ಮಾಜಿ ಸಚಿವೆ ಉಮಾಶ್ರೀಗೆ ಮತ್ತೊಂದು ಮಹತ್ತರ ಗೌರವ

Published : Jul 30, 2019, 08:56 AM IST
ಮಾಜಿ ಸಚಿವೆ ಉಮಾಶ್ರೀಗೆ ಮತ್ತೊಂದು ಮಹತ್ತರ ಗೌರವ

ಸಾರಾಂಶ

ಮಾಜಿ ಸಚಿವ, ರಂಗಭೂಮಿ ಹಾಗೂ ಸಿನಿಮಾ ಕಲಾವಿದೆ ಉಮಾಶ್ರೀ ಅವರಿಗೆ ಮತ್ತೊಂದು ಗೌರವ ದೊರಕಿದೆ. ಅವರಿಗೆ ಜೀವಮಾನ ಸಾಧನೆ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ. 

ಬೆಂಗಳೂರು [ಜು.30]:  ಕರ್ನಾಟಕ ನಾಟಕ ಅಕಾಡೆಮಿಯ 2019-20ನೇ ಸಾಲಿನ ಜೀವಮಾನದ ಗೌರವ ಪ್ರಶಸ್ತಿ ಮತ್ತು ಅಕಾಡೆಮಿ ವಾರ್ಷಿಕ ರಂಗ ಪ್ರಶಸ್ತಿ ಪ್ರಕಟಗೊಂಡಿದ್ದು, ಜೀವಮಾನದ ಗೌರವ ಪ್ರಶಸ್ತಿಗೆ ಹಿರಿಯ ರಂಗಭೂಮಿ ಕಲಾವಿದೆ, ಮಾಜಿ ಸಚಿವೆ ಉಮಾಶ್ರೀ ಅವರನ್ನು ಆಯ್ಕೆ ಮಾಡಲಾಗಿದೆ.

ಅಕಾಡೆಮಿ ವಾರ್ಷಿಕ ರಂಗ ಪ್ರಶಸ್ತಿಗೆ ಧರ್ಮೇಂದ್ರ ಅರಸು (ಬೆಂಗಳೂರು), ಗಣೇಶ್‌ ಶೆಣೈ (ಬೆಂಗಳೂರು), ಅಕ್ಕ ಹನುಮಂತಯ್ಯ (ತುಮಕೂರು), ಗ್ಯಾರಂಟಿ ರಾಮಣ್ಣ (ಹಾಸನ), ನಾಗಪ್ಪ ಬಳೆ (ರಾಯಚೂರು), ಪ್ರಭಾಕರ ಕುಲಕರ್ಣಿ (ಬಾಗಲಕೋಟೆ), ಗುರುಬಸಪ್ಪ ಕಲ್ಲಪ್ಪ ಸಜ್ಜನ್‌ (ವಿಜಯಪುರ), ಗೀತಾ ಸುರತ್ಕಲ್‌ (ಮಂಗಳೂರು), ಲಕ್ಷ್ಮೀಪತಿ ಕೋಲಾರ (ಕೋಲಾರ), ಸಣ್ಣಪ್ಪ ಕೊಡಗಳ್ಳಿ (ಮಂಡ್ಯ), ರಾಜಶೇಖರ ಶೇಟ್‌ (ಉಡುಪಿ), ಎಸ್‌.ತಿಪ್ಪೇಸ್ವಾಮಿ (ಚಳ್ಳಕೆರೆ), ಕೊಟ್ರಪ್ಪ ಚನ್ನಪ್ಪ ಕೊಟ್ರಪ್ಪನವರ್‌ (ಹಾವೇರಿ), ಬಸವರಾಜ ಬಸವಣ್ಣೆಪ್ಪ ಕಡ್ಲೆಣ್ಣವರ (ಧಾರವಾಡ), ಎನ್‌.ಮಂಜಮ್ಮ ಗುಬ್ಬಿ (ಗದಗ), ಅರುಣ್‌ ಸಾಗರ್‌ (ಬೆಂಗಳೂರು), ಎಚ್‌.ಎಸ್‌.ಪ್ರಸನ್ನ (ಸಾಗರ), ಈಶ್ವರಪ್ಪ ಫರ್ಹಾತಾಬಾದ್‌ (ಕಲಬುರಗಿ), ವೆಂಕಟೇಶ್‌ (ಬೆಂಗಳೂರು), ಉಮೇಶ್‌ ಎಂ.ಸಾಲಿಯಾನ (ಕಾಸರಗೋಡು), ಕೆ.ಎಂ.ನಾಗರಾಜು (ಹೆಗ್ಗೋಡು), ವೆಂಕಟೇಶಮೂರ್ತಿ (ಚಿಕ್ಕನಾಯಕನಹಳ್ಳಿ), ಜಯಕುಮಾರ್‌ ಕೊಡಗನೂರು (ದಾವಣಗೆರೆ), ಮಾ.ಬ.ಸೋಮಣ್ಣ (ಬಳ್ಳಾರಿ) ಮತ್ತು ವಿಜಯಕುಮಾರ್‌ ಜಿತೂರಿ (ಗದಗ) ಅವರನ್ನು ಆಯ್ಕೆ ಮಾಡಲಾಗಿದೆ.

ಅಕಾಡೆಮಿಯ ಕಲ್ಚರ್‌್ಡ ಕಮೆಡಿಯನ್‌ ಕೆ.ಹಿರಣ್ಣಯ್ಯ ದತ್ತಿ ಪುರಸ್ಕಾರಕ್ಕೆ ವಿಜಯಪುರದ ವೃತ್ತಿ ರಂಗಭೂಮಿ ಕಲಾವಿದ ಲಿಂಗರಾಜ ದಂಡಿನ ಕಲ್ಲೂರು, ನಟರತ್ನ ಚಿಂದೋಡಿ ವೀರಪ್ಪನವರ ದತ್ತಿ ಪ್ರಶಸ್ತಿಗೆ ಕಲಬುರಗಿಯ ಶಂಕರ ಹಿಪ್ಪರಗಿ, ಪದ್ಮಶ್ರೀ ಚಿಂದೋಡಿ ಲೀಲಾ ದತ್ತಿ ಪ್ರಶಸ್ತಿಗೆ ಹುಬ್ಬಳ್ಳಿಯ ಅನ್ನಪೂರ್ಣ ಹೊಸಮನಿ ಮತ್ತು ಅಕಾಡೆಮಿಯ ಕೆ.ರಾಮಚಂದ್ರಯ್ಯ ದತ್ತಿ ಪ್ರಶಸ್ತಿಗೆ ಬೆಂಗಳೂರಿನ ಮಾ.ಭಾಸ್ಕರ್‌ ಅವರನ್ನು ಆಯ್ಕೆ ಮಾಡಲಾಗಿದೆ.

ಹೀಗೆ ಒಟ್ಟು 25 ವಾರ್ಷಿಕ ಪ್ರಶಸ್ತಿ ಹಾಗೂ ನಾಲ್ಕು ಅಕಾಡೆಮಿ ದತ್ತಿ ಪ್ರಶಸ್ತಿಗೆ ಕಲಾವಿದರನ್ನು ಆಯ್ಕೆ ಮಾಡಲಾಗಿದೆ. ಜೀವಮಾನ ಸಾಧನೆ ಪ್ರಶಸ್ತಿಯು 50 ಸಾವಿರ ರು.ನಗದು, ವಾರ್ಷಿಕ ರಂಗ ಪ್ರಶಸ್ತಿಯು 25 ಸಾವಿರ ರು.ನಗದು ಹಾಗೂ ದತ್ತಿ ಪ್ರಶಸ್ತಿಗಳು ತಲಾ 5 ಸಾವಿರ ರು.ನಗದು ಪ್ರಶಸ್ತಿಯನ್ನು ಒಳಗೊಂಡಿವೆ. ಪ್ರಶಸ್ತಿ ಪ್ರದಾನ ಸಮಾರಂಭವು ಈ ಬಾರಿ ಬೆಂಗಳೂರಿನಲ್ಲಿ ನಡೆಯಲಿದ್ದು, ಶೀಘ್ರವೇ ದಿನಾಂಕ ಪ್ರಕಟಿಸುವುದಾಗಿ ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ ಜೆ.ಲೋಕೇಶ್‌ ತಿಳಿಸಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Bigg Boss ಗಿಲ್ಲಿ ಬಗ್ಗೆ ನಿಮ್ಗೆ ಗೊತ್ತಿಲ್ಲ, ರಘು ಚಪಾತಿ ಕೊಡದ ಕಾರಣ ನಾನ್​ ಹೇಳ್ತೀನಿ ಕೇಳಿ' ಎಂದ ಅಭಿಷೇಕ್
ಹೆಂಡ್ತಿಯನ್ನು ಹೇಗೆ ನೋಡಿಕೊಳ್ಳಬೇಕು? ಬೆಸ್ಟ್​ ಪತಿಯಾಗಲು ಮಾಳುಗೆ Bigg Boss ರಕ್ಷಿತಾ ಶೆಟ್ಟಿ ಏನೆಲ್ಲಾ ಟಿಪ್ಸ್​ ಕೊಟ್ರು ನೋಡಿ!