
ನವದೆಹಲಿ (ನ. 14): ದೀಪಿಕಾ ಪಡುಕೋಣೆ- ರಣವೀರ್ ಸಿಂಗ್ ವಿವಾಹ ಮಹೋತ್ಸವ ಇಟಲಿಯಲ್ಲಿ ಅದ್ದೂರಿಯಾಗಿ ನಡೆಯುತ್ತಿದೆ. ಮದುವೆ ಮಂಟಪದಲ್ಲಿ ಸಡಗರ ಸಂಭ್ರಮ ಮುಗಿಲು ಮುಟ್ಟಿದೆ. ಸ್ನೇಹಿತತು, ಕುಟುಂಬಸ್ಥರು ಇವರ ಮದುವೆಗೆ ಸಾಕ್ಷಿಯಾಗಿದ್ದಾರೆ.
ಸೋಮವಾರದಿಂದಲೇ ಮದುವೆ ಕಾರ್ಯ ಶುರುವಾಗಿದೆ. ಸೋಮವಾರ ಶಾಸ್ತ್ರೋಕ್ತವಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಆತ್ಮೀಯ ಸ್ನೇಹಿತರು, ಕುಟುಂಬಸ್ಥರು ಮಾತ್ರ ಉಪಸ್ಥಿತರಿದ್ದರು ಎನ್ನಲಾಗಿದೆ. ದೀಪಿಕಾ ಬಿಳಿ ಬಣ್ಣದ ಸೀರೆಯಲ್ಲಿ ಕಂಗೊಳಿಸುತ್ತಿದ್ದರೆ ರಣವೀರ್ ಸಿಂಗ್ ಕಪ್ಪು ಬಣ್ಣದ ಸೂಟ್ ಧರಿಸಿದ್ದರು.
ಮಂಗಳವಾರ ಬೆಳಿಗ್ಗೆ ಮೆಹಂದಿ ಶಾಸ್ತ್ರ ನಡೆದಿದ್ದು ಸಂಜೆ ಸಂಗೀತ ಕಾರ್ಯಕ್ರಮ ನಡೆದಿದೆ. ಮೆಹಂದಿ ಶಾಸ್ತ್ರ ವಿಲ್ಲಾ ಡಿ ಎಸ್ಟೇಟ್ ನಲ್ಲಿ ನಡೆದರೆ, ಸಂಗೀತ ಕಾರ್ಯಕ್ರಮ ಕಾಸ್ಟಾ ದಿವಾ ರೆಸಾರ್ಟ್ ನಲ್ಲಿ ನಡೆದಿದೆ.
ಮೆಹಂದಿ ಶಾಸ್ತ್ರದಲ್ಲಿ ಗಾಯಕರಾದ ಹರ್ಷದೀಪ್ ಕೌರ್ ಹಾಗಾಉ ಶುಭಾ ಮುದ್ಗಲ್ ಹಾಡು ಇನ್ನಷ್ಟು ಕಲರ್ ಫುಲ್ ಗಿತ್ತು. ಹಾಡಿನ ಮಧ್ಯೆ ರಣವೀರ್ ಹೀರೋನಂತೆ ಎಂಟ್ರಿ ಕೊಟ್ಟು ಇನ್ನಷ್ಟು ಮೆರಗು ತಂದರು.
ಒಂದು ಕಡೆ ಸಡಗರ, ಸಂಭ್ರಮವಿದ್ದರೆ ಇನ್ನೊಂದು ಕಡೆ ದೀಪಿಕಾ ಕಣ್ಣೀರು ಹಾಕಿದ್ದಾರೆ. ಕೊನೆಗೆ ರಣವೀರ್ ಆಕೆಯನ್ನು ತಬ್ಬಿಕೊಂಡು ಸಮಾಧಾನಪಡಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.