
‘ನಮ್ಮ ನಿರೀಕ್ಷೆಯಂತೆ ಸಿನಿಮಾ ಚೆನ್ನಾಗಿ ಬಂದಿದೆ. ಪಕ್ಕಾ ದರ್ಶನ್ ಅಭಿಮಾನಿಗಳಿಗೆ ಇಷ್ಟವಾಗುವಂತಹ ಕತೆಯನ್ನು ಒಳಗೊಂಡಿರುವ ಸಿನಿಮಾ ಇದು. ಈಗಾಗಲೇ ಚಿತ್ರದ ಒಂದಿಷ್ಟು ದೃಶ್ಯಗಳನ್ನು ನೋಡಿರುವುದರಿಂದ ಸಿನಿಮಾ ಮೇಲೆ ಸಾಕಷ್ಟು ನಂಬಿಕೆ ಬಂದಿದೆ. ಆ ಕಾರಣಕ್ಕೆ ಈ ಸಿನಿಮಾ ಎಲ್ಲ ಪ್ರೇಕ್ಷಕರಿಗೂ ದೊಡ್ಡ ಮಟ್ಟದಲ್ಲಿ ಇಷ್ಟವಾಗುತ್ತದೆಂಬ ಭರವಸೆ ಇದೆ. ಚಿತ್ರಕ್ಕೆ
ಈಗ ತಾಂತ್ರಿಕ ಕೆಲಸಗಳು ನಡೆಯುತ್ತಿವೆ. ಇಲ್ಲಿಯವರೆಗೂ ಚುನಾವಣೆ ಜತೆಗೆ ಮತ್ತೊಂದು ಚಿತ್ರದ ಚಿತ್ರೀಕರಣದಲ್ಲಿದ್ದ ದರ್ಶನ್ ಈಗ ಒಡೆಯನಿಗೆ ಜತೆಯಾಗಲಿದ್ದಾರೆ’ ಎಂದು ನಿರ್ದೇಶಕ ಎಂ ಡಿ ಶ್ರೀಧರ್ ಹೇಳುತ್ತಾರೆ. ಎಲ್ಲವೂ ಅಂದುಕೊಂಡಂತೆ ಆದರೆ ಜೂನ್ ಅಥವಾ ಜುಲೈ ತಿಂಗಳಲ್ಲಿ ‘ಒಡೆಯ’ ಸಿನಿಮಾ ತೆರೆಗೆ ಬರಲಿದೆ. ಸದ್ಯ ಎರಡು ಹಾಡುಗಳ ಚಿತ್ರೀಕರಣ ಬಾಕಿದ್ದು, ಈ ಹಾಡುಗಳನ್ನು ಯಾವ ದೇಶದಲ್ಲಿ ಚಿತ್ರೀಕರಣ ಮಾಡಬೇಕೆಂಬ ಯೋಚನೆಯಲ್ಲಿದೆ ಚಿತ್ರತಂಡ.
ಚೆನ್ನೈನಿಂದ ಮರಳಿದ ರಾಬರ್ಟ್ ತರುಣ್ ಸುಧೀರ್ ನಿರ್ದೇಶನದ ‘ರಾಬರ್ಟ್’ ಚಿತ್ರಕ್ಕೆ ಕೆಲವು ದಿನಗಳಿಂದ ಚೆನ್ನೈನಲ್ಲಿ ಚಿತ್ರೀಕರಣ ನಡೆಯುತ್ತಿತ್ತು. ಈಗ ಚೆನ್ನೈ ಶೆಡ್ಯೂಲ್ ಮುಗಿಸಿಕೊಂಡು ಬಂದಿದ್ದು, ಮೇ.30 ರಿಂದ ಬೆಂಗಳೂರಿನಲ್ಲಿ ಚಿತ್ರೀಕರಣ ನಡೆಯಲಿದೆ. ಹೆಬ್ಬುಲಿ ಉಮಾಪತಿ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಮೇ.30 ರಿಂದ ಬೆಂಗಳೂರಿನಲ್ಲೇ ರಾಬರ್ಟ್ ಚಿತ್ರೀಕರಣ ಆರಂಭವಾಗಲಿದೆ. ಎರಡನೇ ಶೆಡ್ಯೂಲ್ ಚಿತ್ರೀಕರಣಕ್ಕೆ ಉತ್ತರ ಭಾರತದತ್ತ ಚಿತ್ರತಂಡ ಮುಖ ಮಾಡುವ ಸಾಧ್ಯತೆಗಳಿವೆ.
ದರ್ಶನ್‌ಗೆ 'ಚಾಲೆಂಜಿಂಗ್ ಸ್ಟಾರ್' ಎಂದು ಬಿರುದು ಕೊಟ್ಟ ಬಳಗವಿದು!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.