
ಮ್ಯಾರೇಜ್ ರೂಮರ್ ಬಗ್ಗೆ ಬಾಯ್ಬಿಟ್ಟ ರಶ್ಮಿಕಾ..!
ಶ್ರೀವಲ್ಲಿ ರಶ್ಮಿಕಾ ಮಂದಣ್ಣ (Rashmika Mandanna) ದಿನ ಎಣಿಸುತ್ತಿದ್ದಾರೆ.. ಅದು ಹಸೆಮಣೆ ಏರಿ ಮದುವಣಗಿತ್ತಿಯಾಗೋಕೆ.. ಆದ್ರೆ ಇದು ನಿಜಾನಾ ಅಥವ ಸುಳ್ಳಾ ಅನ್ನೋದು ಇನ್ನೂ ಆ ಮದುವೆ ಮಾಡಿಸೋ ಪೂಜಾರಿಗೇ ಗೊತ್ತಿಲ್ಲ. ಯಾಕಂದ್ರೆ ರಶ್ಮಿಕಾ ಆಗ್ಲಿ ಮದುವೆ ಆಗೋ ಹುಡುಗ ವಿಜಯ್ (Vijay Deverakonda) ಆಗ್ಲಿ ಎಲ್ಲಿಯೂ ಹೇಳಿಲ್ಲ.
ಆದ್ರೆ.. ಈ ಭಾರಿ ನಿಮ್ ರಶ್ಮು ಸತ್ಯವನ್ನೇ ಹೇಳುತ್ತೇನೆ ಬೇರೇನು ಹೇಳಲ್ಲ ಅಂತ ಮದುವೆ ಬಗ್ಗೆ ಮನ ಬಿಚ್ಚಿ ಮತನಾಡಿದ್ದಾರೆ. ಹಾಗಾದ್ರೆ ಆ ಸತ್ಯ ಏನು..? ನೋಡೋಣ ಬನ್ನಿ..
ಕನ್ನಡ ನಟಿ ರಶ್ಮಿಕಾ ಮಂದಣ್ಣ ಈಗ ಟಾಲಿವುಡ್, ಕಾಲಿವುಡ್ ಮಾತ್ರವಲ್ಲ ಬಾಲಿವುಡ್ ಅಂಗಳದಲ್ಲಿ ಕೂಡ ಕಮಾಲ್ ಮಾಡ್ತಿದ್ದಾರೆ. ಪ್ಯಾನ್ ಇಂಡಿಯಾ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಳ್ತಿದ್ದಾರೆ. ಆದ್ರೆ ರಶ್ಮುಗೆ ಮದುವೆ ವಿಷಯದಲ್ಲಿ ಮಾತ್ರ ಇನ್ನೂ ಸೈ ಎನಿಸಿಕೊಳ್ಳಲಾಗಿಲ್ಲ.
ಗೀತಾ-ಗೋವಿಂದ ಮದುವೆ ನಿಜಾನಾ..? ಕೊನೆಗೂ ಬಾಯ್ ಬಿಟ್ಟ ನಟಿ ರಶ್ಮಿಕಾ..!
ರಶ್ಮಿಕಾ ಮಂದಣ್ಣ ವಿಜಯ್ ದೇವರಕೊಂಡ ಮದುವೆ ನಿಶ್ಚಯ ಆಗಿದೆ. ಮುಂದಿನ ತಿಂಗಳು ರಾಜಸ್ಥಾನದಲ್ಲಿ ಮದುವೆ ನಡೆಯುತ್ತಿದೆ. ಈಗಾಗಲೇ ಗುಟ್ಟಾಗಿ ನಿಶ್ಚಿತಾರ್ಥ ಮಾಡಿಕೊಂಡಾಗಿದೆ. ಆದ್ರೆ ಈ ಬಗ್ಗೆ ರಶ್ಮಿಕಾ-ವಿಜಯ್ ಗೆ ಯಾರು ಎಷ್ಟೇ ಕೇಳಿದ್ರು ತಿಟಿಕ್ ಪಿಟಿಕ್ ಎನ್ನುತ್ತಿಲ್ಲ. ನಗುವಿನಲ್ಲೇ ಎಲ್ಲಾ ಉತ್ತರ ಕೊಡುತ್ತಿದ್ದಾರೆ. ಆದ್ರೆ ಈಗ ರಶ್ಮಿಕಾ ತನ್ನ ಮ್ಯಾರೇಜ್ ರೂಮರ್ ಬಗ್ಗೆ ಬಾಯ್ ಬಿಟ್ಟು ಮಾತನಾಡಿದ್ದಾರೆ.
ರಶ್ಮಿಕಾ ಮ್ಯಾರೇಜ್ ಭಾರತೀಯ ಚಿತ್ರರಂಗದ ಭಾರಿ ಚರ್ಚಾ ವಿಷಯ. ರಶ್ಮಿಕಾ ಎಲ್ಲೇ ಹೋದ್ರು ವಿಜಯ್ನ ಮದುವೆ ಆಗೋದು ನಿಜಾನಾ.? ಅನ್ನೋ ಪ್ರಶ್ನೆ ಇದ್ದೇ ಇರುತ್ತೆ. ಆದ್ರೆ ಅದಕ್ಕೆಲ್ಲಾ ಹಾರಿಕೆ ಉತ್ತರ ಕೊಡುತ್ತಿದ್ದ ರಶ್ಮಿಕಾಗೆ ಆ್ಯಂಕರ್ ಒಬ್ರು ಇವತ್ತು ಸತ್ಯ ಹೇಳಬೇಕು ಅಂತ ಪಟ್ಟು ಹಿಡಿದು ಕೇಳಿದ್ದಾರೆ. ಇದಕ್ಕೆ ಉತ್ತರ ಕೊಟ್ಟಿರೋ ಶ್ರೀವಲ್ಲಿ "ಸತ್ಯ ಏನಂದ್ರೆ, 4 ವರ್ಷಗಳಿಂದ ಇಂತಹ ವದಂತಿ ಹರಿದಾಡ್ತಿದೆ. ಆದರೆ ಯಾವಾಗ ಮಾತನಾಡಬೇಕೋ ಆಗ ನಾನು ಮಾತನಾಡುತ್ತೇನೆ" ಎಂದು ರಶ್ಮಿಕಾ ನಗುತ್ತಾ ಉತ್ತರ ಕೊಟ್ಟಿದ್ದಾರೆ. ರಶ್ಮಿಕಾ ನಗುವಿನಲ್ಲೇ ಎಲ್ಲ ಉತ್ತರವೂ ಇದೆ ಅಂತ ಜನ ಕಮೆಂಟ್ ಮಾಡುತ್ತಿದ್ದಾರೆ.
ರಶ್ಮಿಕಾ ಮಂದಣ್ಣ ವಿಜಯ್ ಇತ್ತೀಚೆಗೆ ಗುಟ್ಟಾಗೇನೂ ಓಡಾಡ್ತಿಲ್ಲ. ಇಬ್ಬರು ಹೊಸ ವರ್ಷಾಚರಣೆಗೂ ವಿದೇಶದಲ್ಲಿದ್ರು. ವಿಜಯ್ ಕುಟುಂಬದ ಜೊತೆ ಬಂದಿದ್ರೆ, ರಶ್ಮಿಕಾ ಫ್ರೆಂಡ್ಸ್ ಜೊತೆ ಹೋಗಿದ್ರು. ಅಲ್ಲೇ ಬ್ಯಾಚ್ಯೂಲರ್ ಪಾರ್ಟಿ ಕೂಡ ಮಾಡಿದ್ರು. ಇದೆಲ್ಲವನ್ನ ನೋಡಿದ್ಮೇಲೆ ಫೆವ್ರವರಿ 26ಕ್ಕೆ ಗೀತಾ ಗೋವಿಂದ ಕಲ್ಯಾಣೋತ್ಸವ ನಿಜ ಅಂತ ಎಲ್ಲರೂ ನಂಬಿದ್ದಾರೆ. ಆದ್ರೆ ಶ್ರೀವಲ್ಲಿ ಮಾತ್ರ ಇನ್ನೂ ಆ ಕುತೂಹಲವನ್ನ ಹಾಗೇ ಹಿಡಿದಿಟ್ಟಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.