
ನವದೆಹಲಿ: ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ ತಮಿಳು ಚಿತ್ರ ಕೂಲಿ ವಿಶ್ವಾದ್ಯಂತ ಬಿಡುಗಡೆಗೊಂಡ ಮೊದಲ ದಿನವೇ ಗಲ್ಲಾ ಪೆಟ್ಟಿಗೆಯಲ್ಲಿ 151 ಕೋಟಿ ರು. ಗಳಿಸಿದೆ.
ಇದು ತಮಿಳು ಚಿತ್ರವೊಂದು ಇದುವರೆಗೆ ಗಳಿಸಿದ ಏಕದಿನದ ಅತಿಹೆಚ್ಚು ಮೊತ್ತ ಎಂಬ ದಾಖಲೆ ಸೃಷ್ಟಿಯಾಗಿದೆ. ಲೋಕೇಶ್ ಕನಕರಾಜ್ ನಿರ್ದೇಶನದ ಈ ಸಿನಿಮಾ ಅವರ ನಿರ್ದೇಶನದ ಇತರ ಚಿತ್ರಗಳು ಮಾಡಿದ್ದ ದಾಖಲೆ ಮುರಿದಿದೆ.
‘ಜಗತ್ತಿನಾದ್ಯಂತ ತೆರೆಕಂಡಿರುವ ತಮಿಳು ಸಿನಿಮಾ ಕೂಲಿ ಮೊದಲ ದಿನ 150 ಕೋಟಿ ರು.ಗೂ ಹೆಚ್ಚು ಸಂಗ್ರಹಿಸಿದೆ. ನಟ ರಜನಿಕಾಂತ್ ದಾಖಲೆ ನಿರ್ಮಾತೃರು ಮತ್ತು ದಾಖಲೆ ಮುರಿಯುವವರಾಗಿದ್ದಾರೆ’ ಎಂದು ಚಿತ್ರ ನಿರ್ಮಾಪಕರು ಎಕ್ಸ್‌ನಲ್ಲಿ ಹೇಳಿದ್ದಾರೆ. ಕೂಲಿ ಸಿನಿಮಾ ಗುರುವಾರ ಚಿತ್ರಮಂದಿರಗಳಿಗೆ ಲಗ್ಗೆ ಇಟ್ಟಿದೆ. ಅನೇಕ ತಾರಾ ನಟರು ಚಿತ್ರದಲ್ಲಿದ್ದಾರೆ.
74ನೇ ವಯಸ್ಸಿನಲ್ಲಿಯೂ ತಲೈವಾ ಇಷ್ಟು ಫಿಟ್ ಆಗಿರುವುದರ ಹಿಂದಿನ ಸೀಕ್ರೆಟ್ ರಿವೀಲ್!
ರಜನಿಕಾಂತ್ ಅವರ ಕೂಲಿ (Coolie) ಸಿನಿಮಾ ಆಗಸ್ಟ್ 14 ರಂದು ದೊಡ್ಡ ಪರದೆಯ ಮೇಲೆ ಬಿಡುಗಡೆಯಾಗಿದ್ದು, ಇದು ಮೊದಲ ದಿನದಿಂದಲೇ ಅಂತರ್ಜಾಲದಲ್ಲಿ ಭಾರೀ ಸದ್ದು ಮಾಡುತ್ತಿದೆ. ಎಂದಿನಂತೆ ಮೆಗಾಸ್ಟಾರ್ ಈ ಚಿತ್ರದಲ್ಲೂ ತಮ್ಮ ಪವರ್‌ಫುಲ್ ಆಕ್ಷನ್ ಮೂಲಕ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದ್ದಾರೆ. ಅಂದಹಾಗೆ ಈ ಬಾರಿ ಸೂಪರ್ ಸ್ಟಾರ್ ತಮ್ಮ ಆಕ್ಷನ್‌ನಿಂದಾಗಿ ಮಾತ್ರವಲ್ಲದೆ, ಫಿಟ್ನೆಸ್‌ನಿಂದಲೂ ಸುದ್ದಿಯಲ್ಲಿರುವುದು ಶ್ಲಾಘನೀಯ. ಎಲ್ಲರಿಗೂ ತಿಳಿದಿರುವಂತೆ ರಜನಿಕಾಂತ್ ಚಿತ್ರರಂಗದಲ್ಲಿ 50 ವರ್ಷ ಪೂರೈಸಿದ್ದು, ಇಂದಿಗೂ ಜನರು ಪರದೆಯ ಮೇಲೆ ಅವರ ಶಕ್ತಿ ನೋಡಿ ಆಶ್ಚರ್ಯಪಡುತ್ತಾರೆ. ಆದರೆ ತಲೈವಾ 74 ನೇ ವಯಸ್ಸಿನಲ್ಲಿಯೂ ಸಹ ಹೇಗೆ ಫಿಟ್ ಮತ್ತು ಚೈತನ್ಯಶೀಲರಾಗಿದ್ದಾರೆಂದು ನಿಮಗೆ ತಿಳಿದಿದೆಯೇ?. ಇದಕ್ಕೆ ಕಾರಣ ಅವರ ಕಟ್ಟುನಿಟ್ಟಿನ ವ್ಯಾಯಾಮ ದಿನಚರಿ ಮತ್ತು ಆರೋಗ್ಯವನ್ನು ಕಾಪಾಡಿಕೊಳ್ಳಲು ಅನುಸರಿಸುತ್ತಿರುವ ಆರೋಗ್ಯಕರ ಆಹಾರ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.