ಉಪ್ಪಿ ಲೈಫ್ ನಲ್ಲಿ ಆದಿತ್ಯ ವಿಲನ್ ?

Published : May 18, 2019, 09:35 AM IST
ಉಪ್ಪಿ ಲೈಫ್ ನಲ್ಲಿ ಆದಿತ್ಯ ವಿಲನ್ ?

ಸಾರಾಂಶ

‘ಡೆಡ್ಲಿ ಸೋಮ’ ಚಿತ್ರದ ಖ್ಯಾತಿಯ ನಟ ಆದಿತ್ಯ, ನಟನೆಯಲ್ಲಿ ಮತ್ತೆ ಬ್ಯುಸಿ ಆಗುತ್ತಿದ್ದಾರೆ. ಈಗಾಗಲೇ ‘ಮುಂದುವರೆದ ಅಧ್ಯಾಯ’ ಹೆಸರಿನ ಚಿತ್ರವೊಂದರಲ್ಲಿ ನಾಯಕ ನಟರಾಗಿ ಅಭಿನಯಿಸುತ್ತಿದ್ದು, ಅದಕ್ಕೀಗ ಬಹುತೇಕ ಚಿತ್ರೀಕರಣವೂ ಮುಗಿದಿದೆ. ಇದೀಗ ಟಿ.ಆರ್‌.ಚಂದ್ರಶೇಖರ್‌ ನಿರ್ಮಾಣ ಹಾಗೂ ಮಯೂರ್‌ ನಿರ್ದೇಶನದಲ್ಲಿ ಉಪೇಂದ್ರ ನಾಯಕ ನಟರಾಗಿ ಅಭಿನಯಿಸುತ್ತಿರುವ ಹೊಸ ಸಿನಿಮಾಕ್ಕೆ ಆದಿತ್ಯ ವಿಲನ್‌ ಎನ್ನುವ ಸುದ್ದಿ ರಿವೀಲ್‌ ಆಗಿದೆ.

ಈ ಚಿತ್ರಕ್ಕೆ ಟೈಟಲ್‌ ಫೈನಲ್‌ ಆಗಿಲ್ಲ. ಮೇ 24 ರಿಂದ ಚಿತ್ರಕ್ಕೆ ಅಧಿಕೃತವಾಗಿ ಚಿತ್ರೀಕರಣ ಶುರು ಎನ್ನಲಾಗಿದೆ. ಈ ಹಂತದಲ್ಲೀಗ ಚಿತ್ರ ತಂಡವು ಬಾಕಿ ಉಳಿದ ಕಲಾವಿದರ ಆಯ್ಕೆಯಲ್ಲಿ ಬ್ಯುಸಿ ಆಗಿದ್ದು, ಎರಡು ದಿನಗ ಹಿಂದಷ್ಟೇ ಚಿತ್ರದ ಪ್ರಮುಖ ವಿಲನ್‌ ಪಾತ್ರಕ್ಕೆ ಆದಿತ್ಯ ಅವರನ್ನು ಫೈನಲ್‌ ಮಾಡಿಕೊಂಡಿದೆ ಎನ್ನುವ ಮಾತುಗಳು ಕೇಳಿ ಬಂದಿವೆ. ಚಿತ್ರಕ್ಕೆ ಈ ತನಕ ಉಪೇಂದ್ರ ಒಬ್ಬರೇ ಫೈನಲ್‌ ಆಗಿದ್ದು. ಇದೀಗ ಉಳಿದ ಪಾತ್ರಧಾರಿಗಳ ಆಯ್ಕೆ ನಡೆಯುತ್ತಿದೆ. ನಾಯಕಿಯೂ ಸೇರಿ ಇನ್ನು ಪೋಷಕ ಪಾತ್ರಗಳಿಗೂ ಕಲಾವಿದರ ಆಯ್ಕೆ ಬಾಕಿಯಿದೆ.

ಎರಡು ವರ್ಷಗಳ ನಂತರ ತೆರೆ ಮೇಲೆ ಉಪೇಂದ್ರ!

ನಿರ್ಮಾಪಕ ಟಿ.ಆರ್‌. ಚಂದ್ರಶೇಖರ್‌ ಈಗ ಸ್ಟಾರ್‌ ಸಿನಿಮಾಗಳ ನಿರ್ಮಾಪಕ. ಸಾಲು ಸಾಲು ಸಿನಿಮಾಗಳ ನಿರ್ಮಾಣದ ಜತೆಗೆ ಸಕ್ಸಸ್‌ಫುಲ್‌ ನಿರ್ಮಾಪಕ ಎನ್ನುವ ಖ್ಯಾತಿಯ ಅವರಿಗಿದೆ. ಇದೀಗ ಉಪ್ಪಿ ಕಾಂಬಿನೇಷನ್‌ ಹೊಸ ಸಿನಿಮಾಕ್ಕೆ ನಟ ಆದಿತ್ಯ ಅವರನ್ನೇ ವಿಲನ್‌ ಆಗಿ ಆಯ್ಕೆ ಮಾಡಿಕೊಂಡಿದ್ದು ಒಂದೆಡೆಯಾದರೆ, ಮುಂದಿನ ದಿನಗಳಲ್ಲಿ ಅವರನ್ನೇ ಹೀರೋ ಆಗಿಸಿಕೊಂಡು ಮತ್ತೊಂದು ಸಿನಿಮಾ ಮಾಡುವ ಸಿದ್ಧತೆಯಲ್ಲೂ ಇದ್ದಾರೆನ್ನಲಾಗಿದೆ. ಸದ್ಯಕ್ಕೆ ಅದಿನ್ನು ಅಧಿಕೃತಗೊಂಡಿಲ್ಲ. ಆದರೆ ಉಪ್ಪಿ ಜತೆಗಿನ ಅವರ ಹೊಸ ಸಿನಿಮಾದಲ್ಲಿ ಆದಿತ್ಯ ವಿಲನ್‌ ಆಗಿ ಕಾಣಿಸಿಕೊಳ್ಳುವುದಂತೂ ಖಚಿತ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಪತ್ನಿ, ಮಗಳ ಜೊತೆ ಹೋಗಿ ಮನೆಗೆ ಹೊಸ ಕಾರ್‌ ತಂದ Amruthadhaare Serial ನಟ ರಾಜೇಶ್‌ ನಟರಂಗ!
Rukmini Vasanth Birthday: ಬೆಸ್ಟ್ ಫ್ರೆಂಡ್ ಹುಟ್ಟುಹಬ್ಬಕ್ಕೆ ನಟಿ Chaitra Achar ವಿಶ್ ‌ಮಾಡಿದ್ದು ಹೀಗೆ