ರೆಸ್ಲಿಂಗ್ ಸ್ಟಾರ್ ಜೊತೆ ಫೈಟ್ ಮಾಡಿ ಆಸ್ಪತ್ರೆ ಸೇರಿದ ರಾಖಿ!

Published : Nov 13, 2018, 04:31 PM IST
ರೆಸ್ಲಿಂಗ್ ಸ್ಟಾರ್ ಜೊತೆ ಫೈಟ್ ಮಾಡಿ ಆಸ್ಪತ್ರೆ ಸೇರಿದ ರಾಖಿ!

ಸಾರಾಂಶ

ಮಾಡಬಾರದ ಕೆಲಸ ಮಾಡಿ ಸುದ್ದಿಯಾಗುವ ನಟಿ ರಾಖಿ ಸಾವಂತ್ ಮತ್ತೆ ಅದೇ ಕೆಲಸ ಮಾಡಿದ್ದಾಳೆ. ಆದರೆ ಈ ಬಾರಿ ಕೊಂಚ ಎಡವಿದ್ದು, ರೆಸ್ಲಿಂಗ್ ಸ್ಟಾರ್ ಗೆ ಹಾಕಿದ ಚಾಲೆಂಜ್ ಆಕೆ ಆಸ್ಪತ್ರೆ ಸೇರುವಂತೆ ಮಾಡಿದೆ. ಅಷ್ಟಕ್ಕೂ ಏನಿದು ವಿವಾದ ರಾಖಿ ಆಸ್ಪತ್ರೆ ಸೇರಿದ್ದೇಕೆ? ಇಲ್ಲಿದೆ ವಿವರ

ಆಡಬಾರದ ಮಾತುಗಳನ್ನಾಡಿ, ಮಾಡಬಾರದ ಕೆಲಸ ಮಾಡಿ ಸುದ್ದಿಯಾಗುವ ನಟಿ ರಾಖಿ ಸಾವಂತ್ ಮತ್ತೆ ಅದೇ ಕೆಲಸ ಮಾಡಿದ್ದಾಳೆ. ಆದರೆ ಈ ಬಾರಿ ಕೊಂಚ ಎಡವಿದ್ದು, ರೆಸ್ಲಿಂಗ್ ಸ್ಟಾರ್ ಗೆ ಹಾಕಿದ ಚಾಲೆಂಜ್ ಆಕೆ ಆಸ್ಪತ್ರೆ ಸೇರುವಂತೆ ಮಾಡಿದೆ. ಅಷ್ಟಕ್ಕೂ ಏನಿದು ವಿವಾದ ರಾಖಿ ಆಸ್ಪತ್ರೆ ಸೇರಿದ್ದೇಕೆ? ಇಲ್ಲಿದೆ ವಿವರ

ಇತ್ತೀಚೆಗಷ್ಟೇ ರಾಖಿ ಸಾವಂತ್ ಹರ್ಯಾಣದ ಪಂಚಕುಲದಲ್ಲಿ ಆಯೋಜಿಸಿದ್ದ ರೆಸ್ಲಿಂಗ್ ಸ್ಪರ್ಧೆಯಲ್ಲಿ ನೃತ್ಯ ಮಾಡಲು ಹೋಗಿದ್ದರು. ಆಕೆ ಹೋದ ಕೆಲಸ ಮುಗಿಸಿ ಬಂದರೆ ಏನು ಅಗುತ್ತಿರಲಿಲ್ಲ. ಆದರೆ ಬಂದಿದ್ದ ಸ್ಪರ್ಧಿಯೊಬ್ಬಳಿಗೆ ಚಾಲೆಂಜ್ ಮಾಡಿ ತನ್ನೊಂದಿಗೆ ಸ್ಪರ್ಧಿಸುವಂತೆ ಆಹ್ವಾನಿಸಿದ್ದಾಳೆ. ಅಲ್ಲದೇ ಆಕೆ ಎದುರು ಹಿಯಾಳಿಸುವಂತೆ ನೃತ್ಯವನ್ನೂ ಮಾಡಿದ್ದಾಳೆ. 

ಇದನ್ನೆಲ್ಲಾ ಗಮನಿಸಿದ ಆ ವಿದೇಶೀ ಸಹಸ್ಪರ್ಧಿಗೂ ಕೋಪ ನೆತ್ತಿಗೇರಿದೆ. ಹೀಗಾಗಿ ಕೆಟ್ಟದಾಗಿ ಕುಣಿಯುತ್ತಿದ್ದ ರಾಖಿಯನ್ನು ಎತ್ತಿ ನೆಲಕ್ಕೆ ಬಡಿದಿದ್ದಾಳೆ. ಇಷ್ಟೇ... ಬಿದ್ದ ರಾಖಿ ಸಾವಂತ್ ಮೇಲೇಳಲೇ ಇಲ್ಲ. ಕೊನೆಗೆ ಅಲ್ಲಿದ್ದವರೆಲ್ಲಾ ಸೇರಿ ಅಕೆಯನ್ನು ಎತ್ತಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಈ ಮೂಲಕ ಕೈಲಾಗದ ಸಾಹಸ ಮಾಡಲು ಹೋಗಿ, ಸೊಂಟ ಮುರಿದುಕೊಂಡಿದ್ದಾಳೆ.

ಈ ಕುರಿತಾಗಿ ಪ್ರತಿಕ್ರಿಯಿಸಿರುವ ರಾಖಿ ಸಾವಂತ್ ಆ ವಿದೇಶೀ ರೆಸ್ಲರ್ ನನ್ನ ಮೇಲೆ ಯಾಕೆ ದಾಳಿ ನಡೆಸಿದಳೆಂದು ನನಗೆ ತಿಳಿದಿಲ್ಲ. ಬಹುಶಃ ಆಕೆಗೆ ನನ್ನ ಮೇಲೆ ದಾಳಿ ನಡೆಸಲು ಯಾರಾದರೂ ಸೂಚಿಸಿರಬಹುದು. ಇದರ ಹಿಂದೆ ಬಹುದೊಡ್ಡ ಷಡ್ಯಂತ್ರವಿದೆ. ಆದರೀಗ ಪೋಗಾಟ್ ಸಿಸ್ಟರ್ಸ್[ಗೀತಾ ಹಾಗೂ ಬಬಿತಾ ಪೋಗಾಟ್] ನನ್ನ ಮೇಲಾದ ಈ ದಾಳಿಗೆ ಆ ವಿದೇಶೀ ರೆಸ್ಲರ್ ಮೇಲೆ ಸೇಡು ತೀರಿಸಿಕೊಳ್ಳಬೇಕು ಎಂದಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ತುಟಿ ಬಗ್ಗೆ ಕಮೆಂಟ್‌ಗೆ ಸ್ತಬ್ಧರಾದ ಭೂಮಿ ಪಡ್ನೇಕರ್, ನೋವು ತೋಡಿಕೊಂಡ ನಟಿ
ವಿಜಯಲಕ್ಷ್ಮಿ ಊದಿದ್ದ ಆ ರಣ ಕಹಳೆಯಲ್ಲಿ ವಿಜಯ! ಜೂನ್​​ 2026ರ ಒಳಗೆ ದರ್ಶನ್‌ಗೆ ಸಿಗುತ್ತಂತೆ ಬೇಲ್!