ರಾಜಮೌಳಿಗೆ ದರ್ಶನ್ ಸವಾಲ್ !

Published : Jan 04, 2018, 09:08 PM ISTUpdated : Apr 11, 2018, 12:35 PM IST
ರಾಜಮೌಳಿಗೆ ದರ್ಶನ್ ಸವಾಲ್ !

ಸಾರಾಂಶ

ಒಂದು ವರ್ಷ ಪೂರ್ತಿನೂ ಅಲ್ಲ. ಬುಲೆಟ್ ಟ್ರೇನ್ ಸ್ಟೀಡ್​ ನಲ್ಲಿಯೇ ಕನ್ನಡದ ಕುರುಕ್ಷೇತ್ರ ನಿರ್ಮಾಣಗೊಂಡಿದೆ. ಹಾಗಂತ ನಿರ್ಮಾಣದಲ್ಲಿ ಯಾವುದೇ ರಾಜಿಯಿಲ್ಲ. ಅದ್ಕಕೇನೆ ಕನ್ನಡದ ಆ ಸೂಪರ್ ಸ್ಟಾರ್ ಬಾಹುಬಲಿ ಡೈರೆಕ್ಟರ್ ಗೆ ಪರೋಕ್ಷವಾಗಿ ಸವಾಲ್ ಹಾಕಿರೋದು ನಮ್ಮ ಚಾಲೆಂಜಿಂಗ್ ಸ್ಟಾರ್.

ಬಾಹುಬಲಿ ಭಾರತೀಯ ಚಿತ್ರರಂಗದ ಅದ್ಬುತ ಸಿನಿಮಾ. ದಕ್ಷಿಣದ ಕಡೆಗೆ ಬಾಲಿವುಡ್ ಮಂದಿ ತಿರುಗಿ ನೋಡುವಂತೆ ಮಾಡಿದ ಖ್ಯಾತಿನೂ ಈ ಚಿತ್ರಕ್ಕೆ ಸಲ್ಲಬೇಕು.ಈ ಶ್ರೇಯ ನಿರ್ದೇಶಕ ರಾಜಮೌಳಿಗೂ ಹೋಗಬೇಕು. ಆದರೆ, ಕನ್ನಡದ ಚಿತ್ರವೊಂದು ಈ ಸಿನಿಮಾಕ್ಕೇನೆ ಸೆಡ್ಡು ಹೊಡೆಯುತ್ತಿದೆ. ಆ ಚಿತ್ರದ ನಾಯಕ ನಾವ್ ಏನೂ ಕಮ್ಮಿಯಿಲ್ಲ. ನೀವೂ ಐದು ವರ್ಷ ತೆಗೆದುಕೊಂಡಿದ್ದೀರಿ. ನಾವ್ ಒಂದ್ ವರ್ಷದಲ್ಲಿ ನಿಮಗಿಂತಲೂ ಅದ್ಭುತ ಸಿನಿಮಾ ಮಾಡಿದ್ದೇವೆ ಅಂತ ಸವಾಲ್ ಹಾಕಿದ್ದಾರೆ. ಕುರುಕ್ಷೇತ್ರ. ಕನ್ನಡದ ಬಹುವೆಚ್ಚದ ಸಿನಿಮಾ.ಬಾಹುಬಲಿ ಮಟ್ಟಕ್ಕೇನೆ ರೆಡಿಯಾಗುತ್ತಿದೆ.ಗ್ರೀನ್ ಮ್ಯಾಟ್'ನಲ್ಲಿ ಚಿತ್ರೀಕರಣಗೊಂಡು ರಂಗೇರಿಸುತ್ತಿದೆ.

ಬಾಹುಬಲಿ ನಿರ್ಮಿಸಲು ಸತತ 5 ವರ್ಷ ಶ್ರಮ : ಕುರುಕ್ಷೇತ್ರ ಇಡೀ ಸಿನಿಮಾ ಮುಗಿಸೋಕೆ 8 ತಿಂಗಳಷ್ಟೆ

ಬಾಹುಬಲಿ ಭಾರತೀಯ ಚಿತ್ರರಂಗದಲ್ಲೆ ಅತಿ ಹೆಚ್ಚು ಗಳಿಕೆ ಕಂಡ ಅತಿದೊಡ್ಡ ದಾಖಲೆಯ ಸಿನಿಮಾ. ಆದರೆ ಈ ಬಾಹುಬಲಿಗೆ ಸೆಡ್ಡು ಹೋಡೆ ಥರ ಕನ್ನಡದ ಕುರುಕ್ಷೇತ್ರ ನಿರ್ಮಾಣ ಆಗ್ತಿದೆ. ಈಗ ಬಹುತೇಕ ಶೂಟಿಂಗ್ ಕೂಢ ಪೂರ್ಣಗೊಂಡಿದೆ. ಆದರೆ, ಈ ಚಿತ್ರ ತೆಗೆದುಕೊಂಡ ಅವಧಿ 5 ವರ್ಷ ಅಲ್ಲ. ಒಂದು ವರ್ಷ ಪೂರ್ತಿನೂ ಅಲ್ಲ. ಬುಲೆಟ್ ಟ್ರೇನ್ ಸ್ಟೀಡ್​ ನಲ್ಲಿಯೇ ಕನ್ನಡದ ಕುರುಕ್ಷೇತ್ರ ನಿರ್ಮಾಣಗೊಂಡಿದೆ. ಹಾಗಂತ ನಿರ್ಮಾಣದಲ್ಲಿ ಯಾವುದೇ ರಾಜಿಯಿಲ್ಲ. ಅದ್ಕಕೇನೆ ಕನ್ನಡದ ಆ ಸೂಪರ್ ಸ್ಟಾರ್ ಬಾಹುಬಲಿ ಡೈರೆಕ್ಟರ್ ಗೆ ಪರೋಕ್ಷವಾಗಿ ಸವಾಲ್ ಹಾಕಿರೋದು ನಮ್ಮ ಚಾಲೆಂಜಿಂಗ್ ಸ್ಟಾರ್. ಹೀಗೆ ದರ್ಶನ್ ತೊಡೆ ತಟ್ಟಿದ್ದು  ಕುರುಕ್ಷೇತ್ರದ ಸೆಟ್ ನಲ್ಲಿಯೇ ಕುಳಿತು. ಬಾಹುಬಲಿ ಸೆಟ್ ಪಕ್ಕದಲ್ಲಿಯೇ ನಿಂತು. ಅನ್ನೋದು ವಿಶೇಷ.

ದರ್ಶನ್ ಕುರುಕ್ಷೇತ್ರದ ಬಗ್ಗೆ ತುಂಬಾ ಕಾನ್ಫಿಡಂಟ್ ಆಗಿದ್ದಾರೆ. ಜಗತ್ತಿನ ಎಲ್ಲ ಮೀಡಿಯಾಗಳು ಬಾಹುಬಲಿ ಬಾಹುಬಲಿ ಅಂದಿವೆ. ಆದರೆ, ಬಾಹುಬಲಿ ಚಿತ್ರ ತಂಡ ಐದು ವರ್ಷ ಏನ್ ಮಾಡಿದೆ. ಪಕ್ಕದಲ್ಲಿಯೇ ಸೆಟ್ ಇದೆ. ಹೋಗಿ ನೋಡಿ ಅನ್ನೋದನ್ನ ನೇರವಾಗಿಯೇ ಹೇಳ್ತಾರೆ. ಹಾಗಂತ ಹೇಳೋ ದರ್ಶನ್ ನಾವ್ ಏನೂ ಕಮ್ಮಿಯಿಲ್ಲ. ನಮ್ಮ ಕುರುಕ್ಷೇತ್ರ ಕೂಡ ಬಾಹುಬಲಿಗಿಂತಲೂ ದೊಡ್ಡ ಮಟ್ಟದ್ಲಲಿಯೇ ಇದೆ ಅನ್ನೋ ಅರ್ಥದಲ್ಲಿಯೇ ಹೇಳಿ ಬಿಡ್ತಾರೆ.

ಒಮ್ಮೆ ದರ್ಶನ್ ಹೇಳೋ ಮಾತ್ ಕೇಳಿದ್ರೆ ಇದು ನಿಜವೇ ಅನಿಸುತ್ತದೆ. ಕುರುಕ್ಷೇತ್ರ ಚಿತ್ರದ ಸೆಟ್ ಪಕ್ಕದಲ್ಲಿಯೇ ಇರೋ ಬಾಹುಬಲಿ ಸೆಟ್ ಗೆ ಹೋದ್ರೆ ದರ್ಶನ್ ಮಾತು ಹೌದಲ್ವಾ ಅನಿಸುತ್ತದೆ. ಆದರೆ, ಕುರುಕ್ಷೇತ್ರ ಚಿತ್ರದ ಶೂಟಿಂಗ್ ಪ್ಲಾನ್ ನೋಡಿದ್ರೆ ಮತ್ತೆ ಅದೇ ಬಾಹುಬಲಿ ಚಿತ್ರ ನೆನಪಿಗೆ ಬರ್ತದೆ.

ಏನೇ ಇರಲಿ. ಹೈದ್ರಾಬಾದ್ ನ ರಾಮೋಜಿ ರಾವ್ ಸ್ಟುಡಿಯೋದಲ್ಲಿಯೇ ಈ ಎರಡೂ ಚಿತ್ರದ ಸೆಟ್'ಗಳಿವೆ. ಗ್ರೀನ್ ಮ್ಯಾಟ್ ನಲ್ಲಿಯೇ ಕುರುಕ್ಷೇತ್ರ ಚಿತ್ರದ ಯುದ್ಧ ಸನ್ನಿವೇಶ ಮತ್ತು ಹಾಡನ್ನ ಚಿತ್ರೀಕರಿಸಲಾಗಿದೆ.ಅಷ್ಟೇ ಅಲ್ಲ, 2ಡಿ ಮತ್ತು 3ಡಿ ಯಲ್ಲೂ ಏಕಕಾಲಕ್ಕೆ ಕುರುಕ್ಷೇತ್ರ ತೆಗೆಯಲಾಗಿದೆ. ಮುನಿರತ್ನ ಬಾಹುಬಲಿ ರೇಂಜಿಗೆ ಕುರುಕ್ಷೇತ್ರ ಸಿನಿಮಾ ನಿರ್ಮಿಸಿದ್ದಾರಾ? ನಾಗಣ್ಣ ರಾಜಮೌಳಿಯನ್ನೂ ಮೀರಿಸುವ ಮೇಕಿಂಗ್ ಮಾಡಿದ್ದಾರಾ? ಸ್ವಲ್ಪ ತಾಳಿ ಮಾರ್ಚ್ 09 ಇಲ್ಲವೇ 10ನೇ ತಾರೀಖು ಸಿನಿಮಾ ಕೂಡ ರಿಲೀಸ್ ಆಗುತ್ತಿದೆ. ಆಗಲೆ ನಿಮ್ಮೆಲ್ಲ ಪ್ರಶ್ನೆಗಳಿಗೂ ಉತ್ತರ ಸಿಗಲಿದೆ. ಕನ್ನಡದಲ್ಲೊಂದು ಇಂಥಾ ಸಿನಿಮಾ ಬರ್ತಿರೋದೆ ಚಿತ್ರರಸಿಕರಿಗೆ ಥ್ರಿಲ್ಲಿಂಗ್ ನ್ಯೂಸ್. ಇನ್ನೂ ಬಾಹುಬಲಿ ಯನ್ನೂ ಮೀರಿಸೊ ಸಿನಿಮಾ ಅಂದಾಗ ಸಹಜವಾಗೆ ಇನ್ನಷ್ಟು ನಿರೀಕ್ಷೆ ಹೆಚ್ಚಿರೋದಂತೂ ನಿಜ. ಈ ಮಾತಿಗೆ ಈಗ ದರ್ಶನ್ ಓಪನ್ ಚಾಲೆಂಜ್ ಇನ್ನಷ್ಟು ಪುಷ್ಟಿನೀಡಿದೆ

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

BBK 12: ಮುಗ್ಧೆಯೂ ಅಲ್ಲ, ಪಾಪವೂ ಅಲ್ಲ, ಇಷ್ಟು ದ್ವೇಷವೇ?; ಈ ಕೀಳು ಕೆಲಸಕ್ಕೆ ಕರ್ಮ ಬಿಡೋದಿಲ್ಲ Rakshita Shetty
BBK 12: ನೋಡಿದ್ದು, ಕೇಳಿದ್ದು ಸುಳ್ಳಾಗಬಹುದು: ಬಿಗ್‌ಬಾಸ್ ಸೀಸನ್ 12ರಲ್ಲಿ ರೋಚಕ ತಿರುವು