
ಬೆಂಗಳೂರು(ಜೂ.11): ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಇದೇ ಮೊದಲ ಬಾರಿಗೆ ರಾಜಕೀಯ ಗಣ್ಯರೊಬ್ಬರು ಸಾಧಕರ ಸೀಟಿನಲ್ಲಿ ಕುಳಿತ್ತಿದ್ದರು. ಅವರು ಮತ್ಯಾರು ಅಲ್ಲ ಕೆಂಪುಕೋಟೆಯಲ್ಲಿ ದ್ವಜಾರೋಹಣ ಮಾಡಿದ ಏಕೈಕ ಕನ್ನಡಿಗ ಮಾಜಿ ಪ್ರಧಾನಿ ದೇವೇಗೌಡರು. ಸಾಧಕರ ಸೀಟಿನಲ್ಲಿ ಕುಳಿತು ತಮ್ಮ ಜೀವನಾನುಭವ ಹಂಚಿಕೊಂಡರು. ಬಾಲ್ಯದ ನೆನಪುಗಳನ್ನು ಮೇಲುಕು ಹಾಕುತ್ತಾ, ತಂದೆ ತಾಯಿ ನೆನೆದು ಕಣ್ಣೀರು ಕೂಡ ಹಾಕಿದರು.
ಹಳ್ಳಿಯಿಂದ ದಿಲ್ಲಿವರೆಗೂ ಸಾಗಿರುವ ತಮ್ಮ ಸಜೀವನದ ಹಾದಿಯನ್ನು ಎಳೆ ಎಳೆಯಾಗಿ ದೇವೇಗೌಡರು ಬಿಚ್ಚಿಟ್ಟರು. ಬಾಲ್ಯದ ನೆನಪುಗಳನ್ನು ಹಂಚಿಕೊಂಡರು. ದೇವೇಗೌಡರು ಮೂರು ವರ್ಷ ಚಿಕ್ಕವರಿದ್ದಾಗಲೇ ಚಕ್ರವರ್ತಿ ಆಗುತ್ತೀಯಾ ಎಂದು ತಾಯಿ ಹೇಳಿದ್ದರು ಎನ್ನುವುದನ್ನು ಮೆಲುಕು ಹಾಕಿದರು.
ಇನ್ನೂ ಸಾಮಾನ್ಯವಾಗಿ ದೇವೇಗೌಡರು ನಗುವುದಿಲ್ಲ ಎಂಬ ಅಪಾದನೆ ಇದೆ. ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಕಲ್ಲಿ ಇದು ಸುಳ್ಳು ಎಂದು ತೋರಿಸಿದ ದೇವೇಗೌಡರು. ತಾವು ನಕ್ಕು ಇತರರನ್ನು ನಗಿಸಿದರು
ಪ್ರಧಾನಿಯಾಗಿದ್ದಾಗ ದೇವೇಗೌಡರಿಗೆ ಬೆಂಗಳೂರಿನಲ್ಲಿ ಸ್ವಂತ ಮನೆಯೇ ಇರಲಿಲ್ವಂತೆ. ಇನ್ನೂ ತುರ್ತು ಸಂದರ್ಭದಲ್ಲಿ ಜೈಲು ಸೇರಿ ಬಿಡುಗಡೆಯಾಗಿ ಬಂದಾಗ ದೇವೇಗೌಡರಿಗೆ ತಂದೆ ಹೇಳಿದ ಮಾತು. ಪ್ರಧಾನಿಯಾಗಿದ್ದಾಗ ತಾಯಿ ಹೇಳಿದ ಮಾತುಗಳನ್ನ ನೆನೆದು ಗೌಡರು ಕಣ್ಣೀರಿಟ್ಟರು.
ಇನ್ನೂ ಗೌಡರು ಅಪ್ಪಟ ಮಣ್ಣಿನ ಮಗ. ಹೀಗಾಗೇ ಕಾವೇರಿ ವಿಚಾರದಲ್ಲೂ ಮಾತನಾಡುವುದು ಮರೆಯಲಿಲ್ಲ. ಇಷ್ಟೇ ಅಲ್ಲ ಗೌಡರು ತಮ್ಮ ರಾಜಕೀಯ ಜೀವನ ಅಲ್ಲಿನ ಏರಿಳಿತಗಳು, ಆರ್ಥಿಕ ಸ್ಥಿತಿ, ಆಸ್ತಿ ಸಂಪಾದನೆ ಹೀಗೆ ಪ್ರತಿಯೊಂದನ್ನೂ ಜನತೆ ಮುಂದೆ ತೆರೆದಿಟ್ಟಿದ್ದಾರೆ. ಇಷ್ಟು ದಿನ ಕೇವಲ ರಾಜಕೀಯ ವಿಷ್ಯ ಮಾತನಾಡುತ್ತಿದ್ದ ದೇವೇಗೌಡರು, ಸಾಧಕರ ಸೀಟಿನಲ್ಲಿ ಕುಳಿತು ಇದೇ ಮೊದಲ ಬಾರಿಗೆ ತಮ್ಮ ವೈಯಕ್ತಿಕ ಜೀವನದ ಹಲವು ಗುಟ್ಟುಗಳನ್ನು ಬಿಚ್ಚಿಟ್ಟರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.