ಲಂಕಾದಲ್ಲಿ ರಣವೀರ್ ಜತೆ ಡಿಪ್ಪಿ ಹುಟ್ಟುಹಬ್ಬ, ಅಲ್ಲೇ ರಿಂಗ್ ಬದಲಿಸಿಕೊಳ್ತಾರಾ?

Published : Jan 04, 2018, 06:14 PM ISTUpdated : Apr 11, 2018, 01:01 PM IST
ಲಂಕಾದಲ್ಲಿ ರಣವೀರ್ ಜತೆ ಡಿಪ್ಪಿ ಹುಟ್ಟುಹಬ್ಬ, ಅಲ್ಲೇ ರಿಂಗ್ ಬದಲಿಸಿಕೊಳ್ತಾರಾ?

ಸಾರಾಂಶ

ಜ.5ರಂದು ದೀಪಿಕಾ ಪಡುಕೋಣೆ ಹುಟ್ಟು ಹಬ್ಬ ಆಚರಿಸಿಕೊಳ್ಳಲ್ಲಿದ್ದು, ಅಂದೇ ರಣವೀರ್ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಳ್ಳಲ್ಲಿದ್ದಾರೆಂದು ಹೇಳಲಾಗುತ್ತಿದೆ.

ಬೆಂಗಳೂರು: ವಿಯೆನ್ನಾದಲ್ಲಿ ಹೊಸ ವರ್ಷ ಆಚರಿಸಿಕೊಂಡ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್, ಅಲ್ಲೀಯೇ ರಿಂಗ್ ಬದಲಿಸಿಕೊಳ್ತಾರೆ ಎಂಬ ಸುದ್ದಿ ಇತ್ತು. ಇದೀಗ ಲಂಕಾದಲ್ಲಿರುವ ಈ ಜೋಡಿ, ಜ.5ಕ್ಕೆ ರಿಂಗ್ ಬದಲಿಸಿಕೊಳ್ತಾರೆ ಎನ್ನಲಾಗುತ್ತಿದೆ.

ಅನುಷ್ಕಾ-ವಿರಾಟ್ ಕೋಹ್ಲಿ ಕದ್ದು ಮುಚ್ಚಿ ಮದುವೆಯಾದಂತೆ ಈ ಜೋಡಿಯೂ ಅಭಿಮಾನಿಗಳಿಗೆ ದಿಢೀರ್ ಮದುವೆ ಸುದ್ದಿಯೊಂದನ್ನು ನೀಡುತ್ತಾರಂತೆ. ನಾಳೆ ದೀಪಿಕಾ 32ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದು, ಈ ಸಂದರ್ಭದಲ್ಲಿಯೇ ನಿಶ್ಚಿತಾರ್ಥವನ್ನೂ ಮಾಡಿಕೊಳ್ಳಲ್ಲಿದ್ದಾರೆಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ವಿಪರೀತ ಹರಿದಾಡುತ್ತಿದೆ.

ಈ ಜೋಡಿಯನ್ನು ಗುರುತಿಸುವ ಮಂದಿ ಲಂಕಾದಲ್ಲಿಯೂ ಇದ್ದು, ಇವರಿಬ್ಬರ ಖಾಸಗೀತನಕ್ಕೆ ಧಕ್ಕೆಯಾಗುವಂತೆ ಮಾಡುವ ಸಾಧ್ಯತೆ ಇಲ್ಲವೆಂದು, ಈ ಜೋಡಿ ಲಂಕಾಗೆ ತೆರಳಿದೆಯಂತೆ.

ಈ ಜೋಡಿ ನಟಿಸಿದ ಪದ್ಮಾವತಿ ಬಿಡುಗಡೆಯಾಗುವ ಹಂತದಲ್ಲಿದ್ದು, ವಿವಾಧ ಭುಗಿಲೆದ್ದ ಕಾರಣ ಚಿತ್ರ ಬಿಡುಗಡೆ ದಿನಾಂಕವನ್ನು ಮುಂದೂಡಲಾಗಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

BBK 12: ಮುಗ್ಧೆಯೂ ಅಲ್ಲ, ಪಾಪವೂ ಅಲ್ಲ, ಇಷ್ಟು ದ್ವೇಷವೇ?; ಈ ಕೀಳು ಕೆಲಸಕ್ಕೆ ಕರ್ಮ ಬಿಡೋದಿಲ್ಲ Rakshita Shetty
BBK 12: ನೋಡಿದ್ದು, ಕೇಳಿದ್ದು ಸುಳ್ಳಾಗಬಹುದು: ಬಿಗ್‌ಬಾಸ್ ಸೀಸನ್ 12ರಲ್ಲಿ ರೋಚಕ ತಿರುವು