತ್ರದ ನಾಯಕ. ದಿವ್ಯಾ ಗೌಡ ನಾಯಕಿ. ಚಿತ್ರೀಕರಣ ಮುಗಿದಿದೆ

ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಸಾಹಸ ನಿರ್ದೇಶಕ ವಿಕ್ರಮ್!

ದಾಂಡೇಲಿ, ಆಗುಂಬೆ, ಹುಬ್ಬಳ್ಳಿ ಹಾಗೂ ಬೆಂಗಳೂರು ಸುತ್ತ ಮುತ್ತಲ ಸುಂದರ ತಾಣಗಳಲ್ಲಿ ಚಿತ್ರೀಕರಣ ಮುಗಿಸಿಕೊಂಡು ಬಂದಿರುವ ಚಿತ್ರ ತಂಡ ಇದೀಗ ಟೀಸರ್ ಲಾಂಚ್ ಮೂಲಕ ಸದ್ದು ಮಾಡಿದೆ.‘ ಇದು ಎರಡು ಕೋನಗಳಲ್ಲಿ ಸಾಗುವ ಕತೆ.

ಪೋಟೋ ಕ್ರೇಜ್‌ನಿಂದ ಕಿರುತೆರೆಗೆ ಎಂಟ್ರಿ ಕೊಟ್ಟ ಮಂಗಳೂರು ಹುಡುಗಿ !

ಸಮಾಜಮುಖಿಯಾದ ಕಥಾ ನಾಯಕ ತನ್ನ ಕೆಲಸ ತಾನು ಮಾಡುತ್ತಾ ಹೋಗುತ್ತಾನೆ. ಅದರ ಫಲಾಫಲ ಆತನಿಗೆ ಹೇಗೆ ದಕ್ಕುತ್ತದೆ ಎನ್ನುವುದು ಚಿತ್ರದ ತಿರುಳು ಎನ್ನುತ್ತಾರೆ ನಿರ್ದೇಶಕರು. ಚಿತ್ರದ ಮೂಲ ಕತೆ 1850ಕ್ಕೆ ಸಂಬಂಧಿಸಿದ್ದು. ಆದರೆ ಅದನ್ನು ಈ ಕಾಲಕ್ಕೆ ತಕ್ಕಂತೆ ಹೇಳಲಾಗಿದೆಯಂತೆ. ಚಿತ್ರವನ್ನು ಅಕ್ಟೋಬರ್ ಅಥವಾ ನವೆಂಬರ್ ತಿಂಗಳಲ್ಲಿ ರಿಲೀಸ್ ಮಾಡುವ ಪ್ಲ್ಯಾನ್ ಇದೆಯಂತೆ. ಋತ್ವಿಕ್ ಸಂಗೀತ ಸಂಯೋಜನೆ ಮಾಡಿದ್ದಾರೆ.

.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ನಾನೇನು ಸಾಧುವಲ್ಲ.. ಹೀಗೆ ಮಾತಾಡೋಕೆ ನನಗೂ ಬರುತ್ತೆ: ಪುಷ್ಪ ನಟಿ ಹೇಳಿದ್ದೇನು?
ಅಂಧರ ವಿಶ್ವಕಪ್ ಹೀರೋಯಿನ್ಸ್‌ಗಳಿಗೆ ದೊಡ್ಮನೆಯಿಂದ ಗೌರವ: ರಾಜ್ ಕುಟುಂಬದ ಆತಿಥ್ಯಕ್ಕೆ ಮೈಮರೆತ ಚಾಂಪಿಯನ್ನರು!