ಸ್ಪೈಡಲ್ ಮ್ಯಾನ್ ಸೃಷ್ಟಿಕರ್ತ ಸ್ಟಾನ್ ಇನ್ನಿಲ್ಲ

By Web DeskFirst Published Nov 13, 2018, 3:50 PM IST
Highlights

ಕಾರ್ಟೂನ್ ನೋಡಿ ಬೆಳೆದ ಮಕ್ಕಳಿಗೆ ಸ್ಟಾನ್ ಲೀ ರಿಯಲ್ ಹೀರೋ ಇದ್ದ ಹಾಗೆ. ಒಂದಕ್ಕಿಂತ ಒಂದು ವಿಭಿನ್ನವಾದ ಪಾತ್ರಗಳನ್ನು ಸೃಷ್ಟಿಸಿ, ಮಕ್ಕಳನ್ನು ಕಲ್ಪನಾ ಲೋಕದಲ್ಲಿ ತೇಲುವಂತೆ ಮಾಡಿದವರು ಇವರು. ಇವರ ಸೃಷ್ಟಿಯ ಎಲ್ಲ ಪಾತ್ರಗಳನ್ನು ನೋಡುವುದೇ ಆನಂದ.

ಲಾಸ್ ಎಂಜಲೀಸ್‌ನಲ್ಲಿ ಸ್ಟಾನ್ ಕೊನೆಯುಸಿರೆಳೆದಿದ್ದಾರೆ. ಅವರಿಗೆ 95 ವರ್ಷ ವಯಸ್ಸಾಗಿತ್ತು. ಇನ್ನು ಇವರು ಸೃಷ್ಟಿಸಿದ ಪಾತ್ರಗಳೆಲ್ಲ ಅನಾಥ.

ಇವರು ಸೃಷ್ಟಿಸಿದ ಹಲವು ಪಾತ್ರಗಳೇ ಸಿನಿಮಾಗಳಾಗಿವೆ. ಏಳು ದಶಕಗಳ ಕಾಲ ಕಾಮಿಕ್ ಲೋಕದ ರಾಜನಾಗಿಯೇ ಮೆರೆದಿದ್ದರು ಸ್ಟಾನ್ ಲೀ. 17 ವರ್ಷದರಾಗಿದ್ದಾಗಲೇ ಟೈಂಲಿ ಪಬ್ಲಿಕೇಷನ್‌ನಲ್ಲಿ ಕೆಲಸ ನಿರ್ವಹಿಸಿದ್ದರು ಸ್ಟಾನ್. 19ನೇ ವಯಸ್ಸಲೇ ಆ ಸಂಸ್ಥೆಗೆ ಮುಖ್ಯ ಸಂಪಾದಕರಾಗಿ ಸೇವೆ ಸಲ್ಲಿಸಿದ ಕೀರ್ತಿಯೂ ಇವರದ್ದು.

2ನೇ ವಿಶ್ವ ಮಹಾ ಯುದ್ಧದ ನಂತರ ಯಾರು ಕಾಮಿಕ್ ನೋಡಲು ಇಚ್ಛಿಸುತ್ತಿರಲಿಲ್ಲ. ಆ ಕೆಲಸವನ್ನೇ ಬಿಡಬೇಕು ಎಂದು ಕೊಂಡಿದ್ದರು. ಆಗ ಇವರಿಗೆ ಬೆನ್ನೆಲುಬಾಗಿ ನಿಂತವರು ಅವರ ಮಡದಿ. ಮಡದಿಯ ಮಹಾದಾಸೆ ತೀರಿಸಲು Fantastic Four ಕಾಮಿಕ್ ಬರೆದರು. ಮತ್ತೆ ನಡೆದದ್ದು ಇತಿಹಾಸ. ಅವರು ಬರೆದಿದ್ದೆಲ್ಲಾ ಕ್ಲಿಕ್ ಆಯಿತು. ವಿಶ್ವದ ಶ್ರೇಷ್ಟ ಕಾಮಿಕ್ ಬರಹಗಾರರಾಗಿ ಬೆಳೆದರು. ನಂತರ Marvel ಹಾಗೂ ಸ್ಟೈಡರ್ ಮ್ಯಾನ್ ಪಾತ್ರಗಳನ್ನು ಸೃಷ್ಟಿಸಿದರು. ಹಾಲ್ಕ್, ಎಕ್ಸ್ ಮ್ಯಾನ್, ಐರನ್ ಮ್ಯಾನ್, ಟೋನಿ ಸ್ಟ್ರಾಕ್...ಹೀಗೆ ಒಂದಕ್ಕಿಂತ ಮತ್ತೊಂದು ಪಾತ್ರಗಳನ್ನು ಸೃಷ್ಟಿಸಿದ್ದು, ಎಲ್ಲವೂ ಕ್ಲಿಕ್ ಆದವು. ಮಕ್ಕಳ ನೆಚ್ಚಿನ ಪಾತ್ರಗಳನ್ನು ಸೃಷ್ಟಿಸಿದ ಸ್ಟಾನ್ ಲೀ ಇನ್ನು ನೆನಪು ಮಾತ್ರ.

click me!