
ಬೆಂಗಳೂರು: ನಟ ದರ್ಶನ್ ಜೈಲುವಾಸ ಯಾವಾಗ ಮುಗಿಯುತ್ತೋ ಗೊತ್ತಿಲ್ಲ. ದಾಸ ಕಂಬಿ ಹಿಂದೆ ನಿಂತು ದಿನ ಕಳೆಯುತ್ತಾ ಇದ್ದಾರೆ. ಆ ಕಡೆ ದರ್ಶನ್ ಜೈಲಿನಲ್ಲಿದ್ರೆ ಈ ಕಡೆ ಕನ್ನಡದ ಸಿನಿಮಾಗಳಲ್ಲೂ ದಾಸನ ಜೈಲುವಾಸ ಕಥೆಗಳು ಸಿನಿಮಾ ಟಚ್ ಪಡೆಯುತ್ತಿವೆ. ಡಾಲಿಯ ಜೆಸಿ ಸಿನಿಮಾ ದಚ್ಚು ಜೈಲು ದಿನಗಳನ್ನ ನೆನಪಿಸ್ತಾ ಇದೆ. ಹಾಗಾದ್ರೆ ದರ್ಶನ್ ಜೈಲು ವಾಸಕ್ಕೂ ಡಾಲಿ ಧನಂಜಯ್ ಅವರ ಜೆಸಿ ಸಿನಿಮಾಗೂ ಸಂಬಂಧ ಇದೆಯಾ? ಈಗ್ಯಾಕೆ ಈ ಚರ್ಚೆ ಆಗ್ತಿದೆ ಅಂತ ನೋಡೋಣ ಈ ಕುತೂಹಲದ ಕಹಾನಿಯಲ್ಲಿ.
ಜೆಸಿ ಈ ಸಿನಿಮಾ ಈಗ ಸ್ಯಾಂಡಲ್ವುಡ್ನಲ್ಲಿ ಭಾರಿ ಸೌಂಡ್ ಮಾಡುತ್ತಿದೆ. ಈ ಸಿನಿಮಾ ನಿರ್ಮಾಣ ಮಾಡಿರೋದು ನಟ ಡಾಲಿ ಧನಂಜಯ್. ಆದ್ರೆ ಈಗ ಜೆಸಿ ಸಿನಿಮಾ ಮೇಲೆ ಕುತೂಹಲದ ಕಣ್ಣು ಬೀಳೋಕೆ ಕಾರಣ ನಟ ದರ್ಶನ್. ಅಷ್ಟೆ ಅಲ್ಲ ನಟ ದರ್ಶನ್‌ರ ಆ ಒಂದು ಫೋಟೋ. ಯೆಸ್, ವಿಲ್ಸನ್ ಗಾರ್ಡನ್ ನಾಗಾ ಹಾಗೂ ದರ್ಶನ್ ಪರಪ್ಪನ ಅಗ್ರಹಾರದಲ್ಲಿ ಆರಾಮಾಗಿ ಕೂತುಕೊಂಡಿರುವ ಇದೊಂದು ಫೋಟೋ ನಟ ದರ್ಶನ್ ಜೈಲಿನಲ್ಲಿ ಹೇಗಿದ್ದಾರೆ ಅಂತ ಸಾಕ್ಷ್ಯ ಕೊಟ್ಟಿತ್ತು. ಈ ಫೋಟೋದಿಂದ ಜೈಲಿನಲ್ಲಿ ಐಶಾರಾಮಿ ಜೀವನ ಮಾಡಬಹುದು ಅಂತ ಇಡೀ ದೇಶವೇ ನೋಡಿ ದಿಗ್ಭ್ರಮೆಗೊಂಡಿತ್ತು. ಈ ಫೋಟೋ ಹೊರ ಬರುತ್ತಿದ್ದಂತೆ ನಟ ದರ್ಶನ್ ಸೀದಾ ಬಳ್ಳಾರಿ ಜೈಲಿಗೆ ಶಿಫ್ಟ್ ಆದ್ರು. ಈ ಫೋಟೋ ಸೃಷ್ಟಿಸಿದ ಸಂಚಲನ ರಾಜ್ಯದ ಹಲವು ಜೈಲುಗಳಲ್ಲಿ ಅಧಿಕಾರಿಗಳನ್ನ ಹೈ ಅಲರ್ಟ್ ಮಾಡಿತ್ತು. ಇದೀಗ ಇದೇ ಒಂದು ಫೋಟೋ ನಟ ಡಾಲಿ ಧನಂಜಯ್ ನಿರ್ಮಾಣದ ಜೆಸಿ ಸಿನಿಮಾದ ಮೇಲೆ ಎಲ್ಲರ ದೃಷ್ಟಿ ಬೀಳುವಂತೆ ಮಾಡಿದೆ.
ನಟ ದರ್ಶನ್, ಪರಪ್ಪನ ಅಗ್ರಹಾರ ಜೈಲಿನಲ್ಲಿ ರೌಡಿ ಶೀಟರ್ ವಿಲ್ಸನ್ ನಾಗನ ಜೊತೆ ಕೂತು ಕಾಫಿ ಕುಡಿತಾ ಸಿಗರೇಟ್ ಸೇದಿದ್ರು. ಈ ಫೋಟೋ ಹೊರ ಜಗತ್ತಿಗೆ ರಿವಿಲ್ ಆಗಿತ್ತು. ಪರಪ್ಪನ ಅಗ್ರಹಾರ ಜೈಲು ಅವ್ಯವಹಾರಗಳ ತಾಣ ಅನ್ನೋದು ಪಕ್ಕಾ ಆಗಿತ್ತು. ಇಂತದ್ದೇ ಸೇಮ್ ಟು ಸೇಮ್ ಸೀನ್ ಈಗ ಡಾಲಿ ಧನಂಜಯ್ ನಿರ್ಮಾಣದ ಜೆಸಿ ಸಿನಿಮಾದಲ್ಲೂ ಇಟ್ಟಿದ್ದಾರೆ.
ಜೆಸಿ ಸಿನಿಮಾ ಜೈಲಿನಲ್ಲಿ ನಡೆಯೋ ಅವ್ಯವಹಾರ ಕೈದಿಗಳ ದರ್ಬಾರ್ ತೋರಿಸಲಾಗುತ್ತಿದೆ. ರಿಯಾಲಿಟಿಯನ್ನ ರೀಲ್ ಮೇಲೆ ತರುತ್ತಿದ್ದಾರೆ ನಟ ರಾಕ್ಷಸ ಡಾಲಿ ಧನಂಜಯ್. ಡಾಲಿಯ ಈ ಪ್ರಯತ್ನಕ್ಕೆ ಡಾಕ್ಟರ್ ಶಿವರಾಜ್ ಕುಮಾರ್ ಹಾಗು ದರ್ಶನ್‌ರ ಪುಡಾಂಗ್ ಡೈರೆಕ್ಟರ್ ಜೋಗಿ ಪ್ರೇಮ್ ಕೂಡ ಸಾಥ್ ಕೊಟ್ಟಿದ್ದು, ಜೆ.ಸಿ ಟ್ರೈಲರ್ ರಿಲೀಸ್ ಮಾಡಿದ್ದು ಇವರೇ.
ಜೆಸಿ ಅಂದ್ರೆ ಜುಡಿಷಿಯಲ್ ಕಸ್ಟಡಿ. ಅಂದ್ರೆ ನ್ಯಾಯಂಗ ಬಂಧನ. ದರ್ಶನ್ ನ್ಯಾಯಾಂಗ ಬಂಧನದಲ್ಲಿದ್ದಾಗೆ ವಿಲ್ಸನ್ ಗಾರ್ಡನ್ ನಾಗನ ಜೊತೆ ಕೂಡ ಟೇಬಲ್ ಹಾಕಿಕೊಂಡು ಸಿಗರೇಟ್ ಸೇದುತ್ತಾ, ಕಾಫಿ ಕುಡಿದಿದ್ರು. ಈಗ ಜೆಸಿಯಲ್ಲೂ ಸೇಮ್ ಟು ಸೇಮ್ ದೃಶ್ಯಗಳು ಇರೋದ್ರಿಂದ ಸಹಜವಾಗೇ ಸಿನಿಮಾ ಮೇಲೆ ಕುತೂಹಲ ಹೆಚ್ಚಾಗಿದೆ.
ಹಾಗ್ ನೋಡಿದ್ರೆ ಡಾಲಿ ಧನಂಜಯ್ ದರ್ಶನ್ ಜೊತೆಗೂ ಒಡನಾಟ ಇಟ್ಟುಕೊಂಡವರು. ಆದ್ರೆ ಡಾಲಿ ಮದುವೆ ಆಗುವಾಗ ದರ್ಶನ್‌ಗೆ ಆಹ್ವಾನ ಮಾಡಿಲ್ಲ ಅಂತ ಸುದ್ದಿ ಆಗಿದ್ರು. ಮದುವೆಗೆ ದರ್ಶನ್ರನ್ನ ಕರೆಯಲು ಪ್ರಯತ್ನ ಪಟ್ಟೆ ಆದ್ರೆ ಅವರು ಸಿಗಲಿಲ್ಲ ಅಂತ ಡಾಲಿ ಹೇಳಿದ್ರು. ಆದ್ರೆ ಆ ಟೈಮ್ನಲ್ಲಿ ನಟ ದರ್ಶನ್ ಕೊಲೆ ಆರೋಪ ಹೊತ್ತು ಎಲ್ಲೂ ಹೋಗುತ್ತಿರಲಿಲ್ಲ. ಈಗ ಡಾಲಿ ಜೆಸಿ ಸಿನಿಮಾ ವಿಚಾರಕ್ಕೆ ದರ್ಶನ್ ಮತ್ತೆ ಸುದ್ದಿಯಾಗುತ್ತಿದ್ದಾರೆ.
ವಿಜಯ್ ಪಟೆದಾರ್, ಏಷ್ಯಾನೆಟ್ ಸುವರ್ಣ ನ್ಯೂಸ್
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.