
ದರ್ಶನ್ ಅಭಿಮಾನಿಗಳು ‘ಕುರುಕ್ಷೇತ್ರವೂ ನಮ್ದೇ, ಕೆಂಪೇಗೌಡ 2 ಚಿತ್ರವೂ ನಮ್ಮದೇ’ ಎಂದು ಅಭಿಮಾನ ಹಾಗೂ ಅಭಿಯಾನ ಶುರು ಮಾಡಿದ್ದಾರೆ. ಬೆಳಗ್ಗೆ ‘ಮುನಿರತ್ನ ಕುರುಕ್ಷೇತ್ರ ನೋಡುತ್ತೇವೆ, ಮಧ್ಯಾಹ್ನ ‘ಕೆಂಪೇಗೌಡ 2’ ಚಿತ್ರ ನೋಡುತ್ತೇವೆ’ ಎಂದಿದ್ದಾರೆ. ಎರಡೂ ಚಿತ್ರಗಳೂ ಅಕ್ಕಪಕ್ಕದಲ್ಲೇ ಇವೆ. ನರ್ತಕಿ ಚಿತ್ರಮಂದಿರಕ್ಕೆ ಬರುವ ದರ್ಶನ್ ಅಭಿಮಾನಿಗಳು ಸಂತೋಷ್ ಚಿತ್ರಮಂದಿರಕ್ಕೂ ಬಂದು ಕೋಮಲ್ ಚಿತ್ರವನ್ನು ನೋಡುತ್ತಾರೆ’ ಎಂದು ಟ್ವೀಟ್ ಮಾಡಿ ಕೋಮಲ್‌ಗೆ ಬೆಂಬಲ ಸೂಚಿಸಿದ್ದಾರೆ.
ಫುಟ್‌ಪಾತ್ ಮೇಲೆ ಹೋಗುತ್ತಿದ್ದ ಕೋಮಲ್‌ಗೆ ಗುದ್ದಿದ ಕುರುಕ್ಷೇತ್ರ ?
ತಮ್ಮನ ಕಷ್ಟಕ್ಕೆ ಮರುಗಿದ ಜಗ್ಗೇಶ್
ಮುನಿರತ್ನ ಕುರುಕ್ಷೇತ್ರ ಆ.2ಕ್ಕೆ ಬದಲಾಗಿ ಆ.9ಕ್ಕೆ ಬಿಡುಗಡೆ ದಿನಾಂಕವನ್ನು ಬದಲಿಸಿಕೊಂಡಿತು. ಮೊದಲೇ ಕೋಮಲ್ ಅವರು ತಮ್ಮ ‘ಕೆಂಪೇಗೌಡ 2’ ಚಿತ್ರವನ್ನೂ ಆ.9ರಂದೇ ತೆರೆಗೆ ತರುವುದಕ್ಕೆ ಎಲ್ಲ ತಯಾರಿ ಮಾಡಿಕೊಂಡಿದ್ದರು. ಇದ್ದಕ್ಕಿದಂತೆ ಕುರುಕ್ಷೇತ್ರದ ಬಿಡುಗಡೆಯ ದಿನಾಂಕ ಬದಲಾಗಿದ್ದನ್ನು ನೋಡಿದ ಜಗ್ಗೇಶ್ ಅವರು ‘ಒಂದೇ ಚಿತ್ರಕ್ಕಾಗಿ ಮೂರು ವರ್ಷ ಪ್ರಾಮಾಣಿಕವಾಗಿ ದುಡಿದ್ದಾನೆ. ತನ್ನ ಅಯುಷ್ಯವನ್ನು ಒಂದೇ ಸಿನಿಮಾ ಮೇಲೆ ಹಾಕಿದ್ದಾನೆ ಕೋಮಲ್. ಇದು ಸ್ವಂತ ಕತೆಯ ಚಿತ್ರ. ಅವನು ‘ಕೆಂಪೇಗೌಡ 2’ ಚಿತ್ರಕ್ಕಾಗಿ ಎಷ್ಟುಕಷ್ಟಪಟ್ಟಿದ್ದಾನೆಂದು ನನಗೆ ಗೊತ್ತಿದೆ’ ಎಂದು ತಮ್ಮ ಸೋದರನ ಚಿತ್ರದ ಮುಂದೆ ‘ಮುನಿರತ್ನ ಕುರುಕ್ಷೇತ್ರ’ ಬರುತ್ತಿರುವುದನ್ನು ಪರೋಕ್ಷವಾಗಿ ಹೇಳುತ್ತ ಭಾವುಕರಾಗಿ ಟ್ವೀಟ್ ಮಾಡಿದ್ದರು. ಈ ನಡುವೆ ದರ್ಶನ್ ವರ್ಸಸ್ ಕೋಮಲ್, ಕುರುಕ್ಷೇತ್ರ ವರ್ಸಸ್ ಕೆಂಪೇಗೌಡ 2 ಎನ್ನುವಂತೆ ಸಾಮಾಜಿಕ ಜಾಲತಾಣಗಳಲ್ಲಿ ಬಿಂಬಿಸಲಾಯಿತು.
ನಾನು ದರ್ಶನ್ ಅವರ ಸಾಕಷ್ಟುಚಿತ್ರಗಳಲ್ಲಿ ನಟಿಸಿದ್ದೇನೆ. ಅವರ ಮತ್ತು ಅಭಿಮಾನಿಗಳ ಮೇಲೆ ನನಗೆ ಬೇಸರ ಇಲ್ಲ. ಆ.9ರಂದೇ ಕುರುಕ್ಷೇತ್ರ ಬರುತ್ತದೆ ಎಂದು ಮೊದಲೇ ಗೊತ್ತಿದ್ದರೇ ನನ್ನ ಚಿತ್ರ ಬಿಡುಗಡೆಗೆ ಮಾಡುತ್ತಿರಲಿಲ್ಲ. ನಾನು ಎಲ್ಲ ತಯಾರಿ ಮುಗಿಸಿಕೊಂಡ ಮೇಲೆ ಅವರು ದಿನಾಂಕ ಬದಲಾಯಿಸಿಕೊಂಡಿದ್ದಾರೆ. ಈಗ ದರ್ಶನ್ ಅವರ ಅಭಿಮಾನಿಗಳು ನನ್ನ ಚಿತ್ರವನ್ನೂ ನೋಡುತ್ತೇವೆ ಎನ್ನುವ ಮೂಲಕ ನನ್ನ ಬೆಂಬಲಕ್ಕೂ ನಿಂತಿದ್ದಾರೆ. ಅವರಿಗೆ ನಾನು ಚಿರಋುಣಿ- ಕೋಮಲ್, ನಟ
ಬೇಸರ ತೋಡಿಕೊಂಡ ಕೋಮಲ್
ಇದ್ದಕ್ಕಿದಂತೆ ಕುರುಕ್ಷೇತ್ರ ಬಿಡುಗಡೆಯ ದಿನಾಂಕ ಬದಲಾಯಿಸಿಕೊಂಡಿದ್ದನ್ನು ಕಂಡು, ‘ನಾನಾಗೆ ಹುಡುಕಿಕೊಂಡು ಹೋಗಿ ಅವರ ಗಾಡಿ ಹತ್ರ ಬಿದ್ದಿದ್ರೆ ಅದೂ ನನ್ನ ತಪ್ಪು . ಆದರೆ, ನನ್ನ ಪಾಡಿಗೆ ನಾನು ಫುಟ್ ಪಾತ್‌ನಲ್ಲಿ ನಡ್ಕೊಂಡು ಹೋಗ್ತಿದ್ದೆ. ಅವರಾಗೇ ಬಂದು ಹಿಂದೆಯಿಂದ ಗುದ್ದಿದ್ದಾರೆ. ಆದರೂ ಪರವಾಗಿಲ್ಲ. ಜನರಿಗೆ ಯಾವುದು ಇಷ್ಟವಾಗುತ್ತೋ ಆ ಸಿನಿಮಾ ನೋಡುತ್ತಾರೆ. ಅವರ ಸಿನಿಮಾನೆ ಮೊದಲು ನೋಡಲಿ. ನಂತರ ನನ್ನ ಸಿನಿಮಾ ನೋಡಲಿ. ಈ ಬಗ್ಗೆ ದೊಡ್ಡವರ ಜೊತೆ ಮಾತನಾಡಲು, ಅವರಿಗೆ ಹೇಳುವಷ್ಟುನಾವು ಬೆಳೆದಿಲ್ಲ. ಹೋಗಿ ಹೇಳಿದ್ರು ಕೇಳುವಂತ ಪರಿಸ್ಥಿತಿಯೂ ಇಲ್ಲ’ ಎಂದು ಕೋಮಲ್ ಬೇಸರ ತೋಡಿಕೊಂಡಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.