ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಸಾಹಸ ನಿರ್ದೇಶಕ ವಿಕ್ರಮ್!

By Web DeskFirst Published Aug 26, 2019, 10:42 AM IST
Highlights

ರಾಷ್ಟ್ರ ಪ್ರಶಸ್ತಿಯನ್ನು ಮುಡಿಗೇರಿಸಿಕೊಳ್ಳುವ ಮೂಲಕ ಸದ್ಯ ಸ್ಯಾಂಡಲ್‌ವುಡ್‌ನ ಟಾಕ್ ಆಫ್ ದಿ ಟೌನ್ ಎನಿಸಿಕೊಂಡಿರುವ ಸಾಹಸ ನಿರ್ದೇಶಕ ವಿಕ್ರಮ್. ಈಗಷ್ಟೆ ಬಿಡುಗಡೆಯಾಗಿರುವ ‘ರಾಮಾರ್ಜುನ’ ಚಿತ್ರದ ಟೀಸರ್‌ನಲ್ಲೂ ವಿಕ್ರಮ್ ಅವರ ಸಾಹಸ ದೃಶ್ಯಗಳು ಮೈನವಿರೇಳಿಸುತ್ತವೆ. ಯಶ್ ಅಭಿನಯದ ‘ಕೆಜಿಎಫ್’ ಚಿತ್ರಕ್ಕಾಗಿ ಅತ್ಯುತ್ತಮ ಸಾಹಸ ನಿರ್ದೇಶನ ಪ್ರಶಸ್ತಿ ಪಡೆದಿರುವ ವಿಕ್ರಮ್, ನೂರಾರು ಚಿತ್ರಗಳ ಸರದಾರ.

600 ಚಿತ್ರಗಳಿಗೆ ಫೈಟ್: ವಿಕ್ರಮ್ ಅವರು ಸಾಹಸ ವಿಭಾಗಕ್ಕೆ ಬಂದಿದ್ದು 2003ರಲ್ಲಿ. ಅಲ್ಲಿಂದ ಇಲ್ಲಿವರೆಗೆ 600ಕ್ಕೂ ಹೆಚ್ಚು ಚಿತ್ರಗಳಿಗೆ ಫೈಟರ್ ಆಗಿ ಕೆಲಸ ಮಾಡಿದ್ದಾರೆ. ಇಷ್ಟು ದೊಡ್ಡ ಸಂಖ್ಯೆಯ ಚಿತ್ರಗಳಿಗೆ ಫೈಟರ್ ಆಗಿ ಕೆಲಸ ಮಾಡಿದ ಮೇಲೆಯೇ ಅವರಿಗೆ ಸಾಹಸ ನಿರ್ದೇಶಕನ ಪಟ್ಟ ಒಲಿದಿದ್ದು. ಸಾರ್ವಭೌಮ ಚಿತ್ರಕ್ಕೆ ವಿಕ್ರಮ್ ಅವರು ಮೊದಲು ಫೈಟರ್ ಕೆಲಸ ಮಾಡಿದವರು.

ಸ್ನೇಹಿತರ ಜೊತೆ ಚಾಲೆಂಜಿಂಗ್ ಸ್ಟಾರ್ ಹಾರ್ಸ್ ರೈಡಿಂಗ್ ವಿಡಿಯೋ ವೈರಲ್!

90 ಚಿತ್ರಗಳಿಗೆ ಸಾಹಸ ನಿರ್ದೇಶನ: ಫೈಟರ್ ಆದ ಮೇಲೆ ಇಲ್ಲಿವರೆಗೂ 90ಕ್ಕೂ ಹೆಚ್ಚು ಚಿತ್ರಗಳಿಗೆ ಸಾಹಸ ನಿರ್ದೇಶನ ಮಾಡಿದ್ದಾರೆ. ಮೊದಲ ಬಾರಿಗೆ ಅಕಿರಾ ಚಿತ್ರಕ್ಕೆ ಸಾಹಸ ನಿರ್ದೇಶಕನಾಗುವ ಮೂಲಕ ದೊಡ್ಡ ಮಟ್ಟದಲ್ಲಿ ಎಂಟ್ರಿ ಕೊಟ್ಟವರು. ಮುಂದೆ ಪಟಾಕಿ, ಶ್ರೀಕಂಠ, ಲೀಡರ್, ವಾಸು ನಾನ್ ಪಕ್ಕಾ ಕಮರ್ಷಿಯಲ್, ಅಕಿರಾ, ನಾಗರಕಟ್ಟೆ, ಚಮಕ್, ಬಜಾರ್ ಸೇರಿದಂತೆ ಹಲವು ಚಿತ್ರಗಳಿಗೆ ಸಾಹಸ ಸಂಯೋಜನೆ ಮಾಡಿದ್ದಾರೆ. ಇನ್ನೂ ಬಿಡುಗಡೆಯ ಹಂತದಲ್ಲಿರುವ ಭರಾಟೆ, ಅವನೇ ಶ್ರೀಮನ್ನಾರಾಯಣ, ಭಜರಂಗಿ 2, ರಾಮಾರ್ಜುನ, ವರ್ಧ, ಬುದ್ದಿವಂತ 2, ಕೃಷ್ಣ ಟಾಕೀಸ್ ಚಿತ್ರಗಳ ಸಾಹಸಗಳ ಹಿಂದೆ ಇದೇ ವಿಕ್ರಮ್ ಅವರ ಫೈಟಿಂಗ್ ಕಲೆ ಅಡಗಿದೆ.

ಟ್ರಾಫಿಕ್ ರೂಲ್ಸ್ ಜಾಗೃತಿಗಾಗಿ KGF ಮೊರೆ ಹೋದ ಪೊಲೀಸರು!

ಪ್ರಶಸ್ತಿ ನಿರೀಕ್ಷೆ ಇರಲಿಲ್ಲ: ವಿಕ್ರಮ್ ಅವರ ಸಾಹಸಕ್ಕೆ ರಾಷ್ಟ್ರ ಪ್ರಶಸ್ತಿ ತಂದುಕೊಟ್ಟ ಕೆಜಿಎಫ್ ಚಿತ್ರಕ್ಕೆ ಇವರು ಸಾಹಸ ನಿರ್ದೇಶನ ಮಾಡಿದ್ದೇ ಒಂದು ಆಕಸ್ಮಿಕ. ಅದು ‘ಉಗ್ರಂ’ ಚಿತ್ರದಿಂದ. ಈ ಚಿತ್ರಕ್ಕೆ ಸಾಹಸ ನಿರ್ದೇಶನ ಮಾಡುತ್ತಿದ್ದ ರವಿವರ್ಮ ಅವರು ಒಂದೆರಡು ದಿನ ಬ್ಯುಸಿ ಆದಾಗ ಅದೇ ದಿನ ನಡೆದ ಕೆಲ ಸಾಹಸ ಸನ್ನಿವೇಶಗಳನ್ನು ವಿಕ್ರಮ್ ಅವರೇ ಕಂಪೋಸ್ ಮಾಡುವ ಅವಕಾಶ ಸಿಕ್ಕಿತು. ಹೀಗೆ ‘ಉಗ್ರಂ’ನ ಒಂದೆರಡು ಸಾಸಹಸ ದೃಶ್ಯಗಳನ್ನು ರೂಪಿಸಿಕೊಟ್ಟ ವಿಕ್ರಮ್ ಅವರ ಪ್ರತಿಭೆ ನೋಡಿ ನಿರ್ದೇಶಕ ಪ್ರಶಾಂತ್ ನೀಲ್ ಅವರು ‘ಕೆಜಿಎಫ್’ ಚಿತ್ರಕ್ಕೆ ಸಾಹಸ ನಿರ್ದೇಶನದ ಜವಾಬ್ದಾರಿ ಕೊಟ್ಟರು.

ಕೆಜಿಎಫ್ ವಿಲನ್‌ಗೂ ಇದೆ ಪಂಜಾಬ್‌ನಲ್ಲಿ ಅಭಿಮಾನಿಗಳ ಸಂಘ!

ಹೀಗೆ ಆಕಸ್ಮಿಕವಾಗಿ ಬಂದ ಅವಕಾಶವೇ ಈಗ ರಾಷ್ಟ್ರ ಪ್ರಶಸ್ತಿಯನ್ನು ತಂದು ಕೊಟ್ಟಿರುವುದು ವಿಕ್ರಮ್ ಅವರ ಪ್ರತಿಭೆ ಹಿಡಿದು ಕನ್ನಡಿ. ಅನೀಶ್ ಕೊಟ್ಟ ಅವಕಾಶ: ಅಂದಹಾಗೆ ಫೈಟರ್ ಆಗಿದ್ದವರನ್ನು ಸಾಹಸ ನಿರ್ದೇಶಕನನ್ನಾಗಿಸಿದ್ದು ನಟ ಅನೀಶ್. ಹೌದು, ಇವರಕ ನಟನೆಯ ‘ಅಕಿರಾ’ ಚಿತ್ರಕ್ಕೆ ಸಾಹಸ ನಿರ್ದೇಶನ ಮಾಡುವ ಮೂಲಕ ಸ್ವಾತಂತ್ರ್ಯವಾಗಿ ಫೈಟ್ ಮಾಸ್ಟರ್ ಆದವರು. ಅಲ್ಲಿಂದ ಇಲ್ಲಿವರೆಗೂ 90 ಚಿತ್ರಗಳಿಗೆ ಸಾಹಸ ನಿರ್ದೇಶಕರಾಗಿದ್ದಾರೆ.

ಹೀಗಾಗಿ ಅನೀಶ್ ಕೊಟ್ಟ ಅವಕಾಶವನ್ನು ಮರೆಯಲಾರೆ ಎನ್ನುವ ವಿಕ್ರಮ್, ಈಗ ಅದೇ ಅನೀಶ್ ನಟನೆ, ನಿರ್ದೇಶನದ ‘ರಾಮಾರ್ಜುನ’ ಚಿತ್ರದಲ್ಲೂ ಫೈಟ್ ಮಾಸ್ಟರ್ ಆಗಿದ್ದಾರೆ. 

"

 

click me!