
ಈ ಹಿಂದೆ ಸಾಕಷ್ಟು ನಟ, ನಟಿಯರು ನಿರ್ಮಾಣಕ್ಕೆ ಇಳಿದಿರುವ ಉದಾಹರಣೆ ನಮ್ಮಲ್ಲಿ ತುಂಬಾ ಇದೆ. ಆದರೆ ಕತ್ರಿನಾ ಸ್ವಲ್ಪ ಡಿಫರೆಂಟ್. ಅದು ಏನೆಂದು ಅವರೇ ಹೇಳಿದ್ದಾರೆ. ‘ನಾನು ಯಾವುದೇ ಹೊಸ ಸಾಧ್ಯತೆಗಳಿಗೆ ಬೇಗನೆ ತೆರೆದುಕೊಳ್ಳುವುದಿಲ್ಲ. ಮೊದಲು ಸೋಷಲ್ ಮೀಡಿಯಾ ಬಂದಾಗ ನಾನು ಅದರತ್ತ ಹೆಚ್ಚು ಒಲವು ತೋರಿಯೇ ಇರಲಿಲ್ಲ. ನನ್ನ ಮ್ಯಾನೇಜರ್ ಬಂದು ಟ್ವಿಟ್ಟರ್‌ನಲ್ಲಿ ಅಕೌಂಟ್ ಓಪನ್ ಮಾಡೋಣ ಎಂದಾಗ ಬೇಡ ಎಂದಿದ್ದೆ. ಆದರೆ ಅವರೇ ನನಗೆ ಅದರ ಮಹತ್ವ ತಿಳಿಸಿದ್ದರಿಂದ ಒಪ್ಪಿದ್ದೆ.
ಈಗ ಅದರ ಪ್ರಸಾರ ವ್ಯಾಪ್ತಿ, ಮಹತ್ವ ಏನು ಎಂದು ಗೊತ್ತಾಗಿದೆ. ಅದೇ ರೀತಿ ಹೊಸ ಪ್ರೊಡಕ್ಷನ್ ಹೌಸ್ ಶುರು ಮಾಡಿ ಮತ್ತೊಂದು ಹೊಸ ಲೋಕಕ್ಕೆ ಪ್ರವೇಶ ಪಡೆಯೋಣ, ಅದರ ಅನುಭವವನ್ನೂ ಹೊಂದೋಣ ಎನ್ನುವುದು ನನ್ನ ಬಯಕೆ’ ಎಂದು ಹೇಳಿಕೊಂಡಿದ್ದಾರೆ. ಎಲ್ಲವೂ ಅಂದುಕೊಂಡಂತೆ ಆದರೆ ಕತ್ರಿನಾ ಕೈಫ್ ಮುಂದಿನ ಚಿತ್ರಗಳು ಅವರದ್ದೇ ಪ್ರೊಡಕ್ಷನ್ ಹೌಸ್ ನಿಂದ ಹೊರ ಬರಬಹುದು.
’ಇಂದಿರಾಗಾಂಧಿ’ ಆಗ್ತಾರಾ ಕತ್ರಿನಾ ಕೈಫ್?
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.