
ಕನ್ನಡ ಚಿತ್ರರಂಗದ ಸ್ಟಾರ್ ನಟ ದರ್ಶನ್ ತೂಗುದೀಪ (Darshan Thoogudeepa) ಅವರು ರೇಣುಕಾಸ್ವಾಮಿ ಕೊಲೆ ಅರೋಪದಲ್ಲಿ ಮತ್ತೆ ಜೈಲು ಸೇರಿದ್ದು ಗೊತ್ತೇ ಇದೆ. ಹೈಕೋರ್ಟ್ ಕೊಟ್ಟಿದ್ದ ಬೇಲ್ ರದ್ದು ಮಾಡಿ ಇದೀಗ ಸುಪ್ರೀಂ ಕೋರ್ಟ್ ಆದೇಶದ ಮೇಲೆ ಆರೋಪಿ ದರ್ಶನ್ ಅವರನ್ನು ಮತ್ತೆ ಅರೆಸ್ಟ್ ಮಾಡಿ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿಗೆ ಹಾಕಲಾಗಿದೆ. ಮೊನ್ನೆ ನಡೆದ ಈ ಬೆಳವಣಿಗೆ ಸಹಜವಾಗಿಯೇ 'ದಿ ಡೆವಿಲ್' ಚಿತ್ರಕ್ಕೆ ಶಾಪವಾಗಿ ಪರಿಣಮಿಸಿದೆ.
ಶಾಪ ಇಂದ ಸೆನ್ಸ್, ದರ್ಶನ್ ನಟನೆಯಲ್ಲಿ ಇತ್ತೀಚೆಗಷ್ಟೇ ಶೂಟಿಂಗ್ ಮುಗಿಸಿ ಮೊಟ್ಟಮೊದಲ ಹಾಡನ್ನು ಬಿಡುಗಡೆ ಮಾಡುವ ಸಂಭ್ರಮದಲ್ಲಿ ಇತ್ತು ದಿ ಡೆವಿಲ್ (The Devil) ಚಿತ್ರತಂಡ. ಆಗಸ್ಟ್ 15ಕ್ಕೆ ಸಾಂಗ್ ಲಾಂಚ್ ಕೂಡ ಫಿಕ್ಸ್ ಆಗಿತ್ತು. ಆದರೆ, ನಟ ದರ್ಶನ್ ಬೇಲ್ ರದ್ದಾಗಿ ಮತ್ತೆ ಜೈಲು ಸೇರಿರುವ ಕಾರಣಕ್ಕೆ ಸಿನಿಮಾ ತಂಡ ಸಾಂಗ್ ಲಾಂಚ್ ಮುಂದಕ್ಕೆ ಹಾಕಿದೆ. ಅಷ್ಟೇ ಅಲ್ಲ, ಮತ್ತೊಂದು ಬೆಳವಣಿಗೆ ಕೂಡ ನಡೆದಿದೆ. ಅದು 'ದಿ ಡೆವಿಲ್' ನಿರ್ದೇಶಕ ಪ್ರಕಾಶ್ ವೀರ್ (ಮಿಲನಾ ಪ್ರಕಾಶ್) ನಾಟ್ ರೀಚೆಬಲ್ ಅಗುವಂತೆ ಮಾಡಿದೆಯಂತೆ!
ಹೌದು, ನಟ ದರ್ಶನ್ ತೂಗುದೀಪ ಅರೆಸ್ಟ್ ಆಗ್ತಾ ಇದ್ದ ಹಾಗೇನೇ ದಿ ಡೆವಿಲ್ ನಿರ್ಮಾಪಕ ಕಂ ನಿರ್ದೇಶಕ ಪ್ರಕಾಶ್ ವೀರ್ (Prakash Veer) ಫೋನ್ ಸ್ವಿಚ್ ಆಫ್ ಮಾಡಿ ನಾಟ್ ರೀಚೆಬಲ್ ಆಗಿದ್ದಾರೆ. ಹಾಡಿನ ಬಿಡುಗಡೆಯನ್ನ ಮುಂದೂಡಿ, ಮುಂದೇನು ಮಾಡೋದು ಅಂತ ಅಜ್ಞಾತ ಸ್ಥಳದಲ್ಲಿ ಕುಳಿತು ಯೋಚಿಸ್ತಾ ಇದ್ದಾರೆ ಎನ್ನಲಾಗ್ತಿದೆ. ಈ ಬಗ್ಗೆ ಕನ್ನಡದ ಖ್ಯಾತ ನಿರ್ಮಾಪಕರಾದ ಚಿನ್ನೇಗೌಡರು ಮಾಹಿತಿ ನೀಡಿದ್ದಾರೆ. ನಿರ್ದೇಶಕ ಪ್ರಕಾಶ್ ವೀರ್ ಅವರ ಸ್ಥಿತಿ ಸದ್ಯ ಯಾರಿಗೂ ಬೇಡ ಎಂಬಂತಾಗಿದೆ.
'ದಿ ಡೆವಿಲ್' ಸಿನಿಮಾಗೆ ಕೋಟಿ ಕೋಟಿ ಖರ್ಚು ಮಾಡಲಾಗಿದೆ. ದರ್ಶನ್ಗೆ ಈ ಹಿಂದೆಂದೂ ಕೊಡದಷ್ಟು ಸಂಭಾವನೆ ಕೊಟ್ಟಿದ್ದಾರೆ. 2024ರ ಡಿಸೆಂಬರ್ಗೆ ರಿಲೀಸ್ ಆಗಬೇಕಿದ್ದ ಈ ಸಿನಿಮಾ ಇಲ್ಲಿವರೆಗೂ ತಡವಾಗಿರೋದಕ್ಕೆ ನಟ ದರ್ಶನ್ ಸಿಕ್ಕಿಹಾಕಿಕೊಂಡಿರುವ ಕೊಲೆ ಆರೋಪದ ಕೇಸೇ ಕಾರಣ. ಇನ್ನೇನು ಚಿತ್ರ ಮುಗಿಸಿ ರಿಲೀಸ್ ಮಾಡೋಣ ಅನ್ನೋ ಟೈಂನಲ್ಲಿ ದರ್ಶನ್ ಮತ್ತೆ ಅಂದರ್ ಆಗಿರೋದು ದಿ ಡೆವಿಲ್ ಮೇಕರ್ಸ್ಗೆ ತಲೆನೋವು ತಂದಿದೆ.
ಸದ್ಯಕ್ಕೆ 'ದಿ ಡೆವಿಲ್' ನಿರ್ಮಾಪಕರ ಸ್ಥಿತಿ ಡೋಲಾಯಮಾನ ಎಂಬಂತಾಗಿದೆ. ಚಿತ್ರದ ಹೀರೋ ಇಲ್ಲದೇ ಮುಂದಿನ ಎಲ್ಲಾ ಕೆಲಸ ಮಾಡಬೇಕಿದೆ. ಸಾಂಗ್ ಲಾಂಚ್, ಪ್ರಚಾರ ಕಾರ್ಯ ಹಾಗು ಸಿನಿಮಾ ಬಿಡುಗಡೆಯನ್ನು ನಟ ದರ್ಶನ್ ಅವರ ಗೈರು ಹಾಜರಿಯಲ್ಲಿ ನಡೆಸಬೇಕಿದೆ. ಅದೂ ಕೂಡ ಕೊಲೆ ಕೇಸ್ ಆರೋಪ ಆಗಿರುವ ಕಾರಣಕ್ಕೆ ನಟ ದರ್ಶನ್ ಅವರಿಗೆ ಯಾವಾಗ ಬಿಡುಗಡೆ ಆಗುತ್ತೋ ಅಥವಾ ಶಿಕ್ಷೆ ಆಗುತ್ತೋ ಎಂಬ ಆತಂಕ ಸಹಜವಾಗಿಯೇ ಕಾಡಲಿದೆ. ಆದರೆ, ನಿರ್ಮಾಣವಾಗಿರುವ ಸಿನಿಮಾವನ್ನು ರಿಲೀಸ್ ಮಾಡಲೇಬೇಕಿದೆ.
ಹೈಕೋರ್ಟ್‌ನಿಂ ದ ಅಂದು ಬೇಲ್ ಸಿಕ್ಕ ತಕ್ಷಣ ನಟ ದರ್ಶನ್ ತೂಗುದೀಪ ಅವರು 'ಮುಂದೆ ನನ್ನ ಭವಿಷ್ಯ ಏನು ಬೇಕಾದರೂ ಅಗಬಹುದು.. ಹೀಗಾಗಿ ಈ ಸಿನಿಮಾದ ಕೆಲಸವನ್ನು ಸ್ವಲ್ಪವೂ ವಿಳಂಬ ಮಾಡದೇ ಮುಗಿಸಿಕೊಂಡು ಬಿಡಿ’ ಎಂಬ ಸೂಚನೆಯನ್ನು ಕೊಟ್ಟಿದ್ದರು ಎನ್ನಲಾಗಿದೆ. ಅದರಂತೆ, ಫಾರಿನ್ ಲೊಕೇಶನ್ ಸೇರಿದಂತೆ ಎಲ್ಲಾ ಕಡೆಗಳಲ್ಲಿ ದಿ ಡೆವಿಲ್ ಚಿತ್ರದ ಶೂಟಿಂಗ್‌ಅನ್ನು ಸ್ವಲ್ಪವೂ ವಿಳಂಬ ಆಗದಂತೆ ಮಾಡಿ ಮುಗಿಸಲಾಗಿದೆ. ಈ ಮೂಲಕ ನಟ ದರ್ಶನ್ ನಿರ್ಮಾಪಕರಿಗೆ ತಮ್ಮಿಂದ ಆಗಬಹುದಾಗಿದ್ದ ತೊಂದರೆಯನ್ನು ತಪ್ಪಿಸಿದ್ದಾರೆ. ಆದರೆ, ಸ್ವತಃ ತಮ್ಮ ಲೈಫನ್ನು ಈಗ ಕಂಟ್ರೋಲ್‌ಗೆ ತೆಗೆದುಕೊಳ್ಳುವ ಸ್ಥಿತಿಯಲ್ಲಿ ನಟ ದರ್ಶನ್ ಇಲ್ಲ!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.